ದೀಪಾವಳಿಗೆ ಚಿನ್ನದ ದರ ಢಂ ಢಮಾರ್

ಹಿಂದೂಗಳಿಗೆ ಪವಿತ್ರವಾಗಿರುವ ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಚಿನ್ನದ ಖರೀದಿ ತುಸು ಜೋರಾಗಿಯೇ ನಡೆಯುತ್ತದೆ. ಇದನ್ನು ಮನಗಂಡು ವ್ಯಾಪಾರಸ್ಥರು ಚಿನ್ನದ ಬೆಲೆಯನ್ನು ದಿಢೀರನೇ ಏರಿಸಿದ್ದಾರೆ. ಜತೆಗೆ ಬೆಳ್ಳಿಯ ಬೆಲೆಯೂ ಏರಿದೆ.
ಕಳೆದ ವಾರಾಂತ್ಯ ಚಿನ್ನದ ಬೆಲೆ 31,650 ರೂ. ಇತ್ತು. ಅದೀಗ 32,000 ರೂ ತಲುಪಿದೆ. ಇತ್ತೀಚೆಗೆ ಕೊಂಚ ತಗ್ಗಿದ್ದ ಬೆಳ್ಳಿಯ ಬೆಲೆ 62,000 ರೂ. ಗೆ ತಲುಪಿ, ಈ ಹಿಂದಿನ ಬೆಲೆಯಲ್ಲಿ ಸ್ಥಿರವಾಗಿದೆ. 2 ತಿಂಗಳ ಹಿಂದೆ ಚಿನ್ನದ ಬೆಲೆ 32,000 ರೂ ದಾಟಿತ್ತು.
ಅಮೆರಿಕದಲ್ಲಿ ಆರ್ಥಿಕ ಚೈತನ್ಯಕ್ಕೆ ಪೂರಕವಾದ ವಾತಾವರಣ ಗೋಚರವಾಗಿರುವುದರಿಂದ ಹೂಡಿಕೆದಾರರು ಚಿನ್ನದ ವ್ಯಾಪಾರದಲ್ಲಿ ತೊಡಗಿದ್ದಾರೆ. ಹಾಗಾಗಿ, ಮಾರಾಟದ ಸರಕಾಗಿ ಚಿನ್ನದ ಬೆಲೆಯು ಏರುಗತಿಯಲ್ಲಿದೆ.












Click it and Unblock the Notifications