ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಲ್ಕೊಂಡಾದ 76 ಕ್ಯಾರಟ್ ವಜ್ರ ಮಾರಾಟಕ್ಕಿದೆ

By Srinath
|
Google Oneindia Kannada News

india-made-76-carat-golconda-diamond-london-auction
ಲಂಡನ್‌, ನ.9: ವಜ್ರ ಖರೀದಿಸುವ ಮನಸು ಇದೆಯಾ? ಅದೂ 76 ಕ್ಯಾರಟ್ ವಜ್ರ ಮಾರಾಟಕ್ಕಿದೆ. ಬೆಲೆ ಮಾತ್ರ 15 ದಶಲಕ್ಷ ಡಾಲರ್ ಅಷ್ಟೇ!

ಹೌದು ಭಾರತೀಯರೇ ಸಿದ್ದಪಡಿಸಿರುವ 400 ವರ್ಷದಷ್ಟು ಹಳೆಯದಾದ ಈ ಚಾರಿತ್ರಿಕ ವಜ್ರ ಮುಂದಿನ ಮಂಗಳವಾರ ಜಿನೀವಾದಲ್ಲಿ ಹರಾಜಿಗೆ ಬರಲಿದೆ. ಆಗ ಅದು ಬರೋಬ್ಬರಿ 15 ದಶಲಕ್ಷ ಡಾಲರಿಗೆ (8,15,40,000 ರೂ.) ಮಾರಾಟವಾಗುವ ಅಂದಾಜಿದೆ.

'ಈ ವಜ್ರವು ಪರಿಶುದ್ಧ, ಸ್ಪಷ್ಟ ಸ್ಪಟಿಕದಂತೆ ಇದೆ. ವಿಶಿಷ್ಟ cut-colour-clarity ಸ್ವರೂಪದ ಈ ವಜ್ರ ನಿಜಕ್ಕೂ ಅದ್ಭುತವಾಗಿದೆ. ಕೊಹಿನೂರ್, ರೆಜೆಂಟ್ ನಂತಹ ಅಪರೂಪದ ವಜ್ರಗಳ ಸಾಲಿನಲ್ಲಿ ಇದು ಫಳಫಳಿಸುತ್ತದೆ.

'ಮಗುವಿನ ಅಂಗೈಯಲ್ಲಿಡಬಹುದಾದ ವಜ್ರ 76.02 ಕ್ಯಾರಟ್ ನಷ್ಟು ತೂಗುತ್ತದೆ' ಕ್ರಿಸ್ಟಿ ವಜ್ರಾಭರಣ ಸಂಸ್ಥೆಯ ಮುಖ್ಯಸ್ಥ ರಾಹುಲ್ ಕಡಾಕಿಯಾ ಹೇಳಿದ್ದಾರೆ. ಈಗ ಪಾಳುಬಿದ್ದಿರುವ ಆಂಧ್ರದ ಗೋಲ್ಕೊಂಡಾದಲ್ಲಿ ಈ ವಜ್ರ ಸಿಕ್ಕಿತ್ತು.

ಅಂದಹಾಗೆ ಈ ವಜ್ರದ ಮೂಲ ಮಾಲೀಕ ಆಸ್ಟ್ರಿಯಾದ ಅರ್ಚದುಕೆ ಜೋಸೆಫ್ ಅಗಸ್ಟ್. ಈತ 19ನೆಯ ಶತಮನಾದಲ್ಲಿ ಹಂಗೇರಿ ಸಾಮ್ರಾಜ್ಯದಲ್ಲಿ ಉನ್ನತಾಧಿಕಾರಿಯಾಗಿದ್ದ. ಮಧ್ಯ ಪ್ರಾಚ್ಯ, ಏಷ್ಯಾ ಮತ್ತು ರಷ್ಯಾದ ಖರೀದಿದಾರರು ಈ ವಜ್ರಕ್ಕೆ ಮುಗಿಬಿದ್ದಿದ್ದು, ಇನ್ನೂ ಹೆಚ್ಚಿನ ದಾಖಲೆಯ ಮೊತ್ತಕ್ಕೆ ಮಾರಾಟವಾಗಬಹುದು' ಎಂದು ರಾಹುಲ್ ನಿರೀಕ್ಷಿಸಿದ್ದಾರೆ.

English summary
India made 76-carat, Joseph August Golconda diamond at London auction set to fetch $15 mn. A 400-year-old historic 76-carat, Archduke Joseph diamond which originated from India is expected to sell for a whopping $15 million at an auction next month in Geneva.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X