ಬಜ್ಪೆ- ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ 3 ಸೆರೆ

ಬಂಧಿತರನ್ನು ಇರ್ಷಾದ್ ಅರಂಬೋಡಿ, ಆಸಿಫ್ ಮತ್ತು ನವಾಜ್ ಕುಂಡದಬೆಟ್ಟು ಎಂದು ಗುರುತಿಸಲಾಗಿದೆ. ಇವರಿಗೆ ಸಾಥ್ ನೀಡಿದ ಹೈದರ್, ನವಾಜ್ ಮತ್ತು ಸಂತೋಷ್ ಶೆಟ್ಟಿ ಪರಾರಿಯಾಗಿದ್ದಾರೆ. ಇವರೆಲ್ಲ 20-25 ವರ್ಷದ ಯುವಕರು.
ಬಾಧಿತ ಬಾಲಕಿ ಪುಣ್ಯವತಿ (ಹೆಸರು ಬದಲಿಸಲಾಗಿದೆ) ಅದ್ದೂರು ಸೈಟ್ ನಿವಾಸಿ ಎಂದು ತಿಳಿದುಬಂದಿದೆ. ಬಾಲಕಿ ತೀವ್ರ ಆಘಾತಕ್ಕೊಳಗಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಈಗ ಚೇತರಿಸಿಕೊಳ್ಳುತ್ತಿದ್ದಾಳೆ.
ನವೆಂಬರ್ 6ರಂದು ಮಂಗಳವಾರ ಆರೋಪಿಗಳು ಮೂಡಬಿದ್ರಿ ಬಸ್ ಸ್ಟಾಂಡಿನಲ್ಲಿ ನಿಂತಿದ್ದ ನನಗೆ ಪ್ರಾಣ ಬೆದರಿಕೆಯೊಡ್ಡಿ ತಮ್ಮ ಆಟೋ ರಿಕ್ಷಾದಲ್ಲಿ ಹೊತ್ತೊಯ್ದರು. ಅಲ್ಲಿಂದ ವೇಣೂರು ಬಳಿ ಮನೆಯೊಂದಕ್ಕೆ ನನ್ನನ್ನು ಕರೆದುಕೊಂಡು ಹೋಗಿ, ಎಲ್ಲರೂ ಸಾಮೂಹಿಕ ಅತ್ಯಾಚಾರ ಮಾಡಿದರು ಎಂದು ಸಂತ್ರಸ್ತ ಪುಣ್ಯವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಸ್ಥಳೀಯರಿಗೆ ಅನುಮಾನ ಬಂದು ಘಟನೆ ನಡೆದ ಮನೆಯ ಬಾಗಿಲು ಹೊಡೆದು ಒಳಬಂದು ನೋಡಿದಾಗ ಬಾಲಕಿ ಗಂಭೀರ ಪರಿಸ್ಥಿತಿಯಲ್ಲಿರುವುದು ಗಮನಕ್ಕೆ ಬಂದಿದೆ. ತಕ್ಷಣ ಬಾಲಕಿಯನ್ನು ವೇಣೂರು ಪೊಲೀಸರಿಗೆ ತದನಂತರ ಬಜ್ಪೆ ಪೊಲೀಸರಿಗೆ ಒಪ್ಪಿಸಲಾಯಿತು. ಅಲ್ಲಿ ಬಾಲಕಿ ತನ್ನ ಪಡಿಪಾಟಲನ್ನು ಸಾದ್ಯಂತವಾಗಿ ಪೊಲೀಸರಿಗೆ ವಿವರಿಸಿದ್ದಾಳೆ.
ನಂತರ ಬಾಲಕಿಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಜ್ಪೆ ಇನ್ಸ್ ಪೆಕ್ಟರ್ ದಿನಕರ್ ಶೆಟ್ಟಿ ಪ್ರಕರಣವನ್ನು ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಂಡಿದ್ದಾರೆ.












Click it and Unblock the Notifications