ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊಡ್ಡಣ್ಣ ಒಬಾಮಾ ಬಗ್ಗೆ ಕುತೂಹಲಕಾರಿ ಸಂಗತಿಗಳು

By Mahesh
|
Google Oneindia Kannada News

Barack Obama family
ವಾಷಿಂಗ್ಟನ್, ನ.7: ಅಮೆರಿಕ ಅಧ್ಯಕ್ಷರಾಗಿ ಪುನಾರಾಯ್ಕೆಗೊಂಡಿರುವ ಬರಾಕ್ ಒಬಾಮಾ ಅವರಿಗೆ ಒನ್ ಇಂಡಿಯಾ ಕನ್ನಡ ತಂಡದಿಂದ ಶುಭ ಹಾರೈಕೆಗಳು. ರಿಪಬ್ಲಿಕ್ ಅಭ್ಯರ್ಥಿ ಮಿಟ್ ರೋಮ್ನಿ ವಿರುದ್ಧ ಐತಿಹಾಸಿಕ ಜಯ ದಾಖಲಿಸಿದ ಬರಾಕ್ ಒಬಾಮಾ ಜಗತ್ತಿನ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು.

ಕಪ್ಪು ಜನಾಂಗಕ್ಕೆ ಸೇರಿದ ಶ್ವೇತಭವನಕ್ಕೆ ಎರಡನೇ ಬಾರಿಗೆ ಪ್ರವೇಶಿಸುತ್ತಿರುವುದು ಅಭೂತಪೂರ್ವ ಸಾಧನೆಯಾಗಿದೆ. 44ನೇ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ಬಗೆಗಿನ ಕೆಲವು ಕುತೂಹಲಕಾರಿ ಸಂಗತಿಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
1. ಬರಾಕ್ ಒಬಾಮಾ ಆಗಸ್ಟ್ 4, 1961ರಂದು ಹಾವಾಯಿ ದ್ವೀಪ್ದ ಹೊನಲುಲುನಲ್ಲಿ ಜನಿಸಿದರು.
2. ರಾಜಕೀಯ ರಂಗ ಪ್ರವೇಶಕ್ಕೂ ಮುನ್ನ ಒಬಾಮಾ ಶಿಕ್ಷಕ ಹಾಗೂ ನಾಗರೀಕ ಹಕ್ಕುಗಳ ಪರ ವಕೀಲರಾಗಿದ್ದರು.
3. ಏಷ್ಯಾದ ಜೊತೆ ಒಬಾಮಾ ಗಟ್ಟಿ ಸಂಬಂಧ ಹೊಂದಿದ್ದಾರೆ. ಚಿಕ್ಕಂದಿನಲ್ಲಿ ಒಬಾಮಾ ಕೆಲ ವರ್ಷಗಳ ಕಾಲ ಅಮ್ಮ ಆನ್ ಡಂಹ್ಯಾಮ್ ಹಾಗೂ ಮಲತಂದೆ ಲೊಲೊ ಸೊಟೊರೊ ಜೊತೆ ಇಂಡೋನೇಶಿಯಾದಲ್ಲಿದ್ದರು.
4. ಸತತ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಕೃಷ್ಣವರ್ಣೀಯ ಮುಖಂಡ ಎಂಬ ಕೀರ್ತಿ ಒಬಾಮಾಗೆ ಸಲ್ಲುತ್ತದೆ
5. ಜಾರ್ಜ್ ಡಬ್ಲ್ಯೂ ಬುಶ್ ಜೂನಿಯರ್ (2001-2009) ಹಾಗೂ ಬಿಲ್ ಕ್ಲಿಂಟನ್ (1993-2001) ನಂತರ ಒಬಾಮಾ ಅವರು ಪುನಾರಾಯ್ಕೆಯಾದ ಸಾಧನೆ ಮಾಡಿದ್ದಾರೆ.
6. ಒಬಾಮಾ ಅವರನ್ನು ಚಿಕ್ಕಂದಿನಲ್ಲಿ 'ಬಾರಿ'(barry) ಎಂಬ ಅಡ್ಡ ಹೆಸರಿನಿಂದ ಕರೆಯಲಾಗುತ್ತಿತ್ತು.
7. ಒಬಾಮಾ ಅವರು ಇಂಗ್ಲೀಷ್ ಜೊತೆಗೆ ಇಂಡೋನೇಶಿಷನ್ ಕೂಡಾ ಸುಲಲಿತವಾಗಿ ಮಾತನಾಡಬಲ್ಲರು.
8. 1989 ಮಿಚೆಲ್ ಜೊತೆ ಡೇಟಿಂಗ್ ಮಾಡಲಾರಂಭಿಸಿದ ಒಬಾಮಾ 1991ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಅಕ್ಟೋಬರ್ 3, 1992 ರಂದು ಇಬ್ಬರ ಮದುವೆಯಾಯಿತು. ದಂಪತಿಗೆ ಮೊದಲ ಪುತ್ರಿ ಮಲಿಯಾ ಆನ್ 1998 ರಲ್ಲಿ ಹಾಗೂ ಎರಡನೇ ಪುತ್ರಿ ನಟಾಶಾ 2001ರಲ್ಲಿ ಜನಸಿದರು.
9. ಬರಾಕ್ ಒಬಾಮಾ 'ಚೇನ್ ಸ್ಮೋಕರ್' ಆಗಿದ್ದರು. ಹತ್ತು ಹಲವು ಬಾರಿ ಸಿಗರೇಟ್ ಸೇವನೆ ತ್ಯಜಿಸಲು ಪ್ರಯತ್ನಪಟ್ಟು ವಿಫಲರಾಗಿದ್ದರು. ನಿಕೋಟಿನ್ ಬದಲಿ ಚಿಕಿತ್ಸೆ ಕೂಡಾ ಪಡೆದಿದ್ದರು. 2010ರಲ್ಲಿ ಒಬಾಮಾ ಧೂಮಪಾನ ಸೇವನೆ ಚಟದಿಂದ ಮುಕ್ತರಾಗಿದ್ದಾರೆ ಎಂದು ಮಿಚೆಲ್ ಘೋಷಿಸಿದರು.
10. ಸಿಗರೇಟ್ ಜೊತೆಗೆ ಮಾದಕವ್ಯಸನಿಯಾಗಿದ್ದ ಒಬಾಮಾ 'choom gang' ಎಂಬ ತಂಡ ಕಟ್ಟಿಕೊಂಡು ಗೆಳೆಯರೊಡನೆ ಆಗಾಗ ಮಾರಿಜುನಾ ಸೇವಿಸುತ್ತಿದ್ದರು. ಹೈಸ್ಕೂಲ್ ದಿನಗಳಲ್ಲಿ ಡ್ರಗ್ಸ್ ಸೇವನೆ ಬಗ್ಗೆ ಈಗಲೂ ಒಬಾಮಾ ಖೇದ ವ್ಯಕ್ತಪಡಿಸುವುದುಂಟು.

English summary
Barack Obama was re-elected as US President after defeating Republican rival Mitt Romney in a tight election on Tuesday, Nov 6. The victory of Obama was nothing less than historic. Obama managed to retain his Presidential post and became the only black American to do so in the annals of US history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X