ವಿದ್ಯಾರ್ಥಿಯನ್ನು ಅಟ್ಟಾಡಿಸಿಕೊಂಡು ಕೊಂದು ಬಿಟ್ಟರು

Student Hacked to death Koramangala
ಬೆಂಗಳೂರು, ನ.6: ಹಳೆ ವೈಷಮ್ಯಕ್ಕೆ ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದಾನೆ. ದುಷ್ಕರ್ಮಿಗಳ ತಂಡ ಅಟ್ಟಾಡಿಸಿಕೊಂಡು ಪಿಯುಸಿ ವಿದ್ಯಾರ್ಥಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾಜೇಂದ್ರನಗರದ ನಿವಾಸಿ 19 ವರ್ಷ ವಯಸ್ಸಿನ ಎಸ್.ಪುರುಷೋತ್ತಮ್ ಕೊಲೆಗೀಡಾದ ದುರ್ದೈವಿ. ಸೋಮವಾರ ರಾತ್ರಿ 7.45 ರ ಸುಮಾರಿನಲ್ಲಿ ಕೋರಮಂಗಲ 4ನೇ ಅಡ್ಡ ರಸ್ತೆಯ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಸ್ನೇಹಿತ ಶರತ್‌ನೊಂದಿಗೆ ಹೋಗುತ್ತಿದ್ದ ವೇಳೆ ದುಷ್ಕರ್ಮಿಗಳು ದಾಳಿ ಮಾಡಿ ಕೊಲೆಗೈದಿದ್ದಾರೆ ಎಂದು ಕೋರಮಂಗಲ ಠಾಣೆ ಪೊಲೀಸರು ಹೇಳಿದ್ದಾರೆ.

ಕೋರಮಂಗಲ ಕಾಂಪ್ಲೆಕ್ಸ್ ಪಕ್ಕದಲ್ಲಿರುವ ಕರ್ನಾಟಕ ರೆಡ್ಡಿ ಜನಾಂಗ ಸಂಘ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದ ಪುರುಷೋತ್ತಮ್ ವ್ಯಾಸಂಗದ ಜೊತೆಗೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಸೋಮವಾರ ರಾತ್ರಿ ಸ್ನೇಹಿತ ಶರತ್ ಜೊತೆಗೆ ಪುರುಷೋತ್ತಮ್ ಮೇಲೆ ದಾಳಿ ನಡೆದಿದೆ. ಮಚ್ಚು ಲಾಂಗುಗಳನ್ನು ಹಿಡಿದುಕೊಂಡು ಬಂದಿದ್ದ ದುಷ್ಕರ್ಮಿಗಳ ತಂಡ ಏಕಾಏಕಿ ದಾಳಿ ಮಾಡಿದ್ದಾರೆ.

ಪ್ರಾಣಭೀತಿಯಿಂದ ಪುರುಷೋತ್ತಮ್ ಓಡಲು ಆರಂಭಿಸಿದ್ದಾನೆ. ಅದರೆ, ನೂರಿನ್ನೂರು ಮೀಟರ್ ಓಡುವಷ್ಟರಲ್ಲೇ ಬರ್ಬರವಾಗಿ ಕೊಲೆಯಾಗಿಬಿಟ್ಟಿದ್ದಾನೆ.

ಸಾರ್ವಜನಿಕರು ಸಹಾಯಕ್ಕೆ ಬರುವಷ್ಟರಲ್ಲಿ ಪುರುಷೋತ್ತಮ್ ಅರೆ ಜೀವವಾಗಿದ್ದ ಎಂದು ತಿಳಿದು ಬಂದಿದೆ.

ನಂತರ ಪುರುಷೋತ್ತಮನ ಸೋದರ ಮಾವನಿಗೆ ಸುದ್ದಿ ಸಿಕ್ಕಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ನಟರಾಜ್ ಹಾಗೂ ಸಂಬಂಧಿಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತೀವ್ರ ಹಲ್ಲೆಗೆ ಒಳಗಾಗಿದ್ದ ಪುರುಷೋತ್ತಮ್ ರಕ್ತ ಸ್ರಾವವಾಗಿ ಸಾವನ್ನಪ್ಪಿದ್ದಾನೆ. ದಾಳಿ ವೇಳೆ ಮೃತ ಯುವಕನ ಸ್ನೇಹಿತ ಶರತ್‌ನಿಗೆ ಸಣ್ಣಪುಟ್ಟ ಗಾಯಗಳಾಗಿದ್ದಾನೆ.

ಸದ್ಯ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಡಾ.ಹರ್ಷ ತಿಳಿಸಿದ್ದಾರೆ.

ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಡಿದ್ದಾರೆ.

ಕೆಲ ದಿನಗಳ ಹಿಂದೆ ಕೋರಮಂಗಲ 8ನೇ ಕ್ರಾಸ್‌ನಲ್ಲಿ ಅಣ್ಣಮ್ಮ ದೇವಿಯ ಜಾತ್ರೆ ನಡೆದಿತ್ತು. ಈ ವೇಳೆ ಪುರುಷೋತ್ತಮ್ ಹಾಗೂ ಉತ್ಸವ ಏರ್ಪಡಿಸಿದವರ ನಡುವೆ ಜಗಳ ನಡೆದಿತ್ತು.

ಇದೇ ದ್ವೇಷಕ್ಕೆ ಪುರುಷೋತ್ತಮ್ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ ಎಂಬ ಶಂಕೆ ಇದೆ. ತನಿಖೆ ಮುಂದುವರೆದಿದೆ ಎಂದು ಡಿಸಿಪಿ ಹರ್ಷ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+