410 ಟ್ರಕ್ ಕಸಕ್ಕೆ ಬೆಂಗಳೂರಿನಿಂದ ಸೆಂಡ್ ಆಫ್

BBMP Officials on Garbage disposal,
ಬೆಂಗಳೂರು, ನ.5: ಕಸದ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಬೆಂಗಳೂರು ಮಹಾನಗರ ಪಾಲಿಕೆಗೆ ಹೈಕೋರ್ಟ್ ನೀಡಿದ್ದ ಗಡುವು ಸೋಮವಾರ(ನ.5)ಕ್ಕೆ ಮುಗಿದಿದೆ. ಸೂಪರ್ ಸೀಡ್ ಭಯದಿಂದಲೋ ಏನೋ ಕಸದ ಸಮಸ್ಯೆ ಪರಿಹಾರ ಕಂಡುಕೊಳ್ಳಲಾಗಿದೆ. ಟ್ರಕ್ ಗಳು ಕಸ ಹೊತ್ತು ನಗರದ ಹೊರವಲಯಕ್ಕೆ ಹೋಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ಚಿಕ್ಕಬಳ್ಳಾಪುರದ ಹೊರವಲಯದಲ್ಲಿ 400 ಎಕರೆ ಜಮೀನನ್ನು ಕಸ ವಿಲೇವಾರಿಗೆ ನಿಗದಿಪಡಿಸಲಾಗಿದೆ. ಹಾಗೆಯೆ, 300 ಕೋಟಿ ರು. ವೆಚ್ಚದಲ್ಲಿ 80 ಘನ ತ್ಯಾಜ್ಯ ವಿಲೇವಾರಿ ಯೋಜನೆಗಳಿಗೆ ಬಿಬಿಎಂಪಿ ಒಪ್ಪಿಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಎಸ್.ಬಿಂಗೀಪುರ, ಲಕ್ಷ್ಮೀಪುರ, ದೊಡ್ಡಬಳ್ಳಾಪುರ ರಸ್ತೆಯ ಟೆರ್ರಾ ಫಾರಮ್ ಹಾಗೂ ಮಂಡೂರಿನ ಘಟಕಗಳು ಬಿಬಿಎಂಪಿ ಮಾನ ಉಳಿಸಿದೆ. ಹಾಗೂ ಮಹಾನಗರ ಜನತೆಯ ಸಾಂಕ್ರಾಮಿಕ ರೋಗ ಭೀತಿ ನಿವಾರಿಸಿದೆ.

ಮಂಡೂರಿನ ಘಟಕದಲ್ಲಿ ಕೇವಲ ಮೂರು ತಿಂಗಳವರೆಗೆ ಕಸ ಸುರಿಯಲು ಮಾತ್ರ ಅವಕಾಶವಿದೆ. ನಂತರ ಈ ಘಟಕವೂ ಬಾಗಿಲು ಮುಚ್ಚಲಿದೆ. ಈ ನಾಲ್ಕು ಘಟಕಗಳಿಗೆ ಅಧಿಕೃತವಾಗಿ ನಿತ್ಯ ಸುಮಾರು 410 ಲಾರಿಗಳಲ್ಲಿ ಅಂದಾಜು 3800 ಟನ್‌ನಷ್ಟು ಕಸ ರವಾನೆಯಾಗುತ್ತಿದೆ.

ಇದಲ್ಲದೆ ಇನ್ನೂ ಸುಮಾರು 1000 ಟನ್‌ನಷ್ಟು ಕಸ ಸಾಗಣೆಯಾಗದೆ ಅಲ್ಲಲ್ಲೇ ಸಂಗ್ರಹವಾಗುತ್ತಿದೆ. ಹೊಸ ಪ್ರದೇಶದಲ್ಲಿ ಈ ಸಮಸ್ಯೆಯಿಲ್ಲದಿದ್ದರೂ,
ಹಳೇ ಪ್ರದೇಶದ ಕಸ ಹೊಸ ಪ್ರದೇಶದಲ್ಲಿ ಸಂಗ್ರಹವಾಗುತ್ತಿದೆ. ಇದಲ್ಲದೆ ಕಸ ವಿಲೇವಾರಿಗಾಗಿ ಮಾವಳ್ಳಿಪುರ, ಕಲ್ಬಾಳುವಿನಲ್ಲಿ ಘಟಕಗಳಿದ್ದರೂ ಪ್ರಯೋಜನವಿಲ್ಲ.

ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು 2,700 ಕೋಟಿ ರೂ. ಅಂದಾಜು ವೆಚ್ಚದಲ್ಲಿ 400 ಎಕರೆ ಜಮೀನು ಖರೀದಿಸಲು ತೀರ್ಮಾನಿಸಲಾಗಿದೆ. ಇದಲ್ಲದೆ ಸುಮಾರು 215 ಎಕರೆಯಷ್ಟು ಜಾಗವನ್ನು ಬಿಎಂಟಿಸಿ ನೀಡಿದ್ದು, ಬಿಬಿಎಂಪಿಗೆ 1 ಕೋಟಿ ರೂ. ನೀಡಲಿದೆ. ಆದರೆ, ಈ ಪ್ರಕ್ರಿಯೆಗಳು ಜಾರಿಗೆ ಬರಲು ತಿಂಗಳುಗಟ್ಟಲೆ ಕಾಯಬೇಕು.

ಹೊಸ ಗುತ್ತಿಗೆ : ಬಿಬಿಎಂಪಿ ಅಧಿಕಾರಿಗಳ ಪ್ರಕಾರ ನ.15 ರಿಂದ ಹೊಸ ಗುತ್ತಿಗೆದಾರರು ಕಸ ವಿಲೇವಾರಿ ಪ್ರಕ್ರಿಯೆಯಲ್ಲಿ ತೊಡಗಲಿದ್ದಾರೆ. ಆದರೆ, ಕಸ ವಿಲೇವಾರಿ ಘಟಕದ ಸಮಸ್ಯೆಗೆ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ. ತ್ವರಿತವಾಗಿ ವಿಲೇವಾರಿ ಘಟಕ ಸಮಸ್ಯೆ ಬಗೆಹರಿಯದಿದ್ದರೆ ಮತ್ತೊಮ್ಮೆ ಕಸದ ರಾಶಿ ಬೆಳೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+