ಸಿಎಂ ಖುರ್ಚಿ ಮೇಲೆ ಮತ್ತೆ ಟವಲ್ ಹಾಕಿದ ಸಿದ್ದರಾಮಯ್ಯ

ದಾವಣಗೆರೆ ಶುಕ್ರವಾರ ಮಾತನಾಡಿದ ಸಿದ್ದರಾಮಯ್ಯ ಅವರು 'ಕಾಂಗ್ರೆಸ್ ಪಕ್ಷದ ವತಿಯಿಂದ ನಾನೂ ಸಹ ಸಿಎಂ ರೇಸ್ ನಲ್ಲಿ ಇದ್ದೇನೆ' ಎಂದಿದ್ದಾರೆ.
'ತಮ್ಮ ಪಕ್ಷವು ಸಾಮೂಹಿಕ ನಾಯಕತ್ವದಡಿ ಮುಂದಿನ ಚುನಾವಣೆ ಎದುರಿಸಲಿದ್ದು, ತಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಆಗ ನಾನೂ ಸಹ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ' ಎಂದರು
ರಾಜ್ಯಕ್ಕೆ ಎಸ್ ಎಂ ಕೃಷ್ಣ ಪುನರಾಗಮನದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಕೃಷ್ಣ ಪಕ್ಷದದ ಹಿರಿಯ ನಾಯಕರು. ಅವರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬುದು ಹೈಕಮಾಂಡಿಗೆ ಬಿಟ್ಟ ವಿಚಾರ. ಆದರೆ ಮುಂದಿನ ಚುನಾವಣೆಯನ್ನು ಪರಮೇಶ್ವರ ಅವರ ನಾಯಕತ್ವದಲ್ಲೇ ಎದುರಿಸಲಿದ್ದು, ಅದರಲ್ಲಿ ಯಾವುದೇ ಸಂಶಯ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications