ಗ್ರಾಹಕ ಎಚ್ಚರ! ಹೆಚ್ಚುವರಿ ಎಲ್ ಪಿಜಿ ಸಂಪರ್ಕ ಕಡಿತ

LPG Cylinder
ನವದೆಹಲಿ, ಅ.28: ಪೆಟ್ರೋಲಿಯಂ ಖಾತೆಗೆ ಕರ್ನಾಟಕದ ವೀರಪ್ಪ ಮೊಯ್ಲಿ ಅವರು ಸಚಿವರಾಗಿದ್ದಾರೆ ಎಂಬ ಶುಭ ಸುದ್ದಿ ಬೆನ್ನಲ್ಲೆ ಇಲಾಖೆಯಿಂದ ಕಹಿ ಸುದ್ದಿ ಬಂದಿದೆ. ಅಕ್ರಮ ಅಡುಗೆ ಅನಿಲ ಸಂಪರ್ಕ ಜಾಲ ಕತ್ತರಿಸಲು ಪೆಟ್ರೋಲಿಯಂ ಇಲಾಖೆ ಮುಂದಾಗಿದೆ. ಹೀಗಾಗಿ, ಒಂದಕ್ಕಿಂತ ಹೆಚ್ಚು ಗ್ಯಾಸ್ ಸಂಪರ್ಕ ಹೊಂದಿರುವ ಗ್ರಾಹಕರು ಎಚ್ಚರ ವಹಿಸಿದರೆ ಒಳ್ಳೆಯದು

ಅಡುಗೆ ಅನಿಲ ಮಿತಿಯನ್ನು 6 ರಿಂದ 12ಕ್ಕೆ ಏರಿಸಲು ಅನೇಕ ರಾಜ್ಯಗಳು ಇನ್ನೂ ಸಿದ್ಧವಾಗಿಲ್ಲ. ಈ ನಡುವೆ ದೇಶದಾದ್ಯಂತೆ ಎಲ್ ಪಿಜಿ ಗ್ಯಾಸ್ ಬಳಕೆದಾರರಿಗೆ ಯುಪಿಎ ಸರ್ಕಾರ ಮತ್ತೊಂದು ಶಾಕ್ ನೀಡಲು ಯೋಜಿಸಿದೆ.

ಒಂದಕ್ಕಿಂತ ಹೆಚ್ಚು ಅಡುಗೆ ಅನಿಲ ಸಂಪರ್ಕ ಹೊಂದಿರುವ ಸುಮಾರು 26 ದಶಲಕ್ಷ(2.60 ಕೋಟಿ) ರಿಯಾಯಿತಿ ದರದ ಎಲ್ ಪಿಜಿ ಸಂಪರ್ಕಗಳನ್ನು ಕೇಂದ್ರ ಪೆಟ್ರೋಲಿಯಂ ಇಲಾಖೆ ಗುರುತಿಸಿದೆ.

ಈ ಎಲ್ಲಾ ಸಂಪರ್ಕಗಳು ಮುಂದಿನ ಮೂರು ತಿಂಗಳಿನಲ್ಲಿ ಕಡಿತಗೊಳ್ಳಲಿದೆ. ದೇಶದಾದ್ಯಂತ ಸುಮಾರು 145 ಮಿಲಿಯನ್ ಸಂಪರ್ಕಗಳಿದ್ದು, ಇದರಲ್ಲಿ 26 ದಶಲಕ್ಷಗಳು ಅಕ್ರಮ ಎಂದು ಗುರುತಿಸಲಾಗಿದೆ ಎಂದು ಇಲಾಖೆ ಹೇಳಿದೆ.

ಡಿಸೆಂಬರ್ ತಿಂಗಳ ಅಂತ್ಯದ ವೇಳೆಗೆ ಅಕ್ರಮ ಸಂಪರ್ಕಗಳನ್ನು ರದ್ದುಗೊಳಿಸುವಂತೆ ಗಡುವು ನೀಡಲಾಗಿದೆ. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ತೈಲ ಕಂಪನಿಗಳಿಗೂ ಸೂಚನೆ ಸಿಕ್ಕಿದೆ.

ಆದರೆ, ಹೆಚ್ಚುವರಿ ಸಂಪರ್ಕಕ್ಕೆ ರಿಯಾಯಿತಿ ಪಡೆಯದ ಬಗ್ಗೆ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಸಂಪರ್ಕ ಕಡೀತದಿಂದ ತಪ್ಪಿಸಿಕೊಳ್ಳಬಹುದಾಗಿದೆ. ಗ್ರಾಹಕರು ಕೂಡಲೇ ಸ್ಥಳೀಯ ಗ್ಯಾಸ್ ಏಜೆನ್ಸಿಗಳಲ್ಲಿ ಎರಡಕ್ಕಿಂತ ಹೆಚ್ಚು ಸಂಪರ್ಕಗಳನ್ನು ಕಡಿತಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಒಂದೇ ಹೆಸರಿನಲ್ಲಿ ಎರಡು ಸಂಪರ್ಕ, ಎರಡು ಕಂಪನಿಗಳಿಗೆ ಒಂದೇ ವಿಳಾಸ ನೀಡಿ ರಿಯಾಯಿತಿ ಗ್ಯಾಸ್ ಸಂಪರ್ಕ ಪಡೆದಿರುವ ಗ್ರಾಹಕರ ಸಂಪೂರ್ಣ ವಿವರ ಈಗ ಇಲಾಖೆ ಕೈಯಲ್ಲಿದೆ. Know your constumer ಯೋಜನೆಯಡಿ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ ಎಂದು ಇಲಾಖೆ ಹೇಳಿದೆ.

ಒಂದೇ ವಿಳಾಸದಡಿಯಲ್ಲಿ ಎರಡು ಸಂಪರ್ಕ ಹೊಂದಿದ್ದರೆ, ಹೆಚ್ಚುವರಿ ಸಂಪರ್ಕವನ್ನು ಬೇರೆ ಕುಟುಂಬ ಬಳಸುತ್ತಿದೆ ಎಂಬುದನ್ನು ಸಾಬೀತುಪಡಿಸಬೇಕಿ. ಇಲ್ಲದಿದ್ದರೆ, ಹೆಚ್ಚುವರಿ ಸಂಪರ್ಕವನ್ನು ರದ್ದುಗೊಳಿಸಲಾಗುತ್ತದೆ ಎಂದು ಇಂಡಿಯನ್ ಆಯಿಲ್ ನ ನಿರ್ದೇಶಕ(ಮಾರುಕಟ್ಟೆ) ಎಂ ನೆನೆ ಹೇಳಿದ್ದಾರೆ.

ನಿಮ್ಮ ಮನೇಲಿ ಎರಡು ಕುಟುಂಬಗಳು ವಾಸವಾಗಿದೆ ಎರಡು ಅಡುಗೆಮನೆ ಇದೆ ಎಂದರೆ ವರ್ಷಕ್ಕೆ ಸಿಗುವ ಸಿಲೆಂಡರ್ ಮಿತಿಯಲ್ಲೂ ರಿಯಾಯಿತಿ ಪಡೆಯಬಹುದಾಗಿದೆ. ಒಂದೇ ಸೂರಿನಡಿ ಎರಡು ಅಡುಗೆಮನೆಗಳಿದ್ದು ವಾರ್ಷಿಕ 12 ಸಿಲಿಂಡರ್ ಪಡೆಯಬಹುದು ಎಂದು ಇಲಾಖೆ ಹೇಳಿದೆ. 'ಒಂದು ಮನೆಗೆ ಒಂದೇ ಅನಿಲ ಕನೆಕ್ಷನ್' ನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+