ಯಡಿಯೂರಪ್ಪ ನೂತನ ಪಕ್ಷದ ಕಚೇರಿಗೆ ಗುದ್ದಲಿಪೂಜೆ

ಯಡಿಯೂರಪ್ಪನವರ ಶಿಕಾರಿಪುರದ ಮನೆಯ ಎದುರಿನ ಸ್ಥಳದಲ್ಲಿ ಶಿವಮೊಗ್ಗ ಸಂಸದ ಮತ್ತು ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ಈ ಮೂಲಕ ನೂತನ ಪಕ್ಷದ ಚಟುವಟಿಕೆ ಆರಂಭಿಸಿರುವ ಯಡಿಯೂರಪ್ಪ ವರಿಷ್ಟರು ನನ್ನ ಮನವೊಲಿಕೆ ನಡೆಸುತ್ತಿದ್ದಾರೆ ಎನ್ನುವ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ಡಿಸೆಂಬರ್ 10ರಂದು ಹೊಸ ಪಕ್ಷ ರಚಿಸುವ ನಿರ್ಧಾರ ಆಚಲವೆಂದಿದ್ದಾರೆ.
ಯಾವುದೇ ಕಾರಣಕ್ಕೂ ಮತ್ತೆ ಬಿಜೆಪಿಗೆ ವಾಪಾಸಾಗುವ ಮಾತೇ ಇಲ್ಲ. ದೆಹಲಿಯಲ್ಲಿ ವರಿಷ್ಟರ ಜೊತೆ ಮತ್ತೆ ಚರ್ಚಿಸುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ.
ಡಿಸೆಂಬರ್ 10ರಂದು ಹಾವೇರಿಯಲ್ಲಿ ಆಯೋಜಿಸಲಾಗಿರುವ ಸಮಾವೇಶದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಯಡಿಯೂರಪ್ಪ ನೂತನ ಪಕ್ಷದ ರಚನೆಯ ನಂತರ ನನ್ನನ್ನು ಪಕ್ಷಕ್ಕೆ ಸೇರುವಂತೆ ಆಹ್ವಾನಿಸಿದರೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಪಶುಸಂಗೋಪನಾ ಸಚಿವ ರೇವೂ ನಾಯಕ್ ಬೆಳಮಗಿ ಹೇಳಿದ್ದಾರೆ.












Click it and Unblock the Notifications