ಬಯ್ಯಪ್ಪನಹಳ್ಳಿ: ಡಿಪ್ಲೋಮಾ ವಿದ್ಯಾರ್ಥಿನಿಯ ಅತ್ಯಾಚಾರ

diploma-student-molested-bangalore-baiyyappanahalli
ಬೆಂಗಳೂರು, ಅ.17: ಅತ್ತ ಜ್ಞಾನಭಾರತಿ ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಸಂದರ್ಭದಲ್ಲಿ ಇತ್ತ ನಗರದ ವಿರುದ್ಧ ದಿಕ್ಕಿನಲ್ಲಿ ವಿದ್ಯಾರ್ಥಿನಿ ಮೇಲೆ ಆಕೆಯ ಸಹಪಾಠಿ ಅತ್ಯಾಚಾರ ಮಾಡಿರುವ ಘಟನೆ ವರದಿಯಾಗಿದೆ. ಗಮನಾರ್ಹವೆಂದರೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಮೂಲತಃ ಬಳ್ಳಾರಿಯವನಾದ ಚಂದ್ರು (21) ಎಂಬಾತ ಬೈಯಪ್ಪನಹಳ್ಳಿಯ ಕಗ್ಗದಾಸಪುರದ ಎಸ್‌ಇಟಿ ಡಿಪ್ಲೋಮಾ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ. ಅತ್ಯಾಚಾರ ಎಸೆಗಿದ ಆರೋಪ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿದೆ. ಕೋರಮಂಗಲದ ಬಳಿ ಡಿಪ್ಲೋಮಾ ಕಾಲೇಜಿನಲ್ಲಿ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಒಬ್ಬ ವಿದ್ಯಾರ್ಥಿನಿ ಬಾಧಿತಳು.

ಆರೋಪಿ ಕೃಷ್ಣ ನಾಗೇಂದ್ರ ರೆಡ್ಡಿ ಲೇ ಔಟ್‌ನಲ್ಲಿ ಬಾಡಿಗೆ ರೂಮಿನಲ್ಲಿ ವಾಸವಾಗಿದ್ದಾನೆ. ಕಳೆದ ಭಾನುವಾರ ಏನಾಯಿತೆಂದರೆ... Project Work ನೆಪದಲ್ಲಿ ತನ್ನ ಸಹಪಾಠಿಯನ್ನು ರೂಮಿಗೆ ಕರೆಂದು ಬಲಾತ್ಕಾರ ನಡೆಸಿದ್ದಾನೆ.

'ಡಿಪ್ಲೋಮಾಟಿಕ್' ಸ್ನೇಹ: ಆರೋಪಿ ಚಂದ್ರುನ ಸೋದರ ಸಂಬಂಧಿಕರೊಬ್ಬರು ಜೀವನ್‌ ಬಿಮಾನಗರ ಸಮೀಪದ ಸುಧಾಮನಗರದಲ್ಲಿದ್ದಾರೆ. ಬಾಧಿತ ವಿದ್ಯಾರ್ಥಿನಿಯು ಚಂದ್ರುನ ಸೋದರ ಸಂಬಂಧಿಯ ನೆರೆಮನೆಯವಳು. ಹಾಗಾಗಿ ಚಂದ್ರು ಜತೆ 'ಸ್ನೇಹ' ಕುದುರಿತ್ತು.

ಆ 'ಗೆಳೆತನದ' ಹಿನ್ನೆಲೆಯಲ್ಲಿ ಭಾನುವಾರ ಕಾಲೇಜಿಗೆ ರಜಾ ಇದ್ದ ಕಾರಣ ಇಬ್ಬರು PVRನಲ್ಲಿ ಒಟ್ಟಿಗೆ ಸಿನಿಮಾ ವೀಕ್ಷಿಸಿದ್ದಾರೆ. ನಂತರ ಪ್ರಾಜೆಕ್ಟ್ ವರ್ಕ್‌ ನೆಪದಲ್ಲಿ 'ಡಿಪ್ಲೋಮಾಟಿಕ್' ಆಗಿ ಆಕೆಯನ್ನು ತನ್ನ ಕೊಠಡಿಗೆ ಚಂದ್ರು ಆಹ್ವಾನಿಸಿದ್ದಾನೆ. ಇದಕ್ಕೆ ಒಪ್ಪಿದ ರಕ್ಷಿತಾ, ತನ್ನ ಪೋಷಕರಿಗೆ ಪ್ರಾಜೆಕ್ಟ್ ವರ್ಕ್‌ ನೆಪ ಹೇಳಿ ಸ್ನೇಹಿತನೊಂದಿಗೆ ತೆರಳಿ ಭಾನುವಾರ ರಾತ್ರಿ ಆತನ್ನೊಂದಿಗೆ ಇದ್ದಳು ಎನ್ನಲಾಗಿದೆ.

ಆದರೆ ಸೋಮವಾರ ಬೆಳಗ್ಗೆ ಮನೆಗೆ ಮರಳಿದ ರಕ್ಷಿತಾಳನ್ನು ಆಕೆಯ ಪೋಷಕರು ವಿಚಾರಿಸಿದ್ದಾರೆ. ಆಗ ಆಕೆ ತನ್ನ ಮೇಲೆ ಸ್ನೇಹಿತ ಅತ್ಯಾಚಾರ ನಡೆದಿರುವ ಬಗ್ಗೆ ಮಾಹಿತಿ ನೀಡಿದ್ದಳು ಎಂದು ಬಯ್ಯಪ್ಪನಹಳ್ಳಿ ಪೊಲೀಸರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+