ಗಡ್ಕರಿ 'ಮಹಾ' ವಂಚನೆ ತೆರೆದಿಟ್ಟ ಕೇಜ್ರಿವಾಲ

Arvind Kejriwal's Big expose
ನವದೆಹಲಿ, ಅ.17: ಭ್ರಷ್ಟಾಚಾರ ವಿರುದ್ಧ ಭಾರತ (IAC) ಕಾರ್ಯಕರ್ತೆ ಅಂಜಲಿ ದಮಾನಿಯ ಹಾಗೂ ಮುಖಂಡ ಅರವಿಂದ್ ಕೇಜ್ರಿವಾಲ ಮತ್ತು ಪ್ರಶಾಂತ್ ಭೂಷಣ್ ಅವರು ಬುಧವಾರ (ಅ.17) ಸಂಜೆ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ವಿರುದ್ಧ ಭರ್ಜರಿ ಆರೋಪಗಳನ್ನು ಮಾಡಿ, ಸೂಕ್ತ ದಾಖಲೆಗಳನ್ನು ಒದಗಿಸಿದರು.

ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರ ಭ್ರಷ್ಟಾಚಾರದ ಬಣ್ಣ ಬಯಲು ಮಾಡಲು ಅರವಿಂದ್ ಕೇಜ್ರಿವಾಲ ಅವರು ಸಿದ್ಧರಾಗುವ ಮೊದಲೇ ಹಿರಿಯ ಮುಖಂಡ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರು ಗಡ್ಕರಿ ಭ್ರಷ್ಟ ಎಂದು ಸಾರುವ ಮೂಲಕ ಬಾಂಬ್ ಎಸೆದಿದ್ದರು.

ಅರವಿಂದ್ ಕೇಜ್ರಿವಾಲ ಅವರು ಬಿಜೆಪಿ ವಿರೋಧ ಪಕ್ಷವೇ ಅಥವಾ ಆಡಳಿತ ಪಕ್ಷದ ಜೊತೆ ಕೈಜೋಡಿಸಿದ ಶಕ್ತಿಹೀನ ಪಕ್ಷವೇ ಎಂದು ಪ್ರಶ್ನಿಸುವ ಮೂಲಕ ಸುದ್ದಿಗೋಷ್ಠಿ ಆರಂಭಿಸಿದರು.

ಸುದ್ದಿಗೋಷ್ಠಿ ಮುಖ್ಯಾಂಶ ಇಂತಿದೆ:
* ಇದು ಸುಮಾರು 70 ಸಾವಿರ ಕೋಟಿ ರು ನೀರಾವರಿ ಹಗರಣ.
* ಗಡ್ಕರಿ ಟ್ರಸ್ಟ್ ಹೆಸರಿನಲ್ಲಿ 100 ಎಕರೆ ಭೂಮಿಗೆ ಅಕ್ರಮವಾಗಿ ನೀರು ಹರಿಸಲಾಗಿದೆ.
* ಎನ್ ಸಿಪಿ ಹಾಗೂ ಕಾಂಗ್ರೆಸ್ ಜೊತೆಗೂಡಿ ಸುಮಾರು 71 ವಿದ್ಯುತ್ ಸ್ಥಾವರ ಸ್ಥಾಪನೆಗೆ ಹೊಂಚು ಹಾಕಲಾಗಿದೆ.
* ಗಡ್ಕರಿ ಸುಮಾರು 17 ಕ್ಷೇತ್ರದಲ್ಲಿ ಉದ್ಯಮಿಯಾಗಿದ್ದಾರೆ. ಸಕ್ಕರೆ, ವಿದ್ಯುತ್, ಸೌರ ಶಕ್ತಿ ಮುಂತಾದವು ಪ್ರಮುಖವಾಗಿದೆ.
* ಗಡ್ಕರಿ ಯಾವಾಗಲೂ ಗುತ್ತಿಗೆದಾರರ ಪರ ಮಾತನಾಡಿದ್ದಾರೆ. ರೈತರ ಪರ ಎಂದೂ ದನಿಯೆತ್ತಿಲ್ಲ.

ಸಮಯ 5.15:
* ಮಹಾರಾಷ್ಟ್ರದಲ್ಲಿ ನಿತಿನ್ ಗಡ್ಕರಿ ಬೃಹತ್ ಉದ್ಯಮಗಳನ್ನು ಹೊಂದಿದ್ದಾರೆ.
* ನಾಗಪುರದಲ್ಲಿ ರೈತರ ಜಮೀನು ನುಂಗಿ ಹಾಕಿದ ನಿತಿನ್ ಗಡ್ಕರಿ.
* ಮಹಾರಾಷ್ಟ್ರದ ನೀರಾವರಿ ಹಗರಣದಲ್ಲಿ ಗಡ್ಕರಿ ಪಾಲು ಇದೆ ಎಂದು ಸಾಮಾಜಿಕ ಕಾರ್ಯಕರ್ತೆ ಅಂಜಲಿ ದಮಾನಿಯಾ ಆರೋಪಿಸಿದ್ದಾರೆ.
* ಗಡ್ಕರಿ ಅವರ ಆಪ್ತ ಸಂಸದ ಅಜಯ್ ಸಂಚೇತಿ ಅವರಿಗೆ ನಿಯಮಗಳನ್ನು ಮೀರಿ ನೀರಾವರಿ ಗುತ್ತಿಗೆ ನೀಡಲಾಗಿದೆ.
* ನಿಯಮಗಳ ಪ್ರಕಾರ ಒಬ್ಬರು ಮೂರು ಗುತ್ತಿಗೆಗಳಿಗಿಂತ ಹೆಚ್ಚಿನ ಗುತ್ತಿಗೆ ಹೊಂದಿರುವಂತಿಲ್ಲ. ಆದರೆ, ಸಂಚೇತಿಗೆ ಹೆಚ್ಚಿನ ಗುತ್ತಿಗೆ ನೀಡಲಾಗಿದೆ.
* ವಿದರ್ಭ ನೀರಾವರಿ ಅಭಿವೃದ್ಧಿ ಮಂಡಳಿಯಿಂದ ಬೇರೆ ಬೇರೆ ಹೆಸರಿನಲ್ಲಿ ಮೂರಕ್ಕೂ ಅಧಿಕ ಗುತ್ತಿಗೆ ನೀಡಲಾಗಿದೆ. ಇದರ ನೇರ ಲಾಭ ಗಡ್ಕರಿಗೆ ಆಗುತ್ತಿದೆ.

* ನೀರಾವರಿ ಯೋಜನೆಯಡಿಯಲ್ಲಿ ಕಟ್ಟಲಾದ ಅಣೆಕಟ್ಟಿನಿಂದ ಗಡ್ಕರಿ ಕಂಪನಿಗಳಿಗೆ ಮಾತ್ರ ನೀರು ಒದಗಿಸಲಾಗಿದೆ ರೈತರಿಗೆ ನೀರು ಸಿಕ್ಕೇ ಇಲ್ಲ.
* 2008ರಲ್ಲಿ ರೈತರನ್ನು ಒಕ್ಕಲೆಬ್ಬಿಸಿ ಗಡ್ಕರಿ ಕಂಪನಿಗೆ ಜಮೀನು ಒದಗಿಸಲಾಯಿತು. ರೈತರು ಪೊಲೀಸ್ ದೂರು ನೀಡಿದ್ದು ಕಸದ ಬುಟ್ಟಿ ಸೇರಿತು.
* ತಾವು ಹೇಳಿದವರ ಹೆಸರಿಗೆ ಲೀಸ್ ಆಧಾರ ಮೇಲೆ 11 ಎಕರೆ ಭೂಮಿ ನೀಡುವಂತೆ ಅಜಿತ್ ಪವಾರ್ ಅವರಿಗೆ ಗಡ್ಕರಿ ಪತ್ರ ಬರೆದಿದ್ದಾರೆ.

ಅಂಜಲಿ ದಾಮಾನಿಯಾ: ನಿತಿನ್ ಗಡ್ಕರಿ ವಿರುದ್ಧ 70,000 ಕೋಟಿ ನೀರಾವರಿ ಹಗರಣದ ಆರೋಪದ ದಾಖಲೆ ಒದಗಿಸಿದ ಸಾಮಾಜಿಕ ಕಾರ್ಯಕರ್ತೆ ಅಂಜಲಿ ಅವರು ಗಡ್ಕರಿ ವಿರುದ್ಧ ಮುಂಬೈ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಮುಂಬೈಗೆ ಬಂದಿದ್ದ ಗಡ್ಕರಿಯನ್ನು ಆರೋಪದ ಬಗ್ಗೆ ಪ್ರಶ್ನಿಸಿದ ಅಂಜಲಿಗೆ ಸಿಕ್ಕ ಉತ್ತರ ಕೇಳಿ ಶಾಕ್ ಆಗಿದೆ. ಶರದ್ ಪವಾರ್ ನನ್ನ ಆಪ್ತ ಗೆಳೆಯ ನೆನಪಿರಲಿ ಎಂದು ಹೇಳಿ ಗಡ್ಕರಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.

ವಿದರ್ಭ ರೈತರ ಆತ್ಮಹತ್ಯೆ ಹಿಂದೆ ಈ ಭಾರಿ ನೀರಾವರಿ ಹಗರಣವೇ ಕಾರಣ. ರೈತರ ಭೂಮಿಯನ್ನು ಕಸಿದುಕೊಂಡು ಗಡ್ಕರಿಗೆ ಅಜಿತ್ ಪವಾರ್ ನೀಡಿದ್ದಾರೆ ಎಂದು ಅಜಿತ್ ಪವಾರ್ ಸಹಿ ಹಾಕಿದ ಪತ್ರವನ್ನು ತೋರಿಸಿದರು. ನಂತರ ಅಣೆಕಟ್ಟಿನ ಚಿತ್ರ ಹಾಗೂ ಗಡ್ಕರಿ ಕಂಪನಿಗೆ ನೀರು ಹರಿಸಿದ ಚಿತ್ರ ತೋರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+