ಹರ್ಯಾಣ ಹಾರರ್: ಗೃಹಿಣಿ ಮೇಲೆ ಕಾಮಪಿಶಾಚಿಗಳ ದಾಳಿ

Haryana
ಚಂಡೀಗಢ, ಅ.17: ರಾಜ್ಯದ ಮಹಿಳೆಯರ ಮಾನ ಹರಣಕ್ಕೆ ತಮ್ಮದೇ ಆದ ರೀತಿಯಲ್ಲಿ ನೀತಿ ನಿಯಮ ರೂಪಿಸುವುದರಲ್ಲಿ ಮಗ್ನರಾಗಿರುವ ಖಾಪ್ ಗಳ ಕಿವಿ ಕೆಪ್ಪಾಗಿದೆ. ಕಳೆದ 40 ದಿನಗಳಲ್ಲಿ 18ನೇ ಅತ್ಯಾಚಾರ ಪ್ರಕರಣ 'ರೇಪಿಸ್ಟ್ ರಾಜಧಾನಿ' ಹರ್ಯಾಣದಲ್ಲಿ ದಾಖಲಾಗಿದೆ.

ರೋಹಕ್ ನ ಲಖನ್ ಮಜ್ರಾ ಗ್ರಾಮದಲ್ಲಿ 30 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಅ.13 ರ ಆಸು ಪಾಸಿನಲ್ಲಿ ಈ ಪ್ರಕರಣ ನಡೆದಿರುವ ಸಾಧ್ಯತೆಯಿದ್ದು, ಪ್ರಕರಣ ಮುಚ್ಚಿ ಹಾಕಲು ಎಲ್ಲಾ ರೀತಿ ಪ್ರಯತ್ನಗಳು ನಡೆದಿತ್ತು ಎನ್ನಲಾಗಿದೆ.

ಇಬ್ಬರು ದುಷ್ಕರ್ಮಿಗಳು ಮಹಿಳೆಯನ್ನು ಬೈಕಿನಲ್ಲಿ ಚಲಿಸುತ್ತಲೇ ಎಳೆದೊಯ್ದಿದ್ದಾರೆ. ಗ್ರಾಮದ ಹೊರಭಾಗಕ್ಕೆ ಬಂದ ಮೇಲೆ ಆಕೆ ಮೇಲೆ ರಕ್ಕಸರ ರೀತಿ ಎಗೆರಿ ತಮ್ಮ ಕಾಮತೃಷೆಯನ್ನು ತೀರಿಸಿಕೊಂಡಿದ್ದಾರೆ. ಇನ್ನೂ ದುರಂತ ಸಂಗತಿಯೆಂದರೆ, ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಪತಿಯ ಸಂಬಂಧಿಕರೇ ಈ ದುಷ್ಕೃತ್ಯ ಎಸೆಗಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳೀಯ ಪೊಲೀಸರು ಐಪಿಸಿ ಸೆಕ್ಷನ್ 376ರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಗುರುವಾರ(ಅ.18) ಆರೋಪಿಗಳನ್ನು ಕೋರ್ಟಿಗೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಹರ್ಯಾಣ ಸರ್ಕಾರ 24 ತಾಸುಗಳ ಸಹಾಯವಾಣಿ 81466-93100 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಳ ಸೇರಿದಂತೆ ಹಲವಾರು ಮಹತ್ವದ ಕ್ರಮಗಳನ್ನು ಪ್ರಕಟಿಸಿದೆ ಎಂದು ಪಂಚಕುಲದ ಪೊಲೀಸರು ಹೇಳಿದ್ದಾರೆ.

ರೋಹ್ತಕ್, ಹಿಸಾರ್, ಜಿಂದ್, ಭಿವಾನಿ, ಯಮುನಾನಗರ, ಪಾಣಿಪತ್, ಸೋನಿಪತ್, ಅಂಬಾಲಾ, ಕರ್ನಲ್ ಮತ್ತು ಫರೀದಾಬಾದ್ ಪೊಲೀಸ್ ಠಾಣೆಗಳಲ್ಲಿ ಬಲಾತ್ಕಾರ ಮತ್ತು ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣಗಳು ದಾಖಲಾಗಿವೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನರ್ವಾಣಾಗೆ ಭೇಟಿ ನೀಡಿ, ಸಾಮೂಹಿಕ ಅತ್ಯಾಚಾರಕ್ಕೊಳಗಾದ ದಲಿತ ಯುವತಿಯ ಕುಟುಂಬವನ್ನು ಭೇಟಿ ಮಾಡಿ, ಸಾಂತ್ವನ ಹೇಳಿ, ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದರು.

ಖಾಪ್ ಪಂಚಾಯಿತಿ ಮುಖ್ಯಸ್ಥರು, ಮದುವೆ ವಯಸ್ಸಿನ ಬಗ್ಗೆ ತಾರತಮ್ಯ ತೆಗೆದಿದ್ದರು. ಈಗ ಚಾಲ್ತಿಯಲ್ಲಿರುವ ಮದುವೆಯಾಗಲು ಬೇಕಾದ ಕನಿಷ್ಠ ವಯೋಮಿತಿಯನ್ನು ತೆಗೆದು ಹಾಕಬೇಕು. ಹುಡುಗಿಯರು ಋತುಮತಿಯಾಗುತ್ತಿದ್ದಂತೆ ಮದುವೆ ಮಾಡಿಬಿಡಬೇಕು.

ಹುಡುಗ ಹಾಗೂ ಹುಡುಗಿಯರ ವಯಸ್ಸು 16 ವರ್ಷ ಆಗುತ್ತಿದ್ದಂತೆ ಮದುವೆ ಮಾಡುವುದು ಒಳ್ಳೆಯದು. ಇದರಿಂದ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಖಾಪ್ ಪ್ರತಿನಿಧಿ ಸುಬೇ ಸಿಂಗ್ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+