ದೇವದಾಸಿ ಅಮ್ಮನಿಂದ ಪದವೀಧರ ಪುತ್ರನಿಗೆ ಮುಕ್ತಿ

dgere-graduate-son-rescued-devadasi-mother-house-arrest
ದಾವಣಗೆರೆ, ಅ.16: ಪದವಿ ವ್ಯಾಸಂಗ ಮಾಡಿದ ಪುತ್ರ ದೇವದಾಸಿ ಆಚರಣೆಗೆ ಅಂಕಿತವಾದ ಅಮ್ಮನನ್ನು ಏನಮ್ಮಾ ಇದೆಲ್ಲ ಎಂದು ಪ್ರಶ್ನಿಸಿದ್ದೇ ಬಂತು ಆ ಮಹಾತಾಯಿ ಆತನಿಗೆ ಹುಚ್ಚನ ಪಟ್ಟ ಕಟ್ಟಿ ಗೃಹಭಂಧನವನ್ನು ವಿಧಿಸಿಯೇ ಬಿಟ್ಟಳು. ಅದೂ ಎಷ್ಟು ಕಾಲ? ಬರೋಬ್ಬರಿ 17 ವರ್ಷ! 17 ವರ್ಷಗಳಿಂದ ಹೀಗೆ ಕಿಟಕಿಯ ಬೆಳಕಿಂಡಿಯಲ್ಲಿ ಪ್ರಾಜ್ಞ ಜಗತ್ತನ್ನು ನೋಡುತ್ತಾ ಅಸಹಾಯಕ ಸ್ಥಿತಿಗೆ ತಲುಪಿದ ವ್ಯಕ್ತಿಗೆ ಕೊನೆಗೂ ಮುಕ್ತಿ ಸಿಕ್ಕಿದೆ.

ಇದು ನಡೆದಿರುವುದು ಏಷ್ಯಾದ ಮ್ಯಾಂಚೆಸ್ಟರ್ ಎಂದು ಹೆಸರುವಾಸಿಯಾಗಿದ್ದ ದಾವಣಗೆರೆಯ ಜಗಳೂರು ಬಳಿಯ ಗ್ರಾಮವೊಂದರಲ್ಲಿ. ದುರ್ದೈವವೆಂದರೆ ನೂಲಿನ ಗಿರಣಿಗಳ ನಾಡಿನಲ್ಲಿ ಈ ದುರದೃಷ್ಟ ವ್ಯಕ್ತಿಯ ಮೈಮೇಲೆ ಒಂದು ನೂಲೂ ಇರಲಿಲ್ಲ. ಮಲ ಮೂತ್ರಾದಿಯಾಗಿ ಎಲ್ಲವನ್ನೂ ಆ ಕೋನೆಯಲ್ಲೇ ಮಾಡುತ್ತಾ, ಜೀವನ ದೂಡುತ್ತಿದ್ದ ನತದೃಷ್ಟ 37 ವರ್ಷದ ಕೇಶವಮೂರ್ತಿ.

ಕೇಶವಮೂರ್ತಿಯ ಸುದೀರ್ಘ ಕಾಲದ ಬಂಧನಕ್ಕೆ ಸ್ಥಳೀಯ ಶಾಸಕ, ಹಿರಿಯ ಸರಕಾರಿ ಅಧಿಕಾರಿಗಳು ಭಾನುವಾರ ಕೊನೆಗೂ ಮಂಗಳಹಾಡಿದ್ದಾರೆ. ಕೋಲಾಪುರ ಗ್ರಾಮದಲ್ಲಿ ಚೌಡಮ್ಮ ಎಂಬ ಮಹಿಳೆ 1995 ರಲ್ಲಿ ತನ್ನ ಪುತ್ರ ಕೇಶವಮೂರ್ತಿಯನ್ನು ಏಕಾಂತಕ್ಕೆ ತಳ್ಳಿದ್ದರು.

ಚೌಡಮ್ಮ ಗಂಡನಿಂದ ದೂರವಾಗಿ ದೇವದಾಸಿಯಾಗಿದ್ದಳು. ದೇವದಾಸಿ ಅಂದರೆ ಮಹಿಳೆಯರು ದೇವರ ಜತೆ ಮದುವೆಯಾಗುವುದು. ಇಂಇತಪ್ಪ ತಾಯಿ ಚೌಡಮ್ಮನನ್ನು ಹೀಗ್ಯಾಕಮ್ಮಾ ಎಂದು ಪ್ರಶ್ನಿಸಿದ್ದೇ ಕೇಶವ ಮಾಡಿದ ಮಹಾಪರಾಧವಾಗಿತ್ತು. ಕೇಶವನ ಯೌವನ ಜೀವನದ ಬಾಗಿಲು ಬಂದ್ ಮಾಡಿದ ಅಮ್ಮ ಚೌಡಮ್ಮ, ಮುಂದೆ ಆತನನ್ನು ಹೊರ ಪ್ರಪಂಚಕ್ಕೆ ತೋರಿಸಲೇ ಇಲ್ಲ.

ವಿಷಯ ತಿಳಿಯುತ್ತಿದ್ದ ಸ್ಥಳೀಯ ಆಡಳಿತ, ಪೊಲೀಸರು ಕೇಶವನನ್ನು ಬಿಡುಗಡೆಗೊಳಿಸಿದರು. ಗುಡ್ಡೆಯಂತೆ ಬೆಳೆದಿದ್ದ ಗಡ್ಡವನ್ನು ಬೋಳಿಸಿ, ಬೆಟ್ಟದಾಕಾರದಲ್ಲಿದ್ದ ತಲೆಗೂದಲನ್ನು ಕಟ್ ಮಾಡಿ, ಕೇಶವನನ್ನು ಸ್ವಚ್ಚಗೊಳಿಸಿದರು. ಮಾನಸಿಕವಾಗಿ ಮತ್ತು ದೈಹಿಕವಾಗಿ ನಿತ್ರಾಣಗೊಂಡಿದ್ದ ಕೇಶವನನ್ನು ಸೀದಾ ಬೆಂಗಳೂರಿನ ನಿಮ್ಹಾನ್ಸ್ ಗೆ ಕಳಿಸಲಾಗಿದೆ. ಹಿರಿಯ ವೈದ್ಯರ ತಂಡ ವಿಶೇಷ ಮುತುವರ್ಜಿ ವಹಿಸಿ ಕೇಶವನ ಆರೈಕೆಯಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+