ಹರ್ಯಾಣ: ಅಪ್ರಾಪ್ತೆ ಮೇಲೆ ಮುದಕನ ಕಾಮದಾಟ

Haryana Horror
ಹರ್ಯಾಣ,ಅ.14: ಹರ್ಯಾಣದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಪ್ರತಿದಿನ ಹೆಚ್ಚಾಗುತ್ತಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ. ತೆಹಬಾದ್ ನಗರದಲ್ಲಿ 60 ವರ್ಷದ ಮುದುಕನೊಬ್ಬ 13 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸೆಗಿದ ಪ್ರಕರಣ ನಡೆದಿದೆ.

ತೆಹಬಾದ್ ನಗರದಲ್ಲಿ ಹಣ್ಣು ಹಂಪಲು ಮಾರಾಟಗಾರನಾಗಿರುವ 60 ವರ್ಷದ ವ್ಯಕ್ತಿ ತನ್ನ ಮಗಳು ಶಾಲೆಗೆ ಹೋಗಿ ಬರುವಾಗ ಬಲವಂತವಾಗಿ ಎಳೆದೊಯ್ದು ಅತ್ಯಾಚಾರ ಎಸೆಗಿದ್ದಾನೆ ಎಂದು ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಅತ್ಯಾಚಾರ ಆರೋಪಿ 60 ವರ್ಷ ವಯಸ್ಸಿನ ಸೋಹನ್ ಲಾಲ್‌ನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಸ್ಥಳೀಯ ಸರಕಾರಿ ಶಾಲೆಯೊಂದರಲ್ಲಿ ಆರನೆ ತರಗತಿಯಲ್ಲಿ ಕಲಿಯುತ್ತಿದ್ದ ಈ ಬಾಲಕಿಗೆ ತಿನ್ನಲು ಹಣ್ಣು ಕೊಡುವುದಾಗಿ ಸೋಹನ್‌ಲಾಲ್ ಅಮಿಷವೊಡ್ಡಿ, ಆಕೆಯ ಮೇಲೆ ಅತ್ಯಾಚಾರ ಎಸೆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ತನ್ನ ತಂದೆಗೆ ಘಟನೆಯ ಬಗ್ಗೆ ವಿವರವಾಗಿ ಹೇಳಿದ್ದಾಳೆ. ನಂತರ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ಹಾಗೂ ಆರೋಪಿಯನ್ನು ಫತೇಬಾದ್‌ನಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ವರದಿ ಬಂದ ನಂತರ ಅತ್ಯಾಚಾರ ನಡೆದಿರುವುದು ಸಾಬೀತಾಗಿದೆ.

ಕಳೆದ ಎರಡು ತಿಂಗಳುಗಳಲ್ಲಿ ಹರ್ಯಾಣದಲ್ಲಿ ಸುಮಾರು 16ಕ್ಕೂ ಅಧಿಕ ಅತ್ಯಾಚಾರ ಪ್ರಕರಣಗಳು ವರದಿಯಾಗಿರುವುದು ಜನ ಸಾಮಾನ್ಯರನ್ನು ಆತಂಕಕ್ಕೀಡು ಮಾಡಿದೆ.

ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಹರ್ಯಾಣ ಸರ್ಕಾರ 24 ತಾಸುಗಳ ಸಹಾಯವಾಣಿ 81466-93100 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಳ ಸೇರಿದಂತೆ ಹಲವಾರು ಮಹತ್ವದ ಕ್ರಮಗಳನ್ನು ಪ್ರಕಟಿಸಿದೆ ಎಂದು ಪಂಚಕುಲದ ಪೊಲೀಸರು ಹೇಳಿದ್ದಾರೆ.

ರೋಹ್ತಕ್, ಹಿಸಾರ್, ಜಿಂದ್, ಭಿವಾನಿ, ಯಮುನಾನಗರ, ಪಾಣಿಪತ್, ಸೋನಿಪತ್, ಅಂಬಾಲಾ, ಕರ್ನಲ್ ಮತ್ತು ಫರೀದಾಬಾದ್ ಪೊಲೀಸ್ ಠಾಣೆಗಳಲ್ಲಿ ಬಲಾತ್ಕಾರ ಮತ್ತು ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣಗಳು ದಾಖಲಾಗಿವೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನರ್ವಾಣಾಗೆ ಭೇಟಿ ನೀಡಿ, ಸಾಮೂಹಿಕ ಅತ್ಯಾಚಾರಕ್ಕೊಳಗಾದ ದಲಿತ ಯುವತಿಯ ಕುಟುಂಬವನ್ನು ಭೇಟಿ ಮಾಡಿ, ಸಾಂತ್ವನ ಹೇಳಿ, ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದರು.

ಆದರೆ, ಸೋನಿಯಾಗಾಂಧಿ ಅವರು ಭೇಟಿ ನೀಡುವ ಎರಡು ದಿನ ಮೊದಲು ಹಾಗೂ ನಂತರ ಒಟ್ಟು 4 ಪ್ರಕರಣಗಳು ದಾಖಲಾಗಿದೆ.ಹರ್ಯಾಣ ಅತ್ಯಾಚಾರಗಳ ಕ್ಯಾಪಿಟಲ್ ಎಂಬ ಹಣೆಪಟ್ಟಿ ಹೊತ್ತು ತಿರುಗಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+