ಅ15 ರಿಂದ ಸಂಜೆ 6ರ ಮೇಲೆ ಪೆಟ್ರೋಲ್ ಸಿಗೋಲ್ಲ

ಸೋಮವಾರ ಮಹಾಲಯ ಅಮಾವಾಸ್ಯೆಯ ದಿನವಾದ ಅಕ್ಟೋಬರ್ 15ರಿಂದ ನಗರ ಪ್ರದೇಶದಲ್ಲಿ ಬೆಳಗ್ಗೆ 9ರಿಂದ ಸಂಜೆ 6ರ ವರೆಗೆ ಮತ್ತು ಹೊರವಲಯ ಮತ್ತು ಹೆದ್ದಾರಿಗಳಲ್ಲಿ ಸಂಜೆ ಆರರಿಂದ ಬೆಳಗ್ಗೆ 9ಗಂಟೆಯವರೆಗೆ ಮಾತ್ರ ಕಾರ್ಯ ನಿರ್ವಹಿಸಲಿವೆ.
ಸದ್ಯ ಪೆಟ್ರೋಲ್ ಮೇಲೆ ಲೀಟರ್ ಗೆ 1.55 ರೂ, ಡೀಸೆಲ್ ಮೇಲೆ ಲೀಟರ್ ಗೆ 85 ಪೈಸೆ ಕಮಿಷನ್ ಬಂಕ್ ಮಾಲೀಕರು ಪಡೆಯುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಮತ್ತು ಆಟೋ ಎಲ್ಪಿಜಿ ಮೇಲೆ ಶೇ.5ರಷ್ಟು ಕಮಿಷನ್ ನೀಡಬೇಕೆನ್ನುವುದು ಇವರ ಬೇಡಿಕೆ.
ಸದ್ಯ ನಾವು ಪಡೆಯುತ್ತಿರುವ ಕಮಿಷನ್ ನಲ್ಲಿ ಬಂಕ್ ನಿರ್ವಹಣೆ, ಕಾರ್ಮಿಕರ ವೇತನ ಇತ್ಯಾದಿಗಳಿಂದ ಕಷ್ಟವಾಗುತ್ತಿದೆ. ಹಲವು ಬಂಕ್ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಮುಷ್ಕರ ನಡೆಸದೆ ನಮಗೆ ಬೇರೆ ದಾರಿಯಿಲ್ಲ ಎನ್ನುವುದು ಬಂಕ್ ಮಾಲೀಕರ ಹೇಳಿಕೆ.
ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಪೆಟ್ರೋಲ್ ಬಂಕ್ ಮಾಲೀಕರು ಸ್ಪಷ್ಟ ಪಡಿಸಿದ್ದಾರೆ.












Click it and Unblock the Notifications