ಯಾಸಿನ್ ಭಟ್ಕಳ್ ಸಾರಥ್ಯದ ಮುಜಾಹಿದ್ದೀನ್ ಉಗ್ರರ ಸೆರೆ
ನವದೆಹಲಿ,
ಅ.11: ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ (IM) ಭಯೋತ್ಪಾದಕ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ದೆಹಲಿ ಪೊಲೀಸರು ಇದೀಗ ತಾನೆ ಬಂಧಿಸಿದ್ದಾರೆ. ಕರ್ನಾಟಕದ ಯಾಸಿನ್ ಭಟ್ಕಳ್ ಮಾರ್ಗದರ್ಶನದಲ್ಲಿ ದೆಹಲಿಯಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಈ ತಂಡ ಹೊಂಚು ಹಾಕುತ್ತಿತ್ತು ಎನ್ನಲಾಗಿದೆ. id="toptextpromo">ಈ
ಬಗ್ಗೆ ಕಾರ್ಯಾಚರಣೆ ನಡೆಸಿರುವ ದೆಹಲಿ ಪೊಲೀಸ್ ವಿಶೇಷ ಘಟಕ ಮೂವರನ್ನೂ ವಶಕ್ಕೆ ತೆಗೆದುಕೊಂಡಿದೆ. ಬಂಧಿತರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮಾರಕ ವಸ್ತುಗಳು ಮತ್ತು ಬಾಂಬ್ ತಯಾರಿಕಾ ಸಾಧನವನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ವರ್ಷ ಆಗಸ್ಟ್ ನಲ್ಲಿ ಪೂನಾದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇವರ ಕೈವಾಡವಿದೆ ಎಂದು ತಿಳಿದುಬಂದಿದೆ. id='are-slot-1' class='oiad oi-axt oiadv'> id='top-searched-articles'>ದೆಹಲಿ
ಪೊಲೀಸರು ಬಂಧಿತರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ಇಂದು ಸಂಜೆ ವೇಳೆಗೆ ಪತ್ರಿಕಾಗೋಷ್ಠಿ ನಡೆಸಿ ದೆಹಲಿ ಪೊಲೀಸರು ಹೆಚ್ಚಿನ ಮಾಹಿತಿ ನೀಡುವ ನಿರೀಕ್ಷೆಯಿದೆ.











Click it and Unblock the Notifications