ಯಕ್ಕು! ಜಿರಲೆ ತಿಂದೂ ತಿಂದೇ ಪ್ರಾಣ ಬಿಟ್ಟ ಅಮೆರಿಕದವ

ಫ್ಲೋರಿಡಾದ ಡೀರ್ ಫೀಲ್ಡ್ ಬೀಚಿನಲ್ಲಿರುವ ಬೆನ್ ಸೀಗಲ್ ರೆಪ್ಟೈಲ್ ಸ್ಟೋರ್ ಎಂಬ ಸರೀಸೃಪ ಕೇಂದ್ರದಲ್ಲಿ ಈ ಜಿರಲೆ ಮತ್ತು ಹುಳ ತಿನ್ನುವ ಸ್ಪರ್ಧೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ನಡೆದ ಸ್ಪರ್ಧೆ ವೇಳೆ ಎಡ್ವರ್ಡ್ ಆರ್ಚ್‌ಬೋಲ್ಡ್ (32) ಡಜನ್‌ಗಟ್ಟಲೆ ಜಿರಲೆಗಳು ಹಾಗೂ ಹುಳಗಳನ್ನು ಮುಕ್ಕಿದ್ದ. ಆದರೆ ಸ್ಪರ್ಧೆಯ ಮುಗಿಯುತ್ತಿದ್ದಂತೆ ಆರ್ಚ್‌ಬೋಲ್ಡ್ ವಾಂತಿ ಮಾಡಲಾರಂಭಿಸಿದ.
ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಆತ ಮೃತಪಟ್ಟ. ನಿಖರವಾಗಿ, ಸಾವಿಗೆ ಕಾರಣ ಏನೆಂಬುದನ್ನು ಪತ್ತೆ ಮಾಡಲು ವೈದ್ಯರು ಶವಪರೀಕ್ಷೆ ನಡೆಸಿದ್ದು, ವರದಿ ಇನ್ನೂ ಬಹಿರಂಗವಾಗಿಲ್ಲ. ಸ್ಪರ್ಧೆ ಗೆದ್ದಿರುವುದಕ್ಕೆ ಆರ್ಚ್‌ಬೋಲ್ಡ್ ಬಹುಮಾನವಾಗಿ ಹೆಬ್ಬಾವೊಂದನ್ನು ನೀಡಲಾಗಿತ್ತು.
ಗಮನಾರ್ಹವೆಂದರೆ, ಜಿರಳೆ ವಿಷಕಾರಿ ಅಲ್ಲ. ಜಿರಳೆಗಳು ಆರೋಗ್ಯವಾಗಿದ್ದರೆ ಖಂಡಿತ ಅದನ್ನು ತಿನ್ನಬಹುದು. ಅದು ಮನುಷ್ಯನ ಜೀವಕ್ಕೆ ಮಾರಕವಲ್ಲ ಎನ್ನುತ್ತದೆ ವೈದ್ಯಲೋಕ.


Click it and Unblock the Notifications
