ಬಿಜೆಪಿ ಬಿಡೋದು ಗ್ಯಾರಂಟಿ: ಯಡಿಯೂರಪ್ಪ ಘೋಷಣೆ

From horse's mouth ಅನ್ನುವಂತೆ ಆನೇಕಲ್ ನಲ್ಲಿ ಶಾಂತಿಧಾಮದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಯಡಿಯೂರಪ್ಪ ಅವರೇ ಇದನ್ನು ಬುಧವಾರ ಘೋಷಿಸಿದ್ದಾರೆ. ಅಂತಿಮ ವಿಧಿ-ವಿಧಾನಗಳು ನಡೆಯುತ್ತಿದ್ದು, ಡಿಸೆಂಬರ್ ವೇಳೆಗೆ ಪಕ್ಷ ಬಿಡುತ್ತೇನೆ ಎಂದು ಖುಲ್ಲಂ ಖುಲ್ಲಾ ಹೇಳಿದ್ದಾರೆ.
ಈ ಮಧ್ಯಾ ಕಾಲದಲ್ಲಿ ಬಿಜೆಪಿ ಬಿಟ್ಟು ಹೊಸ ಪಕ್ಷ ರಚಿಸುವುದೋ ಅಥವಾ ಬೇರೆ ಯಾವುದಾದರೂ ಪಕ್ಷ ಸೇರುವುದೋ ಎಂಬುದರ ಬಗ್ಗೆ ಹಿತಚಿಂತಕರ ಜತೆ ಚರ್ಚಿಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ ನೂತನ ಪಕ್ಷ ಕಟ್ಟಿದರೆ ಅದಕ್ಕೆ "ಕರ್ನಾಟಕ ಜನತಾ ಪಕ್ಷ" ಎಂದು ನಾಮಕರಣ ಮಾಡುವ ಸಾಧ್ಯತೆ ಹಚ್ಚಾಗಿದೆ. ಇಲ್ಲವೇ ಅನೇಕಾನೇಕ ರಾಜಕೀಯ ಲೆಕ್ಕಾಚಾರಗಳ ನಂತರ ಹಾಲಿ ಯಾವುದಾದರೂ ಪಕ್ಷಕ್ಕೆ ಸೇರ್ಪಡೆಯಾಗುವ ಸಾಧ್ಯತೆಯೂ ಇದೆ ಎಂದು ಯಡಿಯೂರಪ್ಪ ಒತ್ತಿ ಹೇಳಿದ್ದಾರೆ. ಏನೇ ಆಗಲಿ ಎಷ್ಟೇ ಒತ್ತಡವೇ ಬರಲಿ ಬಿಜೆಪಿ ತೊರೆಯುವದಂತೂ ಶತಃಸಿದ್ಧ ಎಂದು ಅವರು ಕೊನೆಯಲ್ಲಿ ಪುನರುಚ್ಚರಿಸಿದರು.
ಈ ಹಿಂದೆ ದಟ್ಸ್ ಕನ್ನಡ ಹೇಳಿರುವಂತೆ ನವೆಂಬರ್ 19ರಂದು ದಾವಣಗೆರೆಯಲ್ಲಿ ಸಂಸದ ಜಿಎಂ ಸಿದ್ದೇಶ್ ಮತ್ತು ಅಬಕಾರಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಯಡಿಯೂರಪ್ಪ ಅವರು ತಮ್ಮ ಜೀವಮಾನದ ರಾಜಕೀಯ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಗಳು ನಿಚ್ಚಳವಾಗಿವೆ.


Click it and Unblock the Notifications
