ದರೋಡೆಗಾಗಿ ಕೊಲೆ ಮಾಡಿದ್ದ ದುಷ್ಟರಿಗೆ ಮರಣದಂಡನೆ

Death sentence to four murderers
ಯಾದಗಿರಿ, ಅ. 10 : ದರೋಡೆ ಮಾಡಲು ಹೋಗಿ ಮೂವರನ್ನು ಕೊಡಲಿ ಮತ್ತು ಚಾಕುಗಳಿಂದ ಭೀಕರವಾಗಿ ಹತ್ಯೆಗೈದ ಆರೋಪ ಹೊತ್ತಿದ್ದ ನಾಲ್ವರು ಅಪರಾಧಿಗಳಿಗೆ ಯಾದಗಿರಿ ಸತ್ರ ನ್ಯಾಯಾಧೀಶ ಸಂಜೀವಕುಮಾರ್ ಹಂಚಾಟೆಯವರು ಮರಣದಂಡನೆ ಶಿಕ್ಷೆ ವಿಧಿಸಿ ಬುಧವಾರ, ಅ.10ರಂದು ಮಹತ್ವದ ಆದೇಶ ಹೊರಡಿಸಿದ್ದಾರೆ.

ಅಪರಾಧಿಗಳನ್ನು ಬಸವರಾಜ ಪುಲ್ಲೆಪ್ಪ ಚಿರಿಗಾರ, ಪಲ್ಲಾ ಚಿರಿಗಾರ, ಯಂಕಪ್ಪ ಚಿರಿಗಾರ ಮತ್ತು ರಮೇಶ ಚಿರಿಗಾರ ಇವರಿಗೆ ಮರಣದಂಡನೆ ಮತ್ತು 8 ಸಾವಿರ ರು. ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ. ಯಾದಗಿರಿ ತಾಲೂಕಿನ ಸೈದಾಪುರ ಠಾಣೆ ವ್ಯಾಪ್ತಿಯ ಗೊಂದೆರಗಿ ಗ್ರಾಮದಲ್ಲಿ 2009ರ ಫೆಬ್ರವರಿ 14ರ ರಾತ್ರಿ 11 ಗಂಟೆಗೆ ಭೀಕರ ಹತ್ಯಾಕಾಂಡ ನಡೆದಿತ್ತು.

ಘಟನೆಯ ವಿವರ : ಬಸವರಾಜಪ್ಪ ಗೌಡ ಎಂಬುವವರಿಗೆ ಸೇರಿದ ಹೊಲದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಆಂಧ್ರ ಮೂಲದ ಸೂರ್ಯಕಾಂತಮ್ಮ ಎಂಬಾಕೆಯ ಶೆಡ್ಡಿನ ಮೇಲೆ ದರೋಡೆಕೋರರು ದಾಳಿ ಮಾಡಿದ್ದರು. ಆಗ ಸೂರ್ಯಕಾಂತಮ್ಮಳ ಮಕ್ಕಳಾದ ಶ್ರೀನಿವಾಸ ಮತ್ತು ಶಿವರೆಡ್ಡಿಯವರನ್ನು ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದ್ದರು. ಅವರಿದ್ದ ಶೆಡ್ಡಿನ ಹೊರಗೆ ಮಲಗಿದ್ದ ಬಸವನಗೌಡ ಎಂಬುವವನನ್ನೂ ಚಾಕುವಿನಿಂದ ಚುಚ್ಚಿ ಅಪರಾಧಿಗಳು ಕೊಂದಿದ್ದರು.

ಮಕ್ಕಳನ್ನು ಬಿಡಿಸಲು ಬಂದ ಸೂರ್ಯಕಾಂತಮ್ಮಳನ್ನು ಕೂಡ ಕೊಡಲಿಯಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದರಲ್ಲದೆ, ಆಕೆಯ ಕಿವಿಯೋಲೆ ಮತ್ತು ಆಕೆಯ ಬಳಿಯಿದ್ದ ನಗದನ್ನು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಸೂರ್ಯಕಾಂತಮ್ಮಳ ಮಕ್ಕಳನ್ನು ಹತ್ಯೆಗೈದು, ಸಾಕ್ಷಿ ನಾಶಪಡಿಸಲೆಂದು ಅವರ ದೇಹಗಳನ್ನು ಹಾಸಿಗೆಯಲ್ಲಿ ಸುತ್ತಿ ಬೆಂಕಿ ಹಚ್ಚಿ ಪರಾರಿಯಾಗಿದ್ದರು.

ಸೂರ್ಯಕಾಂತಮ್ಮಳ ಚೀರಾಟವನ್ನು ಕೇಳಿ ಪಕ್ಕದ ಜಮೀನಿನಲ್ಲಿ ವಾಸವಿದ್ದ ಶ್ರೀನಿವಾಸ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ಪ್ರತ್ಯಕ್ಷದರ್ಶಿಯಾಗಿದ್ದ ಸೂರ್ಯಕಾಂತಮ್ಮ ಮತ್ತು ಶ್ರೀನಿವಾಸ ಅವರ ಸಾಕ್ಷಿ ಪಡೆದು ವಿಚಾರಣೆ ನಡೆಸಲಾಗಿತ್ತು. ಈ ಪ್ರಕರಣಕ್ಕೆ ಕುಮ್ಮಕ್ಕು ನೀಡಿದ್ದಾನೆಂದು ಆರೋಪ ಹೊತ್ತಿದ್ದ ಮೇಘನಾಥ ಎಂಬಾತನನ್ನು ನ್ಯಾಯಾಧೀಶರು ಖುಲಾಸೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+