ಮದುವೆ ವೆಬ್ ಸೈಟ್ ಗೆ ದಶಲಕ್ಷ ಅಭಿಮಾನಿಗಳು

BharatMatrimony records one million fans on Facebook
ಬೆಂಗಳೂರು, ಅ.10 : ಅನ್ ಲೈನ್ ಮೂಲಕ ಮದುವೆ ಕೂಡಿಕೆ ಮಾಡಿಸಬಲ್ಲ ಅದ್ಭುತ ತಾಣ ಭಾರತ್ ಮ್ಯಾಟ್ರಿಮೊನಿ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ದಶಲಕ್ಷ ಅಭಿಮಾನಿಗಳು ಸಂಪಾದಿಸಿ ಹೊಸ ದಾಖಲೆ ಬರೆದಿದೆ.

ಭಾರತ್ ಮ್ಯಾಟ್ರಿಮೋನಿಯ ಫೇಸ್ ಬುಕ್ ಪುಟದಲ್ಲಿ ಮದುವೆ ಸಂಬಂಧಿತ ವಿಷಯಗಳು ಚರ್ಚಿತವಾಗುತ್ತಿದೆ. ಅಲ್ಲದೆ, ಸಂಗಾತಿಯ ಹುಡುಕಾಟ, ವರ್ಚ್ಯುಯಲ್ ಜಗತ್ತಿನಲ್ಲಿ ಗಿಫ್ಟ್ ನೀಡುವುದು, ಸೋಷಿಯಲ್ ಗೇಮ್ಸ್ ಹಾಗೂ ಇತರೆ ಮನರಂಜನೆಗಳು ಸೇರಿದೆ."

ವಿಶ್ವದ ಅತಿ ದೊಡ್ಡ ಸಾಮಾಜಿಕ ಜಾಲ ತಾಣದ ಮೂಲಕ ಭಾರತ್ ಮ್ಯಾಟ್ರಿಮೊನಿ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಫೇಸ್ ಬುಕ್ ಜೊತೆ ಮದುವೆಯಾಗಿ ಸರಿ ಸುಮಾರು 9 ತಿಂಗಳಿಗೆ 1 ಮಿಲಿಯನ್ ಹಿಂಬಾಲಕರನ್ನು ಭಾರತ್ ಮ್ಯಾಟ್ರಿಮೋನಿ ಕೂಡಿ ಹಾಕಿದೆ.

ನಮ್ಮ ಗ್ರಾಹಕರೊಡನೆ ನಿರಂತರವಾಗಿ ಸಂಪರ್ಕದಲ್ಲಿರಲು ಸಾಮಾಜಿಕ ಜಾಲ ತಾಣ ಸಹಕಾರಿಯಾಗಿದೆ. ಸಕ್ರಿಯವಾಗಿ ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸಲು ಫೇಸ್ ಬುಕ್ ಉತ್ತಮ ವೇದಿಕೆ ಎಂದು ಭಾರತ್ ಮ್ಯಾಟ್ರಿಮೋನಿಯ ಸಿಇಒ ಮುರುಗವೇಲ್ ಜಾನಕಿರಾಮನ್ ಹೇಳಿದ್ದಾರೆ.

"The million fan mark on Facebook is an indication of success with engaging customers and fans and connecting them to the things they are passionate about. We appreciate and celebrate this milestone with all of them," ಎಂದು ಮಿಲಿಯನ್ ಅಭಿಮಾನಿಗಳನ್ನು ಹೊಂದಿದ ಖುಷಿಯಲ್ಲಿ ಜಾನಕಿರಾಮನ್ ಹೇಳಿದ್ದಾರೆ.

ಫೇಸ್ ಬುಕ್ ನಲ್ಲಿ ಜಾಹೀರಾತು ನೀಡುವ ಮೂಲಕ ಉತ್ತಮ ವ್ಯವಹಾರ ಕುದುರಿಸುತ್ತಿರುವ ಕಂಪನಿ/ ಬ್ರ್ಯಾಂಡ್ ಗಳಲ್ಲಿ ಭಾರತ್ ಮ್ಯಾಟಿಮೋನಿ ಅಗ್ರಗಣ್ಯ ಎನಿಸಿದೆ.

ನಾಸ್ ಕಾಮ್ ನ ಟಾಪ್ 100 ಐಟಿ ಇನ್ನೋವಟರ್ಸ್ ಪಟ್ಟಿಯಲ್ಲಿ ಟಾಪ್ 50ರಲ್ಲಿ ಭಾರತ್ ಮ್ಯಾಟ್ರಿಮೋನಿ ಕೂಡಾ ಸೇರಿದೆ. ಅತಿದೊಡ್ಡ ವೆಡ್ಡಿಂಗ್ ಫೋಟೋ ಆಲ್ಬಮ್ ತಯಾರಿಸುವ ಮೂಲಕ ಏ.14, 2012ರಲ್ಲಿ ಕಾನ್ಸಿಮ್ ಇನ್ಫೋ (ಭಾರತ್ ಮ್ಯಾಟ್ರಿಮೋನಿ ಇದರ ಭಾಗ) ಗಿನ್ನೀಸ್ ದಾಖಲೆ ಪುಸ್ತಕ ಸೇರಿದೆ.

BharatMatrimony ಬಗ್ಗೆ: 1997 ರಲ್ಲಿ ಆರಂಭವಾದ ಚೆನ್ನೈ ಮೂಲದ ಭಾರತ್ ಮ್ಯಾಟ್ರಿಮೋನಿ.ಕಾಂ ವಿಶ್ವದ ಮೊದಲ ಹಾಗೂ ಅತಿ ದೊಡ್ಡ ಆನ್ ಲೈನ್ ಮ್ಯಾಚ್ ಮೇಕಿಂಗ್ ಸಂಸ್ಥೆಯಾಗಿದೆ. ಸುಮಾರು 20 ಮಿಲಿಯನ್ ಫ್ರೋಫೈಲ್ ಗಳನ್ನು ಹೊಂದಿರುವ ಲಿಮ್ಕಾ ಬುಕ್ ಆಫ್ ರೆಕಾರ್ಡ್, ಗಿನ್ನೀಸ್ ಬುಕ್ ಆಫ್ ರೆಕಾರ್ಡ್ ಸೇರಿದಂತೆ ಹಲವು ದಾಖಲೆ ಪುಸ್ತಕ ಸೇರಿದೆ.

BharatMatrimony ಈಗ ಕಾನ್ಸಿಮ್ ಇನ್ಫೋ ಪ್ರೈ ಲಿ ಆಗಿದೆ ಪ್ರತಿಷ್ಠಿತ ಡೆಲೈಟ್ ಪ್ರಶಸ್ತಿ ತ್ವರಿತವಾಗಿ ಬೆಳೆಯುತ್ತಿರುವ ಏಷ್ಯಾ ಫೆಸಿಫಿಕ್ ಪ್ರದೇಶದ ಟಾಪ್ 500 ಕಂಪನಿ ಎಂದು ಗುರುತಿಸಲ್ಪಟ್ಟಿದೆ.

ಫೇಸ್ ಬುಕ್ ನ 500 ಮಿಲಿಯನ್ ಗೂ ಅಧಿಕ ಪ್ರತಿ ತಿಂಗಳ ವೀಕ್ಷಕ(ವಿಶ್ವದಾದ್ಯಂತ)ರನ್ನು ಹಾಗೂ 15 ಮಿಲಿಯನ್ ಭಾರತದ ವೀಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಭಾರತ್ ಮ್ಯಾಟ್ರಿಮೋನಿ ಸಫಲವಾಗಿದೆ. ಸಾಮಾಜಿಕ ಮಾಧ್ಯಮ ಈಗ ಆನ್ ಲೈನ್ ಉದ್ಯಮಕ್ಕೆ ಹೊಸ ಮಂತ್ರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+