ವಿದ್ಯಾರ್ಥಿನಿ ಮೇಲೆ ಶಾಂತಿನಿಕೇತನ ಪ್ರೊಫೆಸರ್ ಕಾಮದೃಷ್ಟಿ

Visva-Bharati professor accused of molesting PhD student
ಕೋಲ್ಕತ್ತಾ, ಅ.9: ಇಲ್ಲಿನ ಐತಿಹಾಸಿಕ ಶಾಂತಿನಿಕೇತನ ವಿಶ್ವಭಾರತಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರು ಪ್ರೊಫೆಸರ್ ರೊಬ್ಬರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಹೊರೆಸಿದ್ದಾರೆ.

ವಿಶ್ವ ಭಾರತಿ ವಿಶ್ವ ವಿದ್ಯಾಲಯದ ಪ್ರೊಫೆಸರ್, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಸಿದ್ದಾರ್ಥ್ ದೇವ್ ಮುಖ್ಯೋಪಾಧ್ಯಾಯ್ ಅವರ ಮೇಲೆ ಕೃಷಿ, ಆರ್ಥಿಕ ಹಾಗೂ ಸ್ಟಾಟಿಸ್ಟಿಕ್ಸ್ ವಿಭಾಗದ ಪಿಎಚ್ ಡಿ ವಿದ್ಯಾರ್ಥಿನಿಯೊಬ್ಬರು ಆರೋಪ ಹೊರೆಸಿದ್ದಾರೆ.

ಆರೋಪ ಕೇಳಿ ಬಂದ ತಕ್ಷಣವೇ ವಿವಿಯ ಹಿರಿಯ ಅಧಿಕಾರಿಗಳು ಆಂತರಿಕ ತನಿಖೆ ಆರಂಭಿಸಿದ್ದಾರೆ. ಸಿದಾರ್ಥ್ ಅವರು ವಿದ್ಯಾರ್ಥಿನಿಯರ ಜೊತೆ ಒಬ್ಬಂಟಿಯಾಗಿ ಪಾಠ, ವಿಶೇಷ ತರಗತಿ ತೆಗೆದುಕೊಳ್ಳುವುದನ್ನು ನಿರ್ಬಂಧಿಸಲಾಗಿದೆ ಎಂದು ವಿವಿ ಹೇಳಿದೆ.

ವಿಚಾರಣೆ ಮುಗಿಯುವ ತನಕ ಪ್ರೊಫೆಸರ್ ಅವರನ್ನು ಅಮಾನತಿನಲ್ಲಿಡಲಾಗುತ್ತದೆ. ಲೈಂಗಿಕ ದೌರ್ಜನ್ಯ ಪ್ರಕರಣವನ್ನು ವಿವಿ ರಚಿಸಿರುವ ಅಯೋಗ ತನಿಖೆ ನಡೆಸುತ್ತಿದೆ.

ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿ ಮಣಿಪುರ ಮೂಲದವಳು ಎಂದು ತಿಳಿದು ಬಂದಿದೆ. ಘಟನೆ ನಂತರ ಗಾಬರಿಗೊಂಡು ತನ್ನ ಸ್ವಂತ ಊರಿಗೆ ವಾಪಾಸ್ ಹೋಗಿದ್ದಾಳೆ. ತನಿಖಾ ಆಯೋಗದ ಮುಂದೆ ಬಂದು ನಡೆದ ಘಟನೆ ಬಗ್ಗೆ ಮಾಹಿತಿ ನೀಡುವಂತೆ ವಿವಿ ಆಕೆಗೆ ಸೂಚಿಸಿದೆ.

ಅಕ್ಟೋಬರ್ 4 ರಂದು ಈ ಘಟನೆ ನಡೆದ ಶಂಕೆ ವ್ಯಕ್ತವಾಗಿದೆ. ಮರುದಿನವೇ ವಿವಿ ಉಪ ಕುಲಪತಿಗಳಿಗೆ ಆಕೆ ದೂರು ನೀಡಿ ತನ್ನ ಊರಿಗೆ ತೆರಳಿದ್ದಾರೆ.

ಸಿದ್ದಾರ್ಥ್ ಅವರು ನನ್ನ ಮೇಲ್ವಿಚಾರಕ ಪ್ರಾಧ್ಯಾಪಕರಾಗಿದ್ದು, one-on-one ಕ್ಲಾಸ್ ತೆಗೆದುಕೊಳ್ಳುವುದು ಮಾಮೂಲಿಯಾಗಿತ್ತು, ಮೊದಲೆಲ್ಲ ಬರೀ ಅಧ್ಯಯನದ ವಿಷಯವಾಗಿ ಮಾತ್ರ ಮಾತನಾಡುತ್ತಿದ್ದರು.

ಆದರೆ, ನಂತರ ನನ್ನ ಮೇಲೆ ಕಾಮದೃಷ್ಟಿ ಬೀರಿ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದರು. ಪಿಎಚ್ ಡಿ ಮುಗಿಸಬೇಕಾದರೆ ನನ್ನ ಜೊತೆ ಹಾಸಿಗೆ ಹಂಚಿಕೊಳ್ಳಲೇಬೇಕು ಎಂದು ಎಚ್ಚರಿಸಿದರು. ನಾನು ಹೇಗೂ ಅವರ ಕಪಿಮುಷ್ಟಿಯಿಂದ ಬಚಾವಾದೆ. ನನಗೆ ರಕ್ಷಣೆ ಬೇಕಿದೆ ಎಂದು ಮಣಿಪುರದ ವಿದ್ಯಾರ್ಥಿನಿ ತನ್ನ ದೂರಿನಲ್ಲಿ ಹೇಳಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+