ಕರ್ನಾಟಕ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ

Jayalalithaa
ಚೆನ್ನೈ, ಅ.9: ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕಾವೇರಿ ನದಿ ಪ್ರಾಧಿಕಾರ ನೀಡಿದ ಆದೇಶ ಹಾಗೂ ಸುಪ್ರೀಂಕೋರ್ಟ್ ಸೂಚನೆಯನ್ನು ಕರ್ನಾಟಕ ಬದಿಗೊತ್ತಿ ದೊಡ್ಡ ತಪ್ಪು ಎಸೆಗಿದೆ. ಸುಪ್ರೀಂಕೋರ್ಟ್ ಆದೇಶ ಪಾಲಿಸದೆ ನ್ಯಾಯಾಂಗ ನಿಂದನೆ ಮಾಡಿದೆ. ಕರ್ನಾಟಕ ಸರ್ಕಾರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಚಿಂತನೆ ನಡೆದಿದೆ ಎಂದು ತಮಿಳುನಾಡು ಸರ್ಕಾರಿ ಮೂಲಗಳು ಹೇಳಿದೆ.

ಸುಪ್ರೀಂಕೋರ್ಟ್ ನಲ್ಲಿ ತಮಿಳುನಾಡು ಪರ ವಕೀಲ ವೈದ್ಯನಾಥನ್ ಅವರನ್ನು ತರಾಟೆಗೆ ತೆಗೆದುಕೊಂಡು, ಕರ್ನಾಟಕ ನ್ಯಾಯಾಲಯದ ಆದೇಶವನ್ನು ಪರಿಪಾಲಿಸಿದೆ ಅದರಂತೆ ನೀರನ್ನು ಬಿಟ್ಟಿದೆ. ಇದಕ್ಕೇನು ಹೇಳುತ್ತೀರಿ? ಎಂದು ಗದರಿಸಿಕೊಂಡಿತು.

ಸುಮಾರು 15 ಲಕ್ಷ ಎಕರೆ ಭೂಮಿಯಲ್ಲಿನ ಸಾಂಬಾ ಭತ್ತದ ಬೆಳೆ ಉಳಿಸಲು ತಮಿಳುನಾಡಿಗೆ ಅಕ್ಟೋಬರ್ 1, 2012 ರಿಂದ ಜನವರಿ 31, 2013ರ ತನಕ ಸುಮಾರು 123 ಟಿಎಂಸಿ ಅಡಿ ಅಥವಾ ಪ್ರತಿದಿನ ಸರಾಸರಿ 1 ಟಿಎಂಸಿ ಪೂರೈಕೆ ಮಾಡಬೇಕಿದೆ. ತಮಿಳ್ಯುನಾಡು ಒಟ್ಟಾರೆ 38 ಟಿಎಂಸಿ ಅಡಿ ನೀರಿಗೆ ಬೇಡಿಕೆ ಸಲ್ಲಿಸಿತ್ತು.

ಕರ್ನಾಟಕದ ತಪ್ಪೇನಿಲ್ಲ: ಕಾವೇರಿ ನದಿ ಪ್ರಾಧಿಕಾರ ನೀಡಿರುವ ಆದೇಶವನ್ನು ಪಾಲಿಸಿ ಕರ್ನಾಟಕ ಸರ್ಕಾರ 9 ಸಾವಿರ ಕ್ಯೂಸೆಕ್ಸ್ ಗೂ ಅಧಿಕ ನೀರು ಬಿಟ್ಟಿರುವುದರಿಂದ ಮಧ್ಯಂತರ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡಲು ನಿರಾಕರಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.

ನೀರು ಬಿಡುವ ವಿಷಯವನ್ನು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕಾವೇರಿ ನದಿ ಪ್ರಾಧಿಕಾರದ ಮುಂದೆ ಇತ್ಯರ್ಥಮಾಡಿಕೊಳ್ಳಿ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಹೀಗಾಗಿ ಸುಪ್ರೀಂಕೋರ್ಟ್ ನಿಯಮ ತಪ್ಪದೇ ಪಾಲಿಸಿರುವ ಕರ್ನಾಟಕ ಸರ್ಕಾರಕ್ಕೆ ನ್ಯಾಯಾಂಗ ನಿಂದನೆ ಕೇಸ್ ಯಾವುದೇ ತೊಂದರೆ ನೀಡುವ ಲಕ್ಷಣಗಳು ಕಂಡು ಬಂದಿಲ್ಲ.

ಈ ನಡುವೆ ಪ್ರಾಧಿಕಾರ ನೇಮಿಸಿದ ನೀರಾವರಿ ಅಧ್ಯಯನ ತಂಡ ತನ್ನ ವರದಿಯನ್ನು ಅಕ್ಟೋಬರ್ 11 ರಂದು CRAಗೆ ಸಲ್ಲಿಸುವ ಸಾಧ್ಯತೆಯಿದ್ದು, ನಂತರವಷ್ಟೇ ಪ್ರಧಾನಿ ಮನಮೋಹನ್ ಸಿಂಗ್ ಅವರು ಎರಡೂ ರಾಜ್ಯಗಳ ಮುಖಂಡರೊಡನೆ ಸಭೆ ನಡೆಸಲಿದ್ದಾರೆ ಎಂಬ ಸುದ್ದಿಯಿದೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+