ಬ್ರೇಕಿಂಗ್ ನ್ಯೂಸ್: ತಮಿಳುನಾಡಿಗೆ ನೀರು ಸ್ಥಗಿತ

ಕೃಷ್ಣರಾಜಸಾಗರ ಅಣೆಕಟ್ಟಿನಿಂದ ಐದು ಕ್ರೈಸ್ಟ್ ಗೇಟ್ ಮೂಲಕ ತಮಿಳುನಾಡಿಗೆ ಹರಿದು ಹೋಗುತ್ತಿದ್ದ ನೀರನ್ನು ಇದೀಗ ಸ್ವಲ್ಪ ಹೊತ್ತಿಗೆ (ರಾತ್ರಿ 8ಗಂಟೆಗೆ) ಮುನ್ನ ಸ್ಥಗಿತಗೊಳಿಸಲಾಗಿದೆ ಎಂದು ಕೆಆರ್ಎಸ್ ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್ ಮಾಧ್ಯಮದವರಿಗೆ ಸ್ಪಷ್ಟ ಪಡಿಸಿದ್ದಾರೆ.
ಕೆಆರ್ಎಸ್ ನಿಂದ ಇದುವರೆಗೆ ಮೂರುವರೆ ಟಿಎಂಸಿ ನೀರು ಹರಿದು ಹೋಗಿದ್ದು 19 ಟಿಎಂಸಿ ಬಾಕಿ ಉಳಿದಿದೆ.
ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿದು ಹೋಗುವ ಸಾಧ್ಯತೆ ತೀರಾ ಕಮ್ಮಿಯಿದ್ದು ಯಾಕೆಂದರೆ ಇನ್ನು ಒಂದು ಅಡಿ ನೀರು ಹರಿದು ಹೋದರೂ ನೀರನ್ನು ಪಂಪ್ ಮಾಡಿ ತೆಗೆಯುವ ಪರಿಸ್ಥಿತಿ ಬರಲಿದೆ.
ಸರಕಾರ ನೀರು ಬಿಡುಗಡೆ ಸ್ಥಗಿತಗೊಳಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ನಮ್ಮ ಹೋರಾಟವನ್ನು ನಿಲ್ಲಿಸಲಿದ್ದೇವೆ. ಆದರೂ ನಮ್ಮ ರೈತರು ಎರಡೂ ಜಲಾಶಯದಲ್ಲಿನ ನೀರಿನ ಹರಿವಿನ ಬಗ್ಗೆ ವಾಸ್ತವ ಸ್ಥಿತಿಯನ್ನು ಅರಿದು ಕೊಳ್ಳಲಿದ್ದಾರೆಂದು ಹೇಳಿದ್ದಾರೆ.
ಕಾವೇರಿ ಜಲಾಯನ ಪ್ರದೇಶದ ರೈತರು ಪಟಾಕಿ ಸಿಡಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.












Click it and Unblock the Notifications