ವಿಚಾರಣೆ ಶುಕ್ರವಾರಕ್ಕೆ ಮುಂದೂಡಿದ ಸುಪ್ರೀಂಕೋರ್ಟ್

ನೀರು ನಿಲ್ಲಿಸುವ ಮಾತೇ ಇಲ್ಲ- ಪ್ರಧಾನಿ: ಈ ಮದ್ಯೆ, ಕಾವೇರಿ ಪ್ರಾಧಿಕಾರದ ಆದೇಶವನ್ನು ರದ್ದುಪಡಿಸುವ ಮಾತೇ ಇಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ ಎನ್ನಲಾಗಿದೆ.
ಇಂದು ಬೆಳಗ್ಗೆ ತಮ್ಮನ್ನು ಭೇಟಿ ಮಾಡಿದ ಬಿಜೆಪಿ ಸಂಸದರ ಜತೆ ಮಾತನಾಡಿದ ಪ್ರಧಾನಿ ಸಿಂಗ್ ಅವರು 'ತಮಿಳುನಾಡಿಗೆ ಕಾವೇರಿ ನೀರು ಹರಿಯುವುದನ್ನು ನಿಲ್ಲಿಸಲು ನನ್ನಿಂದ ಸಾಧ್ಯವಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಇನ್ನೊಂದೆರಡು ದಿನದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ ಎಂದು ದೆಹಲಿ ಮೂಲಗಳು ಹೇಳಿವೆ.
'ಯಾವುದೇ ಕಾರಣಕ್ಕೂ ಈ ಹಿಂದೆ ಕಾವೇರಿ ಪ್ರಾಧಿಕಾರದ ಅಧ್ಯಕ್ಷನಾಗಿ ತಮಿಳುನಾಡಿಗೆ 9 ಸಾವಿರ ಕ್ಯುಸೆಕ್ ನೀರು ಹರಿಸಬೇಕು' ಎಂದು ನಾನೇ ನೀಡಿದ್ದ ಆದೇಶವನ್ನು ನಾನು ವಾಪಸ್ ಪಡೆಯುವುದಕ್ಕೆ ಸುತರಾಂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಶೆಟ್ಟರ್ ನೇತೃತ್ವದ ಬಿಜೆಪಿ ಸಂಸದರಿಗೆ ಪ್ರಧಾನಿ ಖಂಡತುಂಡವಾಗಿ ಹೇಳಿದ್ದಾರೆ.
ಆದರೂ ಸದ್ಯದಲ್ಲೇ ಎರಡೂ ರಾಜ್ಯಗಳ ಮುಖ್ಯ ಕಾರ್ಯರ್ದರ್ಶಿಗಳ ಸಭೆಯನ್ನು ಕರೆದು ಮಾತುಕತೆ ನಡೆಸುವೆ ಎಂದು ಪ್ರಧಾನಿ ಸಿಂಗ್ ಹೇಳಿದ್ದಾರೆ. ಈಗಾಗಲೇ ಕೇಂದ್ರದ ಉನ್ನತಾಧಿಕಾರಿಗಳ ತಂಡವೊಂದು ಎರಡೂ ರಾಜ್ಯಗಳಲ್ಲಿ ಅಡ್ಡಾಡಿ ವಾಪಸಾಗಿದ್ದಾರೆ. ಇನ್ನೇನು ನಾಳೆ ಪ್ರಧಾನಿಗೆ ತಮ್ಮ ಅಧ್ಯಯನ ವರದಿಯನ್ನು ಒಪ್ಪಿಸಲಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಹೀಗೆ ಮತ್ತೊಮ್ಮೆ ಅಧಿಕಾರಿಗಳ ಮಟ್ಟದ ಮಾತುಕತೆಗೆ ಯಾಕೆ ಒಲವು ತೋರಿದ್ದಾರೋ ತಿಳಿಯದಾಗಿದೆ. ಇದೊಂದು ಕಾಲಹರಣ ಮತ್ತು ವಿಳಂಬಗೊಳಿಸುವ ತಂತ್ರವಾಗಿದೆ ಎಂದು ವಿಶ್ಲೇಷಿಸಲಾಗಿದೆ.












Click it and Unblock the Notifications