ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೂಲ್ಯಳನ್ನು ದತ್ತು ಪಡೆದ ಬಿಎಸ್ ಯಡಿಯೂರಪ್ಪ

By Mahesh
|
Google Oneindia Kannada News

Yeddyurappa renews Animal Adoption
ಮೈಸೂರು, ಅ.7: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಇಲ್ಲಿನ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಈ ಹಿಂದೆ ದತ್ತು ಪಡೆದಿದ್ದ ಹುಲಿಯನ್ನು ಮತ್ತೊಮ್ಮೆ ದತ್ತು ಪಡೆದಿದ್ದಾರೆ.

ಅ.10 ರಿಂದ ಒಂದು ವರ್ಷ ಅವಧಿಗೆ ಹುಲಿ ಅಮೂಲ್ಯಳ ಖರ್ಚು ವೆಚ್ಚಕ್ಕೆ ದತ್ತು ಸ್ವೀಕಾರ ಶುಲ್ಕ ಒಂದು ಲಕ್ಷ ರೂ.ಪಾವತಿಸಿ ನವೀಕರಿಸಿದ್ದಾರೆ. ಈ ಹುಲಿಯನ್ನು ನಿರಂತರ ಐದನೇ ಬಾರಿಗೆ ಅಂದರೆ 2008, ಅ.10ರಂದು ದತ್ತು ಸ್ವೀಕರಿಸಿದ್ದರು.

2012 ಏ.1ರಿಂದ ಇಲ್ಲಿಯವರೆಗೆ ಒಟ್ಟು 172 ಪ್ರಾಣಿಗಳನ್ನು ದತ್ತು ಕೊಡಲಾಗಿದ್ದು, 123 ಜನರು ದತ್ತು ಸ್ವೀಕರಿಸಿದ್ದಾರೆ. ಇದಕ್ಕಾಗಿ ಅವರು 17,17,034 ರೂ.ಪಾವತಿಸಿದ್ದಾರೆ ಎಂದು ಮೃಗಾಲಯ ಆಡಳಿತ ತಿಳಿಸಿದೆ.

2011-12ರಲ್ಲಿ ಸುಮಾರು 286 ಜನರು 375 ಪ್ರಾಣಿಗಳನ್ನು ದತ್ತು ಸ್ವೀಕರಿಸಿದ್ದಾರೆ ಹಾಗೂ 34,55,283 ರು ಸಂಗ್ರಹವಾಗಿದೆ ಎಂದು ಮೃಗಾಲಯದ ವೆಬ್ ತಾಣ ಪ್ರಕಟಿಸಿದೆ.

ಪ್ರಾಣಿ ದತ್ತು ಸ್ವೀಕಾರ ಸುಲಭ: ಮೈಸೂರು ಮೃಗಾಲಯದ ಪ್ರಾಣಿ ದತ್ತು ಪಡೆಯುವ ಯೋಜನೆಯನ್ನು ಮೃಗಾಲಯ ಪ್ರಾಧಿಕಾರ ನೂತನ ಯೋಜನೆ ಪರಿಚಯಿಸಿದೆ. ಪ್ರಾಣಿ ದತ್ತು ಸ್ವೀಕಾರದ ಬಗ್ಗೆ ವಿವಿಧ ಪ್ರಾಣಿಗಳ ದತ್ತು ಸ್ವೀಕಾರದ ಮೌಲ್ಯಗಳನ್ನು ಇಲಾಖೆ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ಪ್ರಾಣಿಗಳನ್ನು ದತ್ತು ಪಡೆದುಕೊಳ್ಳುವವರು ಹಾಗೂ ಮೃಗಾಲಯಕ್ಕೆ ಕೊಡುಗೆಗಳನ್ನು ನೀಡಲು ಬಯಸುವ ದಾನಿಗಳು ಹಣವನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ,

Member Secretary - Zoo Authority of Karnataka

IFSC : SYN B0001720

A/C No : 1720-214-0000028

ನಿಗದಿತ ಹಣವನ್ನು ವರ್ಗಾಯಿಸಬಹುದಾಗಿದೆ.

ಮೃಗಾಲಯ ಖಾತೆಯಲ್ಲಿ ಸ್ವೀಕೃತವಾದ ಅಂಶವು ಸ್ಥಿರಪಟ್ಟ ಕೂಡಲೇ ಮೃಗಾಲಯವು ಅಂತಹವರಿಗೆ ದತ್ತು ಸ್ವೀಕಾರ ಪ್ರಮಾಣ ಪತ್ರ, ಪಾಸ್‌, ಇತ್ಯಾದಿಗಳನ್ನು ನೀಡಲಿದೆ. ದತ್ತು ಸ್ವೀಕಾರದಿಂದ ಆದಾಯ ತೆರಿಗೆ ನಿಯಮಾವಳಿಗಳ ನಿಯಮ 80 ಅಡಿಯಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ಕೂಡಾ ಇದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ವೆಬ್ ತಾಣ: www.mysorezoo.info
ಇಮೇಲ್ ಮಾಡಿ: [email protected]

ಶ್ರೀ ಚಾಮರಾಜೇಂದ್ರ ಮೃಗಾಲಯ
ಇಂದಿರಾನಗರ, ಮೈಸೂರು- 570 010
ಸಂಪರ್ಕಿಸಿ: 0821-2440752, 0821-2520302
ಫ್ಯಾಕ್ಸ್ ಸಂಖ್ಯೆ: 0821-2563494

ಮಂಗಳವಾರ ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 8.30 ರಿಂದ ಸಂಜೆ 5.30 ರವರೆಗೂ ಮೃಗಾಲಯ ಸಾರ್ವಜನಿಕರಿಗೆ ಪ್ರವೇಶ ಅವಕಾಶ ಇರುತ್ತದೆ. ಪ್ರವೇಶ ಶುಲ್ಕ ಹಿರಿಯರಿಗೆ 40 ರು, ಕಿರಿಯರಿಗೆ (5ರಿಂದ 12 ವರ್ಷ) 20 ರು. 5 ವರ್ಷ ಕೆಳಗಿನ ಮಕ್ಕಳಿಗೆ ಪ್ರವೇಶ ಉಚಿತ.

English summary
Former CM Yeddyurappa has renewed Tiger adoption from Mysore zoo. Yeddyurappa paid Rs 1,00,000 to Tiger said Mysore zoo authority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X