ಕಾವೇರಿ ವಿವಾದ:ನಾನ್ಯಾಕೆ ರಾಜೀನಾಮೆ ನೀಡಲಿ?

ರಾಜ್ಯ ಸರಕಾರ ಕಾವೇರಿ ನದಿ ನೀರಿನ ವಿಚಾರದಲ್ಲಿ ಪ್ರಾಧಿಕಾರದ ಎದುರಾಗಲಿ ಅಥವಾ ಸುಪ್ರೀಂಕೋರ್ಟಿನ ಎದುರಾಗಲಿ ಸರಿಯಾದ ವಾದ ಮಂಡಿಸಲಿಲ್ಲ. ಇದರಿಂದ ಕರ್ನಾಟಕಕ್ಕೆ ನ್ಯಾಯ ಸಿಗಲಿಲ್ಲ, ಇವರ ಬೇಜವಾಬ್ದಾರಿತನಕ್ಕೆ ನಾನ್ಯಾಕೆ ರಾಜೀನಾಮೆ ನೀಡಲಿ ಎಂದು ವಿಶ್ವನಾಥ್ ಹೇಳಿದ್ದಾರೆ.
ವಿವಾದಕ್ಕೆ ಸರಕಾರದ ವೈಫಲ್ಯತೆಯೇ ಕಾರಣ. ಪ್ರಧಾನಿ ಮನಮೋಹನ್ ಸಿಂಗ್ ನಿರ್ಧಾರಕ್ಕೆ ನನ್ನ ಸಹಮತವಿದೆ. ಜೆಡಿಎಸ್ ಶಾಸಕರ ರಾಜೀನಾಮೆಯಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ವಿಶ್ವನಾಥ್ ಮೈಸೂರಿನಲ್ಲಿ ಇಂದು (ಅ 1) ಹೇಳಿದ್ದಾರೆ.
ಚಾಮರಾಜನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಜಿಲ್ಲಾ ಹಾಲು ಒಕ್ಕೂಟದ ಸಂಘಟನೆಯವರು ' ಹಾಲು ಬೇಕಾ, ಕೇಳಿ.. ಮೊಸರು ಬೇಕಾ ಕೇಳಿ.. ಆದರೆ ನೀರು ಮಾತ್ರ ಕೇಳಬೇಡಿ' ಎಂದು ಪ್ರತಿಭಟನೆ ನಡೆಸಿದ್ದಾರೆ.
ರಾಮನಗರದಲ್ಲಿ ಬೈಕ್ ಜಾಥಾ ಉದ್ಘಾಟಿಸಿ ಮಾತನಾಡಿದ ನಂಜಾವಧೂತ ಸ್ವಾಮೀಜಿಗಳು, ಯಾವ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ರಾಜ್ಯದ ಎಲ್ಲಾ ಶಾಸಕರು, ಸಂಸದರು ಕಾವೇರಿ ಚಳುವಳಿಯಲ್ಲಿ ಪಾಲ್ಗೊಳ್ಳ ಬೇಕೆಂದು ಆಗ್ರಹಿಸಿದ್ದಾರೆ.












Click it and Unblock the Notifications