ಕಾವೇರಿ: ಮನಮೋಹನ್ ಸಿಂಗ್- ದೇವೇಗೌಡ ಭೇಟಿ

ಕಾವೇರಿ ನದಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಪ್ರಧಾನಿ ಸಿಂಗ್ ಅವರನ್ನು ರಾಜಧಾನಿ ದೆಹಲಿಯ ರೇಸ್ ಕೋರ್ಸ್ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಭೇಟಿ ಮಾಡಿದ ದೇವೇಗೌಡರು ಸುಮಾರು ಅರ್ಧ ಗಂಟೆ ಕಾಲ ಕಾವೇರಿ ನದಿ ನೀರು ಹಂಚಿಕೆ ಕುರಿತು ಮಾತುಕತೆ ನಡೆಸಿದರು.
ರಾಜ್ಯದಲ್ಲಿ ಸರಿಯಾಗಿ ಮುಂಗಾರು ಮಳೆ ಆಗದಿರುವ ಬಗ್ಗೆ ಮತ್ತು ಬರ ಪರಿಸ್ಥಿತಿಯ ಬಗ್ಗೆ ಸಾದ್ಯಂತವಾಗಿ ಪ್ರಧಾನಿ ಸಿಂಗ್ ಅವರಿಗೆ ವಿವರಿಸಿದೆ. 'ತಮಿಳುನಾಡಿಗೆ ನೀರು ಬಿಡುವುದರಿಂದ ಕರ್ನಾಟಕದ ರೈತರಿಗೆ ಅನ್ಯಾಯವಾಗುತ್ತದೆ ಮತ್ತು ಕುಡಿಯುವ ನೀರಿಗೂ ತತ್ವಾರ ಬರುತ್ತದೆ' ಎಂದು ಪ್ರಧಾನಿ ಸಿಂಗ್ ಮನದಟ್ಟುಪಡಿಸಿದೆ ಎಂದು ದೇವೇಗೌಡರು ಭೇಟಿಯ ಬಳಿಕ ಸುದ್ದಿಗಾರರಿಗೆ ಹೇಳಿದರು.
ಕಾವೇರಿದ ಚರ್ಚೆ ನಡೆಯದಿದ್ದರೆ ರಾಜೀನಾಮೆ- ದೇವೇಗೌಡ: ಕಾವೇರಿ ನದಿ ನೀರು ಹಂಚಿಕೆ ವಿಚಾರದ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಸ್ಪೀಕರ್ ಮೀರಾಕುಮಾರಿ ಅವರಿಗೆ ಮನವಿ ಮಾಡುವೆ. ಒಂದು ವೇಳೆ, ಅವರು ಚರ್ಚೆಗೆ ಅವಕಾಶ ನೀಡದಿದ್ದರೆ ತಮ್ಮ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ಘೋಷಿಸಿದ್ದಾರೆ.












Click it and Unblock the Notifications