ಡಿಸೆಂಬರ್ ತನಕ ಹೊಸ ರಾಜ್ಯಾಧ್ಯಕ್ಷ ಇಲ್ಲ

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ರಾಗಿ ಕೆಎಸ್ ಈಶ್ವರಪ್ಪ ಅವರೇ ಮುಂದುವರೆಯಲಿದ್ದಾರೆ. ಡಿಸೆಂಬರ್ ತಿಂಗಳ ಕೊನೆ ತನಕ ಹೊಸ ರಾಜ್ಯಾಧ್ಯಕ್ಷರನ್ನು ನೇಮಿಸಲು ಸಾಧ್ಯವಿಲ್ಲ ಎಂದು ಪಕ್ಷದ ಮೂಲಗಳು ಹೇಳಿದೆ ಎಂದು ಸುವರ್ಣ ವಾಹಿನಿಯ 11 ಗಂಟೆ ಸುದ್ದಿ ಪ್ರಸಾರದಲ್ಲಿ ಬ್ರೇಕಿಂಗ್ ನ್ಯೂಸ್ ಹೊರ ಬಿದ್ದಿದೆ.
ಯಡಿಯೂರಪ್ಪ ಅವರಿಗೆ ಗೇಟ್ ಪಾಸ್ ನೀಡಲು ಎಲ್ ಕೆ ಅಡ್ವಾಣಿ ನೇತೃತ್ವದ ಹೈಕಮಾಂಡ್ ತೀರ್ಮಾನಿಸಿದೆ ಎಂದು ಸುದ್ದಿ ಹಬ್ಬಿತ್ತು.
ನಂತರ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ರಾಜ್ಯಾಧ್ಯಕ್ಷ ನೇಮಕವನ್ನು ಮುಂದೂಡಿ ಎಂದು ಅಲವತ್ತುಕೊಂಡಿದ್ದರು. ಶೆಟ್ಟರ್ ಮನವಿಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿ, ಈಶ್ವರಪ್ಪ ಅವರನ್ನೇ ಮುಂದುವರೆಸುವ ಸಾಧ್ಯತೆ ನಿಚ್ಚಳವಾಗಿದೆ.
ಲಭ್ಯ ಮಾಹಿತಿ ಪ್ರಕಾರ ಸಂಸದರಾದ ನಳಿನ್ ಕುಮಾರ್ ಮತ್ತು ಪ್ರಹ್ಲಾದ ಜೋಶಿ ಅವರುಗಳ ಹೆಸರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಮುಖ ಅಭ್ಯರ್ಥಿಗಳಾಗಿದ್ದು, ಈ ಪೈಕಿ ಪ್ರಹ್ಲಾದ್ ಜೋಶಿ ಅವರಿಗೆ ಸ್ಥಾನ ದೊರಕಲಿದೆ ಎನ್ನಲಾಗಿದೆ.












Click it and Unblock the Notifications