ತ.ನಾಡಿಗೆ ಕಾವೇರಿ ನೀರು ಬಿಡಲು ಸುಪ್ರೀಂಕೋರ್ಟ್ ಆದೇಶ

Cauvery row- Karnataka admonished to release water to Tamil Nadu
ಬೆಂಗಳೂರು, ಸೆ.28: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮತ್ತೊಮ್ಮೆ ಕರ್ನಾಟಕಕ್ಕೆ ಪೆಟ್ಟುಬಿದ್ದಿದೆ. ಮೊದಲು ತಮಿಳುನಾಡಿಗೆ ದಿನಾ ಇಂತಿಷ್ಟು ಅಂತ ಕಾವೇರಿ ನೀರು ಬಿಡಿ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

ಕಾವೇರಿ ನದಿ ಪ್ರಾಧಿಕಾರವು ಇತ್ತೀಚೆಗೆ ಸೂಚಿಸಿರುವಂತೆ ನೀರು ಬಿಡಿ ಎಂದು ಶುಕ್ರವಾರ ಕೋರ್ಟ್ ಸ್ಪಷ್ಟ ಆದೇಶ ನೀಡಿದೆ. ಇದರಿಂದ ದಿನಾ 9 ಸಾವಿರ ಕ್ಯುಸೆಕ್ಸ್ ನೀರನ್ನು ಅಕ್ಟೋಬರ್ 21ರವರೆಗೂ ತಮಿಳುನಾಡಿನತ್ತ ಹರಿಸಬೇಕಾದ ಅನಿವಾರ್ಯತೆಗೆ ಕರ್ನಾಟಕ ಸಿಲುಕಿದೆ.

ಕರ್ನಾಟಕಕ್ಕೆ ನೀರು ಕುಡಿಸಿದ ಸು.ಕೋರ್ಟ್: ಕಾವೇರಿ ನದಿ ಪ್ರಾಧಿಕಾರದ ಆದೇಶವನ್ನು ಪರಿಪಾಲಿಸದ ಕರ್ನಾಟಕವನ್ನು ಸು.ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ರಾಜ್ಯದ ವಕೀಲರು ಈ ಹಿಂದೆಯೇ ರಾಜ್ಯವನ್ನು ಎಚ್ಚರಿಸಿದ್ದರು.

ಸೆ. 19ರಂದು ದೆಹಲಿಯಲ್ಲಿ ಪ್ರಧಾನಿ ನೇತೃತ್ವದಲ್ಲಿ ನಡೆದ ಕಾವೇರಿ ಪ್ರಾಧಿಕಾರ ಸಭೆಯ ಆದೇಶದಂತೆ ಕರ್ನಾಟಕ ದಿನಾ ನಮಗೆ 9 ಸಾವಿರ ಕ್ಯುಸೆಕ್ಸ್ ನೀರು ಬಿಡಬೇಕು. ಆದರೆ ಅದು ಪ್ರಾಧಿಕಾರದ ಆದೇಶವನ್ನು ಪಾಲಿಸುತ್ತಿಲ್ಲ. ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಿ ಎಂದು ತಮಿಳುನಾಡು ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸು.ಕೋರ್ಟ್ ನೀರು ಬಿಡದ ಕರ್ನಾಟಕಕ್ಕೆ ಸರಿಯಾಗಿ ನೀರು ಕುಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+