'ದಕ್ಷಿಣ ಕನ್ನಡ' ಹೆಸರು ಬದಲಾಯಿಸಿ: ಬುದ್ಧಿಜೀವಿಗಳ ಮೊರೆ

ಈ ಸಂಬಂಧ ರಾಜಧಾನಿಯಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ ಡಾ. ಡಿಎಂ ಚಿದಾನಂದ ಮೂರ್ತಿ ಅವರ ನೇತೃತ್ವದ ನಿಯೋಗವು ಮನವಿ ಪತ್ರವೊಂದನ್ನು ನೀಡಿತು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ಎಸ್ ದೊರೆಸ್ವಾಮಿ, ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂಎಚ್ ಕೃಷ್ಣಯ್ಯ, ಕನ್ನಡ ಗೆಳೆಯರ ಬಳಗದ ರಾನಂ ಚಂದ್ರಶೇಖರ, ಕೆ ಎನ್ ಭಗವಾನ್, ಕೆ ಎಚ್ ನರಸಿಂಹ ಮೂರ್ತಿ ಮತ್ತಿತರರು ನಿಯೋಗದಲ್ಲಿದ್ದರು.
ಡಾ. ಜಿ ಎಸ್ ಶಿವರುದ್ರಪ್ಪ, ಪ್ರೊ. ಎಲ್ಎಸ್ ಶೇಷಗಿರಿ ರಾವ್, ಪಿ. ಹಾಲಂಬಿ ಮತ್ತು ಡಾ, ವಿಜಯಾ ಅವರೂ ಮನವಿ ಪತ್ರಕ್ಕೆ ಸಹಿಹಾಕಿದ್ದಾರೆ. ಇದೇ ವೇಳೆ 'ಹೈದರಾಬಾದ್ ಕರ್ನಾಟಕ' ಮತ್ತು 'ಮುಂಬೈ ಕರ್ನಾಟಕ'ದ ಹೆಸರುಗಳನ್ನೂ ಅನುಕ್ರಮವಾಗಿ 'ಕಲ್ಯಾಣ ಕರ್ನಾಟಕ' ಹಾಗೂ 'ಕಿತ್ತೂರು ಕರ್ನಾಟಕ' ಎಂದು ಬದಲಾಯಿಸುವಂತೆ ಕೋರಿದ್ದಾರೆ.












Click it and Unblock the Notifications