Get Updates
Get notified of breaking news, exclusive insights, and must-see stories!

ಬಿಲಾವಲ್ ಜೊತೆ ಲವ್, ರಬ್ಬಾನಿಗೆ ಶಿಕ್ಷೆ ಖಾಯಂ?

Hina Rabbani Khar to be punished over affair with Bilawal
ಇಸ್ಲಾಮಾಬಾದ್, ಸೆ.26 : ಪಾಕಿಸ್ತಾನದ ಮಾಜಿ ಪ್ರಧಾನಿ ದಿವಂಗತ ಬೆನಜೀರ್ ಭುಟ್ಟೋ ಹಾಗೂ ಹಾಲಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯ ಪುತ್ರ ಬಿಲಾವಲ್ ಭುಟ್ಟೋ ಮತ್ತು ಪಾಕ್ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖಾರ್ ನಡುವಿನ ಅನೈತಿಕ ಪ್ರೇಮ ಈಗ ಪಾಕಿಸ್ತಾನಿಗಳಿಗೆ ಆಘಾತ ಉಂಟು ಮಾಡಿದೆ.

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ಅಧ್ಯಕ್ಷ, ಬಿಲಾವಲ್ ನಡುವೆ ಪ್ರೇಮದ ಪರಿಣಾಮ ಇತ್ತೀಚೆಗೆ ರಾಜಕೀಯವಾಗಿ ಹೆಸರು ಮಾಡುತ್ತಿದ್ದ ಹೀನಾ ರಬ್ಬಾನಿ ಅವರು ತಮ್ಮ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಮೂಲಗಳ ಪ್ರಕಾರ, ರಬ್ಬಾನಿಗೆ ರಾಜೀನಾಮೆ ನೀಡುವಂತೆ ಆಡಳಿತ ಪಕ್ಷ ಈಗಾಗಲೇ ಸಮನ್ಸ್ ಜಾರಿ ಮಾಡಿದೆ. ಆದರೆ, ಜರ್ದಾರಿ ಅವರ ಸಲಹೆ ಮೇರೆಗೆ ರಾಜೀನಾಮೆ ಪತ್ರಗಳನ್ನು ಫ್ಯಾಕ್ಸ್ ಮಾಡದೆ ಹಾಕಿ ಇಟ್ಟಿದ್ದಾರೆ ಎನ್ನಲಾಗಿದೆ.

ರಬ್ಬಾನಿ ಪತಿ ಗತಿ ಏನು? : ಹೀನಾ ಹಾಗೂ ಬಿಲಾವಲ್ ಮಧ್ಯೆ ಇರುವ ಹೈ ಫ್ರೊಫೈಲ್ ಲವ್ ಸ್ಟೋರಿಯನ್ನು ಪಾಕಿಸ್ತಾನದ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಅದರೆ, ಹೀನಾ ಪತಿ ಲಕ್ಷಾಧಿಪತಿ ಫಿರೋಜ್ ಗುಲ್ಜಾರ್ ಬುಧವಾರ (ಸೆ.26) ಹೀನಾ ಮತ್ತು ಬಿಲಾವಲ್ ನಡುವಿನ ದೂರವಾಣಿ ಕರೆ ವಿವರ ನೀಡುವಂತೆ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಗೆ ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ.

ಬಾಂಗ್ಲಾದಲ್ಲಿ ಪ್ರೇಮ ಕತೆ ಸೋರಿಕೆ : ಬಾಂಗ್ಲಾ ದೇಶದ ಟ್ಯಾಬ್ಲಾಯ್ಡ್ Weekly Blitz ಪತ್ರಿಕೆಯಲ್ಲಿ ಸೆ.23ರಂದು ಇವರಿಬ್ಬರ ನಡುವೆ ಇರುವ ಪ್ರೇಮ ಸಂಬಂಧದ ಬಗ್ಗೆ ವಿಸ್ತಾರವಾಗಿ ಬರೆಯಲಾಗಿತ್ತು. ಜೊತೆಗೆ ಪ್ರಣಯಭರಿತ ಚಿತ್ರಗಳನ್ನು ಪ್ರಕಟಿಸಿ ಸಂಚಲನ ಮೂಡಿಸಿತ್ತು.

35 ವರ್ಷದ ಹೀನಾ ರಬ್ಬಾನಿ ಮತ್ತು 24 ವರ್ಷದ ಬಿಲಾವಲ್ ಭುಟ್ಟೋ ನಡುವೆ ಬಹುಕಾಲದಿಂದ ಪ್ರೇಮವಿದೆ . ಇಬ್ಬರೂ ಮದುವೆಯಾಗಲು ಸಿದ್ಧರಿದ್ದಾರೆ . ಆದರೆ ಇದಕ್ಕೆ ಆಸಿಫ್ ಅಲಿ ಜರ್ದಾರಿಯ ಒಪ್ಪುತ್ತಿಲ್ಲ ಎಂದು ಪತ್ರಿಕೆ ವರದಿ ಮಾಡಿತ್ತು.

ಹೀನಾ ರಬ್ಬಾನಿ ಖಾರ್ ಅವರು ಪಾಕಿಸ್ತಾನದ ದೊಡ್ಡ ಉದ್ಯಮಿ ಫಿರೋಜ್ ಗುಲ್ಜಾರ್ ಅವರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ, ಫಿರೋಜ್ ಗುಲ್ಜಾರ್ ಈಗ ಹೀನಾ ಜೊತೆ ವಾಸಿಸುತ್ತಿಲ್ಲ.

ಎರಡು ಮಕ್ಕಳ ತಾಯಿ ಹೀನಾರನ್ನು ತಮ್ಮ ಮಗನಿಗೆ ತಂದುಕೊಳ್ಳಲು ಜರ್ದಾರಿ ಬಿಲ್ ಕುಲ್ ಒಪ್ಪಿಗೆ ನೀಡುತ್ತಿಲ್ಲ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಬಿಲಾವಲ್ ಅಜ್ಜ ಜುಲ್ಫಿಕರ್ ಅಲಿ ಭುಟ್ಟೋ ಆರಂಭಿಸಿದ್ದು, ನಂತರ ಬಿಲಾವಲ್ ತಾಯಿ ಬೆನಜೀರ್ ಭುಟ್ಟೋ ಪಕ್ಷವನ್ನು ಬೆಳೆಸಿದ್ದರು. ಈಗ ಬಿಲಾವಲ್ ನ ಪ್ರೇಮದ ಫಲವಾಗಿ ಪಕ್ಷದಲ್ಲಿ ಒಡಕು ಮೂಡುತ್ತಿರುವುದು ಅಧ್ಯಕ್ಷ ಜರ್ದಾರಿಗೆ ಮುಜುಗರ ತಂದಿದೆ ಎಂದು ಪತ್ರಿಕೆ ಹೇಳಿದೆ.

ಹೀನಾ ತನ್ನ ಪತಿ ಗುಲ್ಖಾರ್ ಗೆ ತಲಾಕ್ ಕೊಟ್ಟು ಬಿಲಾವಲ್ ಜೊತೆ ಸಿಡ್ಜರ್ಲೆಂಡ್ ನಲ್ಲಿ ನೆಲೆಸಲು ಸರ್ವ ಸಿದ್ಧತೆ ನಡೆಸಿದ್ದಾರೆ. ಇಬ್ಬರ ನಡುವೆ ನಿರಂತರವಾಗಿ ಪ್ರೇಮ ಪತ್ರ ಹರಿದಾಡಿದೆ. ಹೀನಾ ಮೇಲಿನ ಪ್ರೇಮಕ್ಕಾಗಿ ಪಿಪಿಪಿ ತೊರೆಯುವ ಮಾತನ್ನಾಡಿರುವ ಬಿಲಾವಲ್ ತಮ್ಮ ತಾಯಿಯ ಕನಸನ್ನು ಭಗ್ನಗೊಳಿಸಿದ್ದಾರೆ ಎಂದು ಪತ್ರಿಕೆಯಲ್ಲಿ ಹೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+