ಬರ: ರೂ 13.43 ಕೋಟಿ ಚೆಕ್ ನೀಡಿದ ಶೋಭಾ ಮೇಡಂ
ಬೆಂಗಳೂರು,
ಸೆ. 25: ಬರ ಈ ಬಾರಿ ಇಡೀ ನಾಡನ್ನು ತೀವ್ರವಾಗಿ ಬಾಧಿಸುತ್ತಿದೆ. ರಾಜ್ಯದ ಜನ ಅದರಲ್ಲೂ ಕೃಷಿಕರು ಸರಕಾರದ ಹಲವಾರು ಕಾರ್ಯಯೋಜನೆಗಳ ಮೂಲಕ ಒಂದಷ್ಟು ನೆರವು ಪಡೆದಿದ್ದಾರೆ. ರಾಜ್ಯ ಸರಕಾರದ ಈ ಪ್ರಯತ್ನಕ್ಕೆ ರಾಜ್ಯದ ಎಲ್ಲ ವಿದ್ಯುತ್ ಮಂಡಳಿಗಳ ನೌಕರರೂ (ESCOMS) ತಮ್ಮ ಅಳಿಲು ಸೇವೆ ಸಲ್ಲಿಸಿದ್ದಾರೆ. id="toptextpromo"> id='are-slot-1' class='oiad oi-axt oiadv'>ಕರ್ನಾಟಕ
ವಿದ್ಯುತ್ ಪ್ರಸರಣ ನಿಗಮ ಹಾಗೂ ಇತರೆ ಕಂಪನಿಗಳ ಸಂಘಟನೆಗಳು ಈ ಪ್ರಯತ್ನದಲ್ಲಿ ಕೈಜೋಡಿಸಿವೆ. ಈ ಕಂಪನಿಗಳು ಮತ್ತು ಅವುಗಳ ಅಧಿಕಾರಿಗಳು/ನೌಕರರು ಬರೋಬ್ಬರಿ 13.43 ಕೋಟಿ ರೂಪಾಯಿ ಹಣ ಸಂಗ್ರಹಿಸಿ, ಬರ ಸಂತ್ರಸ್ತರ ಸಂಕಷ್ಟಕ್ಕೆ ಆಧಾರವಾಗಿದ್ದಾರೆ. id='are-slot-2' class='oiad oi-axt oiadv'>ಹೀಗೆ
ಒಟ್ಟು ಮಾಡಿದ ರೂ 13.43 ಕೋಟಿ ಮೊತ್ತವನ್ನು ಚೆಕ್ ಮೂಲಕ ಇಂದು ಬೆಳಗ್ಗೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಪಿಸಿದ್ದಾರೆ. ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ತಮ್ಮ ಇಲಾಖೆಯ ನೌಕರರ ಒಕ್ಕೂಟಗಳ ಪರ ಈ ಚೆಕ್ ಅನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಹಸ್ತಾಂತರಿಸಿದರು. ಗಮನಾರ್ಹವೆಂದರೆ ಸ್ವತಃ
ಸಚಿವೆ
ಶೋಭಾ
ಅವರು
ತಮ್ಮ
ಒಂದು
ತಿಂಗಳ
ವೇತನವನ್ನು
(ರೂ.
50,000/)
ನೀಡಿದ್ದಾರೆ.

ಯಾರು ಯಾರು ಎಷ್ಟೆಷ್ಟು?:
ಸ್ವತಃ ಸಚಿವೆ ಶೋಭಾ ಅವರು ತಮ್ಮ ಒಂದು ತಿಂಗಳ ವೇತನವನ್ನು (ರೂ. 50,000/) ನೀಡಿದ್ದಾರೆ.
* ಬೆಸ್ಕಾಂ * ಮೆಸ್ಕಾಂ * ಚೆಸ್ಕಾಂ * ಹೆಸ್ಕಾಂ * ಜೆಸ್ಕಾಂ ಸಂಸ್ಥೆಗಳ ವತಿಯಿಂದ ತಲಾ 100 ಲಕ್ಷ ರೂಪಾಯಿ ಸಂದಾಯವಾಗಿದ್ದರೆ ಇದೇ ಸಂಸ್ಥೆಗಳ ನೌಕರರು ಮತ್ತು ಅಧಿಕಾರಿಗಳು ಒಟ್ಟು 645.82 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಇನ್ನು * ಕೆಪಿಟಿಸಿಎಲ್ ಮತ್ತು * ಪಿಸಿಕೆಎಲ್ ಸಂಸ್ಥೆಗಳ ನೌಕರರು ಮತ್ತು ಅಧಿಕಾರಿಗಳು ಒಟ್ಟು 245.09 ಲಕ್ಷ ರೂ. ನೀಡಿದ್ದಾರೆ.

ಯಾರೆಲ್ಲ ಉಪಸ್ಥಿತರಿದ್ದರು
# ಎಂ ನಾಗರಾಜ್, ಅಧ್ಯಕ್ಷರು, Federation Of Karnataka Electricity Board Employee's Union #ವಿ. ವೆಂಕಟಶಿವಾ ರೆಡ್ಡಿ, ಕರ್ನಾಟಕ ವಿದ್ಯುತ್ ಪ್ರಸರಣ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಇಂಜಿನಿಯರ್ ಒಕ್ಕೂಟದ ಅಧ್ಯಕ್ಷರು # ವಿಜಿ ಪಂಡಿತ್, ಅಧ್ಯಕ್ಷರು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಲೆಕ್ಕಾಧಿಕಾರಿಗಳ ಸಂಘ, ಬೆಂಗಳೂರು. # ಇತರೆ ಒಕ್ಕೂಟಗಳ ಪದಾಧಿಕಾರಿಗಳು # ಇಲಾಖೆಯ ಉನ್ನತಾಧಿಕಾರಿಗಳು ಭಾಗವಹಿಸಿದ್ದರು.












Click it and Unblock the Notifications