ಕೋರ್ಟ್ ಎದುರಿಗೆ ಅಪ್ಪಿ ಗಳಗಳನೆ ಅತ್ತ ರೆಡ್ಡಿ ಬ್ರದರ್ಸ್
ಹೈದರಾಬಾದ್,
ಸೆ. 25: ಅಕ್ರಮ ಗಣಿ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವ ಬಳ್ಳಾರಿಯ ರೆಡ್ಡಿ ಬ್ರದರ್ಸ್ ಇಂದು ನ್ಯಾಯಾಲಯದಲ್ಲಿ ಹಾಜರಾದರು. ಆ ವೇಳೆ ಕೋರ್ಟ್ ಆವರಣದಲ್ಲಿ ಎದುರಾಬದುರಾ ಆದಾಗ ಪರಸ್ಪರ ಅಪ್ಪಿಕೊಂಡು ಕೋರ್ಟಿನ ನಿಶ್ಚಬ್ದ ವಾತಾವರಣದಲ್ಲಿ ಗಳಗಳನೆ ಕಣ್ಣೀರುಗೆರೆದರು. ಈ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದ್ದು ರೆಡ್ಡಿ ಸೋದರರ ಆತ್ಮೀಯ, ಪ್ರಕರಣದ ಮತ್ತೊಬ್ಬ ಆರೋಪಿ ಕಂಪ್ಲಿ ಶಾಸಕ ಸುರೇಶ್ ಬಾಬು. id="toptextpromo">ಜಾಮೀನು
ಖರೀದಿ ಪ್ರಕರಣದಲ್ಲಿ ಇಂದು ಹೈದರಾಬಾದಿನ ಚೆರ್ಲಪಲ್ಲಿಯಲ್ಲಿರುವ ACB ಕೋರ್ಟಿನಲ್ಲಿ ವಿಚಾರಣೆ ನಿಗದಿಯಾಗಿತ್ತು. ತತ್ಸಂಬಂಧ ಆರೋಪಿಗಳಾಗಿರುವ ಜನಾರ್ದನ ರೆಡ್ಡಿ ಮತ್ತು ಸೋಮಶೇಖರ ರೆಡ್ಡಿ ಕೋರ್ಟಿಗೆ ಹಾಜರಾದರು. ACB ಪೊಲೀಸರು ಆರೋಪಿಗಳನ್ನು ಪ್ರತ್ಯೇಕವಾಗಿ ಕೋರ್ಟಿಗೆ ಕರೆತಂದರು. ಆ ಸಂದರ್ಭದಲ್ಲಿ ಕೋರ್ಟಿನೊಳಕ್ಕೆ ಹೆಜ್ಜೆಹಾಕುವ ಮುನ್ನ ರೆಡ್ಡಿ ಬ್ರದರ್ಸ್ ಪರಸ್ಪರ ಸಂಧಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅನೇಕ
ದಿನಗಳ ನಂತರ ಹೀಗೆ ಪರಸ್ಪರ ಕಾಣಿಸಿಕೊಳ್ಳುತ್ತಿದ್ದಂತೆ ರೆಡ್ಡಿ ಸೋದರರು ಒಬ್ಬರನ್ನೊಬ್ಬರು ಅಪ್ಪಿಕೊಂಡು, ಗದ್ಗದಿತರಾದರು. ಎಲ್ಲ ಆರೋಪಿಗಳನ್ನು ಕೋರ್ಟಿಗೆ ಹಾಜರುಪಡಿಸುವಂತೆ ACB ನ್ಯಾಯಾಲಯ ಸೆ. 14ರಂದು ಆದೇಶ ನೀಡಿತ್ತು. ಅದರಂತೆ ಆರೋಪಿಗಳ ವಿಚಾರಣೆ ನಡೆಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಿತು.











Click it and Unblock the Notifications