ಉಗ್ರರಿಗೆ ಇಮೇಲ್ ಸಹಕಾರ, ಒಬ್ಬ ವ್ಯಕ್ತಿ ಬಂಧನ

ಈ ವರೆಗೂ ಸೆರೆ ಸಿಕ್ಕಿರುವ 15ಕ್ಕೂ ಅಧಿಕ ಉಗ್ರರ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಉಮರ್, ಅವರಿಗೆ ಇಮೇಲ್ ಕಳುಹಿಸುತ್ತಿದ್ದ ಹಾಗೂ ಅವರ ತಾಂತ್ರಿಕ ಸಮಸ್ಯೆಗಳಿಗೆ ನೆರವಾಗುತ್ತಿದ್ದಾ ಎಂದು ತಿಳಿದು ಬಂದಿದೆ.
ಬಂಧಿತ ಉಮರ್ ತನ್ನ ಜೆ ಸಿ ನಗರದ ಸೈಬರ್ ಸೆಂಟರ್ ನಲ್ಲಿ ವಿದೇಶಗಳಿಗೆ ಇ ಮೇಲ್ ಮಾಡಲು ಹಾಗೂ ಉಗ್ರಗಾಮಿ ಚಟುವಟಿಕೆ ಬೆಳೆಸಲು ಬೇಕಾದ ಮಾಹಿತಿ ಸಂಗ್ರಹಿಸಲು ಸುರಕ್ಷಿತ ನೆಲೆ ಒದಗಿಸಿದ್ದ
ಆದರೆ, ಉಮರ್ ಉದ್ದೀನ್ ಹಾಗೂ ಆತನ ಸೋದರ ಸೈಯದ್ ಸಲೀಂ ಅವರನ್ನು ವಿಚಾರಣೆ ಒಳಪಡಿಸಲಾಗಿತ್ತು. ಹಾಗೂ ಸೈಬರ್ ಸೆಂಟರ್ ನಿಂದ ಹಾರ್ಡ್ ಡಿಸ್ಕ್ ವಶಪಡಿಸಿಕೊಳ್ಳಲಾಗಿತ್ತು. ಆದರೆ, ಸಿಸಿಬಿ ಜಂಟಿ ಪೊಲೀಸ್ ಬಿ ದಯಾನಂದ ಅವರು ಈ ಸುದ್ದಿಯನ್ನು ಖಚಿತಪಡಿಸಿರಲಿಲ್ಲ.
ಶಂಕಿತ ಉಗ್ರರಿಗೆ ಮಾಹಿತಿ ನೀಡುತ್ತಿದ್ದ ಕಾರಣಕ್ಕೆ ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿ, ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ದಯಾನಂದ್ ತಿಳಿಸಿದ್ದರು.
ಬಂಧಿತ ಉಮರ್ ಉದ್ದೀನ್ ಹಾಗೂ ಪತ್ರಕರ್ತ ಮತಿ ಉರ್ ರೆಹಮಾನ್ ಸಿದ್ಧಿಕಿಯೊಂದಿಗೆ ನಿಕಟ ಸಂಪರ್ಕವಿತ್ತು ಎಂದು ವಿಚಾರಣೆಯಿಂದ ತಿಳಿದು ಬಂದಿದೆ.
ರಾಯಚೂರಿನ ದೇವದುರ್ಗದಲ್ಲಿ ಶಬರಿ ಎಂಬ ಹೆಸರಿನ ಮೊಬೈಲ್ ಅಂಗಡಿ ನಡೆಸುತ್ತಿದ್ದ ಮಲ್ಲಿಕಾರ್ಜುನ ಎಂಬ ವ್ಯಕ್ತಿಯೊಬ್ಬನನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಈತ ಶಂಕಿತ ಉಗ್ರರಿಗೆ ಮೊಬೈಲ್ ಸಿಮ್ ಕಾರ್ಡುಗಳನ್ನು ಒದಗಿಸುತ್ತಿದ್ದ ಎಂದು ಆರೋಪಿಸಲಾಗಿತ್ತು. ಈಗ ಬೆಂಗಳೂರಿನ ಆರ್ ಟಿ ನಗರದಲ್ಲಿ ತಾಂತ್ರಿಕ ನೆರವು ನೀಡುತ್ತಿದ್ದ ಉಮರ್ ಬಂಧಿಸಲಾಗಿದೆ.
ಲಷ್ಕರ್ ಇ ತೋಯ್ಬಾ, ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿಕ್ ಸಂಘಟನೆ ಸಂಪರ್ಕಿತರನ್ನು ಈವರೆಗೂ ಸೆರೆ ಹಿಡಿಯಲಾಗಿದೆ. ಆದರೆ, ಈ 20 ರ ತಂಡ 150ಕ್ಕೂ ವಿದ್ಯಾರ್ಥಿಗಳ ತಲೆಯಲ್ಲಿ ವಿಷಬೀಜ ಬಿತ್ತಿರುವ ಆತಂಕದ ಸಂಗತಿ ಖಚಿತವಾಗಿದೆ. [ಬಂಧಿತ ಶಂಕಿತ ಉಗ್ರರ ಪಟ್ಟಿ ನೋಡಿ]
ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಭಟ್ಕಳ, ಮಹಾರಾಷ್ಟ್ರ, ಹೈದರಾಬಾದ್ ಮುಂತಾದೆಡೆ ಜಾಲ ಹೊಂದಿದ್ದ ಈ ಬಂಧಿತರು ನಗರ ಅನೇಕ ಕಾಲೇಜಿನ ಅಯ್ದ ವಿದ್ಯಾರ್ಥಿಗಳನ್ನು ಉಗ್ರವಾದದತ್ತ ಆಕರ್ಷಿಸುವಂತೆ ಮಾಡುವಲ್ಲಿ ಸಫಲರಾಗಿದ್ದರು.












Click it and Unblock the Notifications