ಸಂಸದ ಅನಂತ ಕುಮಾರ್ ಹುಟ್ಟುಹಬ್ಬ ಯಾವತ್ತು?

Posted By:
Subscribe to Oneindia Kannada
bng-south-bjp-mp-hn-ananth-kumar-birthday-bewilderment
ಬೆಂಗಳೂರು, ಸೆ.21: ಅನಂತ ಕುಮಾರ್ ಗೊತ್ತಲ್ಲಾ? ಅದೇ ನಮ್ಮ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 5 ಬಾರಿ ಬಿಜೆಪಿ ಸಂಸದರಾಗಿರುವವರು. ಅವರ ಹುಟ್ಟುಹಬ್ಬ ಯಾವತ್ತು? ಏಕೆಂದರೆ, ಬೆಂಗಳೂರಿನ ಕೆಲವು ಸಂಜೆ ಪತ್ರಿಕೆಗಳಲ್ಲಿ ಅನಂತ ಕುಮಾರ್ ಜನ್ಮ ದಿನಕ್ಕೆ ಶುಭಾಷಯ ಕೋರಿ ಜಾಹೀರಾತುಗಳು ಪ್ರಕಟವಾಗಿವೆ. ಆ ಜಾಹೀರಾತಿನ ಪ್ರಕಾರ ಸಂಸದ ಎಚ್. ಎನ್. ಅನಂತ ಕುಮಾರ್ ಹುಟ್ಟುಹಬ್ಬ ನಾಳೆ (ಸೆ. 22).

ಇದನ್ನು ನೋಡುತ್ತಿದ್ದಂತೆ ಯಾಕೋ ಅನುಮಾನದ ವಾಸನೆ ಬಡಿಯಿತು. ಏಕೆಂದರೆ ಅನಂತ ಕುಮಾರ್ ಅವರ ಹುಟ್ಟುಹಬ್ಬ ನಾಳೆ ಅಲ್ಲ. ಆದರೂ ಇಂದೇಕೆ ಜಾಹೀರಾತು ಎಂದು ತಲೆತುರಿಸಿಕೊಳ್ಳುತ್ತಿದ್ದಾಗ ಯಾರು ಸುಳ್ಳು ಹೇಳಿದರೂ ವಿಕಿಪೀಡಿಯಾ ಸುಳ್ಳು ಹೇಳುವುದಿಲ್ಲ ಎಂದು ವಿಕಿಪೀಡಿಯಾ ವೆಬ್ಬಾಗಿಲು ತೆರೆದು ನೋಡಿದೆವು. ಅದರ ಪ್ರಕಾರ ಅನಂತ ಕುಮಾರ್ ಜನ್ಮದಿನ 1959ರ ಜುಲೈ 22.

ಆದರೂ ನಂಬಲಾಗದೆ ಕೊನೆಗೆ ಅನಂತ ಕುಮಾರ್ ಅವರ ಖಾಸಾ ವೆಬ್ ಸೈಟಿಗೆದಾಳಿಯಿಟ್ಟೆವು. ಅಲ್ಲೂ ಅನಂತ ಕುಮಾರ್ ತಮ್ಮ ಹುಟ್ಟುಹಬ್ಬ 1959ರ ಜುಲೈ 22 ಎಂದು ದಾಖಲಿಸಿದ್ದಾರೆ. ಸೋ ಅಫಿಶಿಯಲಿ ಅನಂತ ಕುಮಾರ್ ಅವರ ಬರ್ತ್ ಡೇ 1959ರ ಜುಲೈ 22 ಅಂತಾಯಿತು.

ಏನಾದರಾಗಲಿ ನಿಮ್ಮ 'ಒನ್ ಇಂಡಿಯಾ ಕನ್ನಡ' ಕಚೇರಿ ಇರುವುದೂ ಇದೇ 'ಬರ್ತ್ ಡೇ ಬಾಯ್' ಅನಂತ ಕುಮಾರ್ ಅವರು ಪ್ರತಿನಿಧಿಸುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ. ಹಾಗಾಗಿ ಅವರ ಬರ್ತ್ ಡೇ ಗೊಂದಲ ನಿವಾರಸಿಕೊಳ್ಳಲು ಈ ಪುಟ್ಟ ಬರಹ. ಏನಾದರಾಗಲಿ ನಿಮ್ಮ-ನಮ್ಮೆಲ್ಲರ ಪರವಾಗಿ ಅನಂತ ಕುಮಾರ್ ಅವರಿಗೆ 53ನೆಯ Advance Birthday Wishes!

ಅನಂತ ಕುಮಾರ್ ಕಿರುಪರಿಚಯ:
ಬೆಂಗಳೂರಿನಲ್ಲಿ ಮುಲುಕನಾಡು ಸ್ಮಾರ್ತ ತೆಲುಗು ಕುಟುಂಬದಲ್ಲಿ ಜನಿಸಿದ ಅನಂತ ಕುಮಾರ್ ಬೆಳೆದದ್ದು ಭಾರತೀಯ ಸಂಸ್ಕೃತಿಯ ಮೌಲ್ಯವನ್ನೇ ಪ್ರತಿಬಿಂಬಿಸುತ್ತಿದ್ದ ಮನೆಯಲ್ಲಿ. 50ರ ದಶಕದಲ್ಲೇ ಮಹಾರಾಣಿ ಕಾಲೇಜಿನಿಂದ ಪದವೀಧರೆಯಾಗಿದ್ದ ತಾಯಿ ಗಿರಿಜಾ ಶಾಸ್ತ್ರಿ ಅವರ ಮಡಿಲಲ್ಲಿ ಅನಂತ ಕುಮಾರ್ ಓನಾಮ ಕಲಿತರು.

ತಂದೆ ಎಚ್. ಎನ್. ನಾರಾಯಣ ಶಾಸ್ತ್ರಿ ಅವರು ರೈಲ್ವೆ ಉದ್ಯೋಗಿ. ಸರ್ ಎಂ ವಿಶ್ವೇಶ್ವರಯ್ಯ, ಪ್ರಖ್ಯಾತ ಜ್ಯೋತಿಷ್ಯ ಶಾಸ್ತ್ರಜ್ಞ ಬಿ.ವಿ. ರಾಮನ್‌ ಅವರಂಥ ಬಂಧುಗಳನ್ನು ಹೊಂದಿದ್ದ ತುಂಬು ಕುಟುಂಬದವರು ಅನಂತ ಕುಮಾರ್. ಇಂತಿಪ್ಪ ಅನಂತ್ ಓದಿದ್ದು BA- KS Arts College, Karnataka University, Hubli ಮತ್ತು LLB- JSS Law College, Mysore University.

RSS ಮತ್ತು ABVP ಮೂಲಕ ರಾಜಕೀಯ ಪ್ರವೇಶ. ಅನಂತ ಕುಮಾರ್‌ ಅವರ ಪತ್ನಿ ತೇಜಸ್ವಿನಿ ಒಬ್ಬ ಸಾಫ್ಟ್‌ವೇರ್‌ ಇಂಜಿನಿಯರ್. ಅನಂತ ಕುಮಾರ್-ತೇಜಸ್ವಿನಿ ದಂಪತಿಗೆ (ಮದುವೆಯ ದಿನಾಂಕ ) ಇಬ್ಬರು ಹೆಣ್ಣುಮಕ್ಕಳು: ಪೂನಾದಲ್ಲಿ ಕಾನೂನು ವ್ಯಾಸಂಗ ಮಾಡುತ್ತಿರುವ ಐಶ್ವರ್ಯಾ ಮತ್ತು ವಿಜೇತ. ಚಿತ್ರ ಕೃಪೆ:ಅನಂತ ಕುಮಾರ್ ವೆಬ್ ಸೈಟ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
All India BJP General Secretary, Member of Parliament (Bangalore South) H. N. Ananth Kumar Birthday bewilderment. According to his own website http://ananth.org/ and wikipedia page http://www.wikipedia.org/ Bday falls on 22 July 1959. But couple of Kannada eveningers published from Bangalore have carried Bday Wishes Ads saying his happy Bday is on Saturday 22 Sept. Any which way, Happy Birth Day in advance to Ananthji.
Please Wait while comments are loading...