ಭಾರತ್ ಬಂದ್: ಬಿಕೋ ಎನ್ನುತ್ತಿರುವ ಹೊಟ್ಟೆಗಳು

ಹೌದು, ಹೋಟೆಲುಗಳನ್ನೇ ನೆಚ್ಚಿಕೊಂಡಿರುವ ಮಂದಿಗೆ ಕನಿಷ್ಠ ರಸ್ತೆ ಬದಿ ಆಹಾರ ತಾಣಗಳೂ ಇಲ್ಲವಾಗಿವೆ. ಕೇಂದ್ರ ಸರಕಾರವು 6/12 ಸಿಲಿಂಡರ್, ಡೀಸೆಲ್ ಬೆಲೆ ಏರಿಕೆ, ಎಫ್ ಡಿಐ ಬಾಂಬುಗಳನ್ನು ಎಸೆದಿರುವುದಕ್ಕೆ ಬೆಚ್ಚಿಬಿದ್ದಿರುವ ಜನ ಇಂದು ಬಂದ್ ಗೆ ಕರೆ ನೀಡಿರುವುದು ಎಲ್ಲರನ್ನೂ ತಟ್ಟುತ್ತಿದೆ.
ಬಿಕೋ ಎನ್ನುತ್ತಿರುವ ಹೊಟ್ಟೆಗಳು: ಹೊಟ್ಟೆಗೂ ಹೋಟೆಲಿಗೂ ಅವಿನಾಭಾವ ಸಂಬಂಧ. ಒಂದನ್ನೊಂದು ಬಿಟ್ಟು ಇರಲಾರವು. ಅಂತಹುದರಲ್ಲಿ ಹೋಟೆಲುಗಳು ಬಂದ್ ಆದರೆ... ಹೊಟ್ಟೆಯ ಗತಿಯೇನು? ಡೀಸೆಲ್ ಬೆಲೆ ಏರಿಕೆಯು ಹೋಟೆಲುಗಳ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುವ ಅಪಾಯವಿರುವುದರಿಂದ ಹೋಟೆಲು ಬಂದ್ ಆಗಿವೆ.
ಇದರ ಜತೆಗೆ ನಿನ್ನೆ ಹಬ್ಬದ ದಿನಕ್ಕೆಂದು ಹೋಟೆಲುಗಳ ಬಾಗಿಲು ತೆರೆದಿರಲಿಲ್ಲ. ಅದು ಇಂದೂ ಮುಂದುವರಿದಿದೆ. ಅತ್ತ ಹೋಟೆಲ್ ಕಾರ್ಮಿಕರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರೆ ಹೋಟೆಲುಗಳನ್ನೇ ನಂಬಿರುವ ಜನರ ಹೊಟ್ಟೆ ಬಿಕೋ ಎನ್ನುತ್ತಿವೆ.
ಬಂದ್ ವೇಳೆ ಪ್ರಧಾನವಾಗಿ ರಸ್ತೆ ಸಂಚಾರ ಕೈತಪ್ಪುವುದು ಸಹಜ. ಅಂತಗಹ ಸಂದರ್ಭಗಳಲ್ಲಿ ಸಾರ್ವಜನಿಕ ಸಂಚಾರ ವ್ಯವಸ್ಥೆ ಕೈಕೊಡುತ್ತದೆ. ಆದರೆ ಇಂತಹ ಸಂದರ್ಭಕ್ಕಾಗಿಯೇ ಕಾಯುವ ಆಟೋಗಳಿಗೆ ಇಂದು ತೀವ್ರ ನಿರಾಶೆ ಎದುರಾಗಿದೆ. ಬಂದ್ ಎಂದ ತಕ್ಷಣ ಮಹಾಜನತೆ ಮನೆಗಳಲ್ಲೇ ಉಳಿಯಲು ನಿರ್ಧರಿಸಿರುವುದು ಈ ವಿದ್ಯಮಾನಕ್ಕೆ ಕಾರಣವಾಗಿದೆ. ಸರಕಾರಿ ಬಸ್ಸುಗಳು ಅನುಪಸ್ಥಿತಿಯಲ್ಲಿ ಜನರನ್ನು ಕರೆದೊಯ್ಯಲು ಆಟೋಗಳೇನೋ ಸಿದ್ಧವಾಗಿ ನಿಂತಿವೆ. ಆದರೆ ಪ್ರಯಾಣಿಕರೇ ಕಾಣಿಸಿಕೊಳ್ಳುತ್ತಿಲ್ಲ.


Click it and Unblock the Notifications
