ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಏರಿಕೆ?

Central government employees, pensioners set to get 7% DA hike
ನವದೆಹಲಿ, ಸೆ.20: ಸುಮಾರು 80 ಲಕ್ಷ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ತುಟ್ಟಿಭತ್ಯೆ dearness allowance (DA)ಏರಿಕೆಯಾಗಲಿದೆ ಎಂಬ ಸುದ್ದಿ ಹೊರಬಿದ್ದಿದೆ.

ಡೀಸೆಲ್ ಬೆಲೆ ಏರಿಕೆ, ಬಹುಬ್ರ್ಯಾಂಡ್ ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆ, ಅತಿಯಾದ ಹಣದುಬ್ಬರದ ನಡುವೆ ತತ್ತರಿಸಿರುವ ನೌಕರ ವರ್ಗವನ್ನು ಓಲೈಸಿಕೊಳ್ಳಲು ಕೇಂದ್ರದ ಯುಪಿಎ ಸರ್ಕಾರ ಮುಂದಾಗಿದೆ.

ಶೇ 65 ರಿಂದ ಶೇ 72ಕ್ಕೆ ತುಟ್ಟಿಭತ್ಯೆ ಹೆಚ್ಚಿಸುವ ಪ್ರಸ್ತಾವನೆ ಬಗ್ಗೆ ಕೆಂದ್ರ ಸಚಿವ ಸಂಪುಟ ಶುಕ್ರವಾರ (ಸೆ.21) ತೀಮಾನ ಕೈಗೊಳ್ಳಲಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರ ಕೈಗೊಂಡಿದ್ದೇ ಆದಲ್ಲಿ 50 ಲಕ್ಷ ಉದ್ಯೋಗಿಗಳಿಗೆ ಹಾಗೂ 30 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ.

ಪರಿಷ್ಕೃತ ತುಟ್ಟಿಭತ್ಯೆ ಲೆಕ್ಕಾಚಾರ ಜು.1, 2012ರಂತೆ ಅನ್ವಯವಾಗಲಿದೆ. ಕಳೆದ ಮಾರ್ಚ್ ನಲ್ಲಿ ತುಟ್ಟಿಭತ್ಯೆ ಶೇ 6ರಷ್ಟು ಹೆಚ್ಚಳ ಮಾಡಲಾಗಿತ್ತು. ಡಿಎ ದರ ವನ್ನು ಜನವರಿ 1, 2012ಕ್ಕೆ ಅನ್ವಯವಾಗುವಂತೆ ಶೇ 58 ರಿಂದ ಶೇ 65 ಕ್ಕೆ ಏರಿಸಿತ್ತು.

ಕೈಗಾರಿಕಾ ನೌಕರರಿಗೆ ಹೊಂದಿಕೊಂಡಂತೆ ಗ್ರಾಹಕ ದರ ಸೂಚಿ ನೋಡಿಕೊಂಡು ಆಗಾಗ್ಗೆ ಡಿಎ ಏರಿಸುವುದು ಸರ್ಕಾರದ ಪರಿಪಾಠವಾಗಿದೆ. ರೀಟೈಲ್ ದರ ಆಧಾರದ ಮೇಲೆ ಗ್ರಾಹಕ ದರ ಸೂಚಿ ಅಗಸ್ಟ್ ನಲ್ಲಿ 10.03% ನಷ್ಟಿತ್ತು.

ಡೀಸೆಲ್ ಬೆಲೆ ಏರಿಕೆ, ಬಹುಬ್ರ್ಯಾಂಡ್ ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆ ವಿರುದ್ಧ ಬಿಜೆಪಿ ನೇತೃತದ ಎನ್ ಡಿಎ ಕರೆ ನೀಡಿದ್ದ ಭಾರತ್ ಬಂದ್ ಬಹುತೇಕ ಯಶಸ್ವಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಏರಿಕೆ ಮಾಡುವ ಸುದ್ದಿ ಬಂದಿದೆ.

ತುಟ್ಟಿ ಭತ್ಯೆ(dearness allowance): ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕವಾಗಿ ಲೆಕ್ಕಮಾಡಲಾಗುತ್ತದೆ.

ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ. ದರಗಳು ಗ್ರಾಮೀಣ/ನಗರ ಪ್ರದೇಶಗಳ ಪ್ರಕಾರ ಬದಲಾಗುತ್ತವೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+