ಕೇಜ್ರಿವಾಲಾ ಕೈಬಿಟ್ಟು, ರಾಮದೇವ್ ಗೆ ಅಡ್ಡಬಿದ್ದ ಅಣ್ಣಾ

anna-dumps-kejriwal-joins-ramdev-true-colours-of-politics
ನವದೆಹಲಿ, ಸೆ. 20: ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ದಾರಿತಪ್ಪಿ ಗೊಂದಲದ ಗೂಡಾದ ಅಣ್ಣಾ ತಂಡವು ಛಿದ್ರಗೊಂಡಿದೆ. ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ರಾಜಕೀಯ ಆಶ್ರಯ ಬೇಡಿದ ಅಣ್ಣಾ ಗ್ಯಾಂಗ್ ನಲ್ಲಿ ಗ್ಯಾಂಗ್ ವಾರ್ ಶುರುವಾಗಿದೆ.

ಹೀಗಾಗಿ ಅಣ್ಣಾ ಹಜಾರೆ ತಮ್ಮ ತಂಡದ ಪ್ರಮುಖ ಸದಸ್ಯರಾಗಿದ್ದ ಅರವಿಂದ್ ಕೇಜ್ರಿವಾಲಾರ ಕೈಬಿಟ್ಟು, ಮತ್ತೊಬ್ಬ ಭ್ರಷ್ಟಾಚಾರ ವಿರೋಧಿ ಆಂದೋಲನಕಾರ ಬಾಬಾ ರಾಮದೇವ್ ಗೆ ಅಡ್ಡಬಿದ್ದಿರುವ ಬೆಳವಣಿಗೆ ನಡೆದಿದೆ. ಅಲ್ಲಿಗೆ ಅಣ್ಣಾರ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಜನತೆ ಬಯಸದ ರಾಜಕೀಯವು ಒಳನುಸುಳಿದೆ.

ಗಾಂಧಿವಾದಿ ಅಣ್ಣಾ ಹಜಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನವು ಕಳೆದೊಂದು ವರ್ಷದಲ್ಲಿ ದೇಶದಲ್ಲಿ ತೀವ್ರ ಸಂಚನವನ್ನುಂಟುಮಾಡಿತ್ತು. ಇದಕ್ಕೆ ಅರವಿಂದ್ ಕೇಜ್ರಿವಾಲಾ ಅವರು ಸಮರ್ಥವಾಗಿ ಅಣ್ಣಾಗೆ ಹೆಗಲು ಕೊಟ್ಟಿದ್ದರು.

ಆದರೆ ರಾಜಕೀಯ ಜಿಜ್ಞಾಸೆಗೆ ಸಿಲುಕಿದ ಅಣ್ಣಾ ಅವರು ಕೇಜ್ರಿವಾಲಾ ಅವರ ಕೈಬಿಟ್ಟು ಸೀದಾ ರಾಮದೇವ್ ಪಡಸಾಲೆಯಲ್ಲಿ ಕಾಣಿಸಿಕೊಂಡಿದ್ದಾರೆ. ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಕೇಜ್ರಿವಾಲಾ ರಾಜಕೀಯವಾಗಿ ಹೋರಾಡುವುದಕ್ಕೆ ಮುಂದಾಗಿದ್ದೇ ಅಣ್ಣಾ ಮುನಿಸಿಗೆ ಕಾರಣವಾಗಿದೆ.

ದೆಹಲಿಯ ಪ್ರತಿಷ್ಠಿತ ಗಾಲ್ಫ್ ಲಿಂಕ್ಸ್ ಪ್ರದೇಶದಲ್ಲಿರುವ ಯೋಗ ಗುರು ಬಾಬಾ ರಾಮದೇವ್ ಅವರ ಮನೆಗೆ ಇಂದು ತೆರಳಿದ ಅಣ್ಣಾ, ಅವರ ಆಂದೋಲನ ಮೆಚ್ಚಿಕೊಂಡು ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಈ ವೇಳೆ ಹಿರಿಯ ಸೇನಾನಿ ವಿಕೆ ಸಿಂಗ್ ಅವರು ಉಪಸ್ಥಿತರಿದ್ದರು.

ಭ್ರಷ್ಟಾಚಾರ ವಿರೋಧಿ ಆಂದೋಲನ ಮತ್ತು ಕಪ್ಪು ಹಣ ವಾಪಸ್ ತರುವ ಚಳವಳಿಯಲ್ಲಿ ಬಾಬಾ ತಾವು ಸಂಪೂರ್ಣ ಬೆಂಬಲ ನೀಡುವುದಾಗಿ ಅಣ್ಣಾ ಇದೇ ಸಂದರ್ಭದಲ್ಲಿ ಘೋಷಿಸಿದ್ದಾರೆ. ಆದರೆ ರಾಜಕೀಯದಿಂದ ದೂರವಾಗಿ ಉಳಿಯುವುದಾಗಿ ಮತ್ತೊಮನ್ಮೆ ಸ್ಪಷ್ಟಪಡಿಸಿದ್ದಾರೆ. ಕಿರಣ್ ಬೇಡಿ ಮತ್ತು ನ್ಯಾ. ಸಂತೋಷ್ ಹೆಗ್ಡೆ ಅವರು ಈ ಸಂರ್ಭದಲ್ಲಿ ಅಣ್ಣಾ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+