ಬೆಂಗಳೂರಲ್ಲಿ ಬಂದ್ ಯಶಸ್ವಿ, ಜನತೆ ತತ್ತರ

Bandh
ಬೆಂಗಳೂರು, ಸೆ.20: ಬಿಜೆಪಿ ನೇತೃತ್ವದ ಎನ್ ಡಿಎ ಕರೆ ನೀಡಿರುವ ಭಾರತ್ ಬಂದ್ ಬಿಸಿ ಯುಪಿಎಗೆ ತಟ್ಟುತ್ತದೋ ಇಲ್ಲವೋ ಬೆಂಗಳೂರಿನ ಜನತೆಯಂತೂ ತತ್ತರಿಸಿದ್ದಾರೆ. ಅಪ್ಪನ ಶವನ ನೋಡಲಾಗದೆ ಬಸ್ ಗಾಗಿ ಕಾದು ಕೂತ ಸೋದರಿಯರು, ಟೈರ್ ಸುಟ್ಟಿ ಕೇಕೆ ಹಾಕಿ ಕುಣಿಯುವ ಕಾರ್ಯಕರ್ತರ ನಡುವೆ ಬಿಸಿಲು ಕೂಡಾ ಗುರುವಾರ(ಸೆ.20) ಜೊರಾಗೇ ವ್ಯಾಪಿಸಿದೆ.

ಕರ್ನಾಟಕದ ಎಲ್ಲೆಡೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತವಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಲವೆಡೆ ರೈಲು ತಡೆ ನಡೆಸಿದ್ದಾರೆ.

ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಬೆಂಗಳೂರಿನಲ್ಲಿ ಹಲವೆಡೆ ಹೋಟೆಲ್ ಮಾಲೀಕರು, ಲಾರಿ ಮಾಲೀಕರು ಕೂಡಾ ಬೆಂಬಲ ನೀಡಿದ್ದಾರೆ.

ನಗರದಲ್ಲಿ ಬಿಎಂಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಆದರೆ, ಮೆಜೆಸ್ಟಿಕ್ ನಿಲ್ದಾಣದಲ್ಲಿ ಕೆಲವು ಜನ ಇನ್ನೂ ಬಸ್ ಗಾಗಿ ಕಾದು ಕುಳಿತಿರುವ ದೃಶ್ಯಗಳು ಕಂಡು ಬಂದಿದೆ.

ಬೆಳಗ್ಗಿನಿಂದ ನಾಲ್ಕು ಬಸ್ ಮಾತ್ರ ಸಂಚರಿಸಿದೆ. ಜನರ ಒತ್ತಾಯದ ಮೇರೆಗೆ ನೆಲಮಂಗಲ, ಮಾರತ್ ಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಕೆಲ ಬಸ್ ಸಂಚಾರ ಆರಂಭಿಸಲಾಗಿದೆ. ಕೆಎಸ್ಸಾರ್ಟಿಸಿ ಬಂದ್ ನಿಲ್ದಾಣದಿಂದ ಯಾವ ಬಸ್ ಕೂಡಾ ಸಂಚರಿಸಿಲ್ಲ.

ಆಟೋ ರಿಕ್ಷಾ, ಕ್ಯಾಬ್ ಸಂಚಾರವೂ ಬಹುತೇಕ ಕಮ್ಮಿಯಾಗಿದೆ. ಸಾಫ್ಟ್ ವೇರ್ ಕಂಪನಿಗಳು, ಶಾಲಾ ಕಾಲೇಜುಗಳು ಮುಚ್ಚಿರುವುದರಿಂದ ಬೆಂಗಳೂರು ಬಿಕೋ ಎನ್ನುತ್ತಿದೆ.

ವಿಪ್ರೋ, ಎಚ್ ಪಿ, ಡೆಲ್, ಸಿಸ್ಕೋ, ಆರೆಕಲ್, ಐಬಿಎಂ, SAP ಸೇರಿದಂತೆ ಹಲವು ಕಂಪನಿಗಳು ಗುರುವಾರ ರಜೆ ಘೋಷಿಸಿದ್ದು, ಶನಿವಾರ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಇದೇ ಕ್ರಮವನ್ನು ನಗರದ ಕೆಲವು ಶಾಲೆಗಳಿಗೂ ಅನ್ವಯಿಸಲಾಗಿದೆ.[ಹೆಚ್ಚಿನ ಮಾಹಿತಿಗೆ ಓದಿ]

ಎಂಜಿ ರೋಡ್, ಬ್ರಿಗೇಡ್ ರೋಡ್, ಕಮರ್ಷಿಯಲ್ ಸ್ಟ್ರೀಟ್ ಖಾಲಿ ಖಾಲಿಯಾಗಿದೆ ಶಿವಾಜಿನಗರ, ಶಾಂತಿನಗರ ಬಸ್ ನಿಲ್ದಾಣದಲಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ.

ಜನರ ಪರದಾಟ: ಬುಧವಾರ ರಾತ್ರಿ ತೀರಿ ಹೋದ ಅಪ್ಪನ ಶವ ನೋಡಲು ಹೊರಟ ಭಾಗೀರಥಿ, ಯಶೋದಾ ಎಂಬ ಸೋದರಿಯರು ಚಿಕ್ಕಮಗಳೂರಿಗೆ ಹೋಗಲಾರದೆ ಕೆಎಸ್ಸಾರ್ಟಿಸಿ ಬಂದ್ ನಿಲ್ದಾಣದಲ್ಲಿ ಪರತಪಿಸುತ್ತಿದ್ದಾರೆ.

ಮೆಜೆಸ್ಟಿಕ್ ನಿಂದ ಕೋನಪ್ಪನ ಅಗ್ರಹಾರಕ್ಕೆ ಆಟೋದವರು 700 ರು ಕೇಳುತ್ತಿದ್ದಾರೆ. ಹೇಗೆ ಕೊಡೋದು ಹೇಳಿ. ಬೆಳಗ್ಗಿನಿಂದ ಹೊಟ್ಟೆಗೆ ಏನು ತಿಂದಿಲ್ಲ. ಇಲ್ಲಿ ಬಸ್ ಬಗ್ಗೆ ವಿಚಾರಿಸೋಣ ಎಂದ್ರೆ ಯಾವ ಅಧಿಕಾರಿನೂ ಇಲ್ಲ ಎಂದು ರಾಮಚಂದ್ರಪ್ಪ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬಂದ್ ಬಗ್ಗೆ ಗೊತ್ತಿತ್ತು ಆದರೆ, ಆಟೋ ಸಿಗುತ್ತೆ ಎಂದು ಕೊಂಡು ಬಂದು ಬಿಟ್ವಿ ಆದರೆ, ಆಟೋ ಕೂಡಾ ಸರಿಯಾಗಿ ಸಿಗುತ್ತಿಲ್ಲ. ಮೆಜೆಸ್ಟಿಕ್ ಹತ್ತಿರ ಸಿಗುತ್ತಿದ್ದ ಪ್ರೀಪೇಯ್ಡ್ ಆಟೋ ಸೇವೆ ಇವತ್ತು ಸಿಗುತ್ತಿಲ್ಲ. ನಾನು ಕುಮಾರಸ್ವಾಮಿ ಲೇಔಟ್ ಗೆ ಹೋಗಬೇಕು ಏನು ಮಾಡೋದು ಎಂದು ದಿನೇಶ್ ಪ್ರಶ್ನಿಸಿದ್ದಾರೆ.

ಬಂದ್ ಗೆ ತಾರಾ ಮೆರಗು : ಬೆಲೆ ಏರಿಕೆಯಿಂದ ಜನತೆಗೆ ತೀವ್ರ ಹೊರೆಯಾಗಿದೆ. ಕೇಂದ್ರ ಸರ್ಕಾರದ ನೀತಿಯನ್ನು ಒಪ್ಪಲು ಆಗುವುದಿಲ್ಲ ಎಂದು ಎಂಎಲ್ಸಿ ತಾರಾ ಹೇಳಿಕೆ ನೀಡಿದ್ದಾರೆ. ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ತೀವ್ರವಾಗಿ ಪ್ರತಿಭಟನೆ ನಡೆಸಿದ್ದಾರೆ.

ಬೊಮ್ಮನಹಳ್ಳಿ: ಬೊಮ್ಮನಹಳ್ಳಿ, ಹೊಸೂರು ರಸ್ತೆಯಲ್ಲಿ ಸುಮಾರು 2 ಗಂಟೆ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದ ಶಾಸಕ ಸತೀಶ್ ರೆಡ್ಡಿ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+