ಕೋರ್ಟ್ ಆದೇಶ:ಬೆಂಗಳೂರು- ಕಾರವಾರ ರಾತ್ರಿ ರೈಲು

ರಾತ್ರಿ ರೈಲು ಸಂಪರ್ಕ ಕಲ್ಪಿಸಬೇಕೆನ್ನುವ ಸಾರ್ವಜನಿಕ ಹಿತಾಶಕ್ತಿ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಹಗಲು ಸಂಚಾರ ರದ್ದು ಗೊಳಿಸಿ ರಾತ್ರಿ ಸಂಚಾರ ಆರಂಭಿಸಿದೆ. ಇಲ್ಲವೇ, ಬೆಂಗಳೂರಿನಿಂದ ಕಣ್ಣೂರಿಗೆ ಹೋಗುವ ರೈಲಿನ ಬೋಗಿಗಳನ್ನು ಮಂಗಳೂರಿನಲ್ಲಿ ಬೇರ್ಪಡಿಸಿ ಕೆಲ ಬೋಗಿಗಳನ್ನು ಕಣ್ಣೂರಿಗೆ, ಉಳಿದವುಗಳನ್ನು ಕಾರವಾರಕ್ಕೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಿ ಎಂದು ಖಡಕ್ ಆದೇಶ ನೀಡಿದೆ.
ಕಾರವಾರಕ್ಕೆ ಈಗಾಗಲೇ ಬೆಂಗಳೂರು ಯಶವಂತಪುರದಿಂದ ಹಗಲು ರೈಲು ಸಂಪರ್ಕ ಕಲ್ಪಿಸಲಾಗಿದೆ. ಮತ್ತೆ ರಾತ್ರಿ ರೈಲು ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲ ಎನ್ನುವ ರೈಲ್ವೆ ಇಲಾಖೆಯ ವಾದವನ್ನು ತಳ್ಳಿ ಹಾಕಿದ ಕೋರ್ಟ್ ಜನಸಾಮಾನ್ಯರ ಬೇಡಿಕೆಗಳಿಗೆ ಕಿವುಡರಾಗಬೇಡಿ ಎಂದು ತನ್ನ ಅಸಮಾಧಾನ ಹೊರ ಹಾಕಿದೆ.
ಹಗಲು ರೈಲು ಸಂಚಾರದಿಂದ ಜನರ ಸಮಯ ವ್ಯರ್ಥವಾಗುತ್ತದೆ. ಹಾಗಾಗಿ ರಾತ್ರಿ ರೈಲು ಸಂಚಾರಕ್ಕೆ ಯೋಜನೆ ರೂಪಿಸಿ ಎಂದು ಕೋರ್ಟ್ ರೈಲ್ವೆ ಇಲಾಖೆಗೆ ಆದೇಶಿಸಿದೆ.












Click it and Unblock the Notifications