ಗಂಡನ ಕಿರುಕುಳ ವಿರುದ್ಧ ನಟಿ ಯುಕ್ತಾ ಮುಖಿ ದೂರು

miss-world-actress-yukta-mookhey-case-against-hubby
ಮುಂಬೈ, ಸೆ.14: ಗಂಡನ ಕೌಟುಂಬಿಕ ಕಿರುಕುಳದ ವಿರುದ್ಧ ತಿರುಗಿಬಿದ್ದಿರುವ ಮಾಜಿ ವಿಶ್ವ ಸುಂದರಿ, ಖ್ಯಾತ ನಟಿ ಯುಕ್ತಾ ಮುಖಿ ದೂರು ನೀಡಿದ್ದಾರೆ.

'ನನ್ನ ಗಂಡ ಪ್ರಿನ್ಸ್ ಟ್ಯುಲಿ ನನ್ನನ್ನು ಹೊಡೆದೂ ಬಡಿದೂ ಮಾಡುತ್ತಿದ್ದಾನೆ. ಆದ್ದರಿಂದ ಅವನನ್ನು ಕಠಿಣ ಕ್ರಮ ಕೈಗೊಳ್ಳಿ' ಎಂದು ನಟಿ ಯುಕ್ತಾ ಮುಖಿ ಅವರು ಅಂಬೋಲಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹರಿಶ್ಚಂದ್ರ ವಾಟ್ಕರ್ ಅವರಿಗೆ ದೂರು ಸಲ್ಲಿಸಿದ್ದಾರೆ.

ನಟಿ ಯುಕ್ತಾ ಅವರು ತಮ್ಮ ಪತಿ ಪ್ರಿನ್ಸ್ ಟ್ಯುಲಿ ವಿರುದ್ಧ non-cognizable offenceನಡಿ ದೂರು ನೀಡಿರುವುದರಿಂದ ನಾವು FIR ದಾಖಲಿಸುವಂತಿಲ್ಲ. ತನಿಖೆ ಮಾಡುವಂತಿಲ್ಲ ಅಥವಾ ಪ್ರಿನ್ಸ್ ಟ್ಯುಲಿ ಅವರನ್ನು ಬಂಧಿಸುವಂತೆಯೂ ಇಲ್ಲ. ಕೋರ್ಟ್ ಸೂಚನೆಯ ಮೇರೆಗಷ್ಟೇ ನಾವು ಪ್ರಕರಣ ಮುಂದುವರಿಸಬೇಕಾಗುತ್ತದೆ ಎಂದು ಇನ್ಸ್ ಪೆಕ್ಟರ್ ಹರಿಶ್ಚಂದ್ರ ಅವರು ಪ್ರತಿಕ್ರಿಯಿಸಿದ್ದಾರೆ.

ಸುಮಾರು 2 ತಿಂಗಳ ಹಿಂದೆಯೇ ನಟಿ ಯುಕ್ತಾ ದೂರು ದಾಖಲಿಸಿದ್ದರು. ಈಗ ತಮ್ಮ ಪತಿ, ಉದ್ಯಮಿ ಪ್ರಿನ್ಸ್ ಟ್ಯುಲಿ ಅವರ ವಿರುದ್ಧ ನೇರವಾಗಿ ಕೋರ್ಟಿಗೆ ಮೊರೆ ಹೋಗುವ ಸಾಧ್ಯತೆಗಳಿವೆ.

ನಟಿ ಯುಕ್ತಾ ಮುಖಿ ಅವರು 1999ರ ಡಿಸೆಂಬರಿನಲ್ಲಿ ಲಂಡನ್ನಿನಲ್ಲಿ ತಮ್ಮ 20ನೆಯ ವಯಸ್ಸಿನಲ್ಲಿ Miss World ಆಗಿ ಆಯ್ಕೆಯಾಗಿದ್ದರು. ಆ ನಂತರ ಅವರನ್ನು ಬಾಲಿವುಡ್ ಬರಸೆಳೆದಿತ್ತು. ಇನ್ನು ಅವರ ಪತಿ ಪ್ರಿನ್ಸ್ ಟ್ಯುಲಿ ನ್ಯೂಯಾರ್ಕ್ ನೆಲೆಯ ಉದ್ಯಮಿ. ಭಾರತದಲ್ಲಿ ಅವರು ಬಹುದೊಡ್ಡ ಉದ್ಯಮಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+