ಕಾವೇರಿ ವಿವಾದ : ಮದ್ದೂರಿನಲ್ಲಿ ಗುಡುಗಿದ ಕುಮಾರಸ್ವಾಮಿ

JDS protest against Cauvery water dispute
ಮದ್ದೂರು, ಸೆ 12: ತಮಿಳುನಾಡಿಗೆ ನೀರುವ ಬಿಡುವ ನಿರ್ಧಾರ ಸರಿಯಾದುದಲ್ಲ. ಸೆಪ್ಟಂಬರ್ 19ರಂದು ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆಯುವ ಕಾವೇರಿ ಪ್ರಾಧಿಕಾರದ ಸಭೆಯ ನಂತರ ಜೆಡಿಎಸ್ ರಾಜ್ಯವ್ಯಾಪಿ ಚಳುವಳಿ ನಡೆಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗಲು ನಾವು ಬಿಡುವುದಿಲ್ಲ. ಪ್ರಧಾನಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವ ವಿಶ್ವಾಸ ನಮಗಿದೆ.

ಪಕ್ಷದ ಅಧ್ಯಕ್ಷ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಪ್ರತಿಭಟನೆ ನಡೆಸಲಿದೆ. ಈ ಪ್ರತಿಭಟನೆಯ ರೂಪುರೇಷೆಯನ್ನು ಸದ್ಯದಲ್ಲೇ ಸಿದ್ದಪಡಿಸಲಿದ್ದೇವೆ.

ಸರ್ಕಾರ ಕಾವೇರಿ ವಿಷಯವನ್ನು ಸರಿಯಾಗಿ ನಿಭಾಯಿಸಿಲ್ಲ. ಸುಪ್ರೀಂಕೋರ್ಟ್ ನಲ್ಲಿ ನಮ್ಮ ಭಾಗದ ರೈತರ ಪರಿಸ್ಥಿತಿಯನ್ನು ಮನದಟ್ಟು ಮಾಡುವಲ್ಲಿ ನೀರಾವರಿ ಇಲಾಖೆ ವಿಫಲವಾಗಿದೆ.

ಈ ವಿಷಯದಲ್ಲಿ ಹೆಚ್ಚು ಮಾತನಾಡಿ ರಾಜಕೀಯ ಮಾಡಲು ನನಗಿಷ್ಟವಿಲ್ಲ, ಕಾವೇರಿ ವಿಚಾರದಲ್ಲಿ ಜೆಡಿಎಸ್ ರಾಜ್ಯ ಸರಕಾರದ ಬೆಂಬಲಕ್ಕಿದೆ.

ಪ್ರಧಾನಿ ಸಭೆಗೆ ಮುನ್ನ ನಡೆಯುವ ಮತ್ತೊಂದು ಸುತ್ತಿನ ಸರ್ವ ಪಕ್ಷಗಳ ಸಭೆಯಲ್ಲಿ ನಾನು ಭಾಗವಹಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಸರ್ವೋಚ್ಚ ನ್ಯಾಯಾಲಯ ನೀಡಿದ ಕಾವೇರಿ ಮಧ್ಯಂತರ ಆದೇಶದ ಹಿನ್ನಲೆಯಲ್ಲಿ ಕರೆಯಲಾಗಿದ್ದ ಸರ್ವಪಕ್ಷಗಳ ಸಭೆಯಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶ ಪಾಲಿಸಲೇ ಬೇಕಾಗುತ್ತದೆ ಎಂದು ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದರು.

ಮುಖ್ಯಮಂತ್ರಿಗಳು ಮಂಗಳವಾರ (ಸೆ 11) ಕರೆದಿದ್ದ ಸಭೆಯಲ್ಲಿ ಜೆಡಿಎಸ್ ನಿಂದ ಎಚ್ ಡಿ ರೇವಣ್ಣ ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+