ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಸಮಸ್ಯೆಗಳನ್ನು ಪತ್ತೆಹಚ್ಚಿದ ಎಕಾನಮಿಸ್ಟ್‌

By Srinath
|
Google Oneindia Kannada News

rahul-gandhi-problem-india-gandhi-family-the-economist
ನವದೆಹಲಿ, ಸೆ. 12: ಇತ್ತೀಚೆಗೆ ವಿದೇಶಿ ಪತ್ರಿಕೆಗಳು ಪ್ರಧಾನಿ ಮನಮೋಹನ ಸಿಂಗ್‌ ಅವರನ್ನು underachiever ಎಂದು ಟೀಕಿಸಿರುವುದನ್ನು ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಅರಗಿಸಿಕೊಳ್ಳಲಾಗಿಲ್ಲ. ಆಗಲೇ The Economist ಎಂಬ ಬ್ರಿಟನ್‌ ವಾರಪತ್ರಿಕೆಯು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್‌ ಗಾಂಧಿ ಅವರನ್ನು ಲೇವಡಿ ಮಾಡಿದೆ.

'ಕಾಂಗ್ರೆಸ್ಸಿನ ಯುವರಾಜ ರಾಹುಲ್‌ ಗಾಂಧಿಯ ಗುರಿಯಾದರೂ ಏನು?' ಎಂದೇ ಲೇಖನ ಪ್ರಾರಂಭಿಸಿರುವ ಪತ್ರಿಕೆಯು, 'ಬೇರೆಯವರಿಗೆ ಹಾಗಿರಲಿ... ಖುದ್ದು ತಮ್ಮ ಸಾಮರ್ಥ್ಯದ ಬಗ್ಗೆಯೇ ರಾಹುಲ್‌ ಗಾಂಧಿ ಗೊತ್ತಿಲ್ಲ. ಅಲ್ಲದೆ, ಅವರು ಅಧಿಕಾರ ಹಿಡಿಯಲು, ಪ್ರಮುಖ ಜವಾಬ್ದಾರಿ ವಹಿಸಿಕೊಳ್ಳಲು ಉತ್ಸುಕತೆಯನ್ನೂ ತೋರುತ್ತಿಲ್ಲ' ಎಂದು ಟೀಕಿಸಿದೆ.

ಆದರೆ, ಈ ಲೇಖನವನ್ನು ಕಾಂಗ್ರೆಸ್‌ ವಲ್ತಾರ ಮನೀಶ್ ತಿವಾರಿ ತೀವ್ರವಾಗಿ ಖಂಡಿಸಿದ್ದಾರೆ. (ರಾಹುಲ್‌ ಗಾಂಧಿ ಕುರಿತಾದ ಬ್ರಿಟನ್‌ ವಾರಪತ್ರಿಕೆ 'ದಿ ಎಕಾನಮಿಸ್ಟ್‌' ಪತ್ರಿಕೆ ಛಾಪಿಸಿರುವ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ)

ರಾಹುಲ್‌ ಗಾಂಧಿ ಇದುವರೆಗೆ ಕೇವಲ ಸ್ಥಳೀಯ ಚುನಾವಣೆಯಲ್ಲಷ್ಟೇ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಆದರೆ ಅದೂ ಫ‌ಲ ಕೊಟ್ಟಿಲ್ಲ. ಅಲ್ಲದೆ, ಅವರು ವೃತ್ತಿಪರ ರಾಜಕಾರಣಿ ರೀತಿಯೂ ರೂಪುಗೊಳ್ಳುತ್ತಿಲ್ಲ. ಹೀಗಾಗಿ 2014ರ ಚುನಾವಣೆಗೆ ಮುನ್ನವಾದರೂ ರಾಹುಲ್‌ ಗಾಂಧಿ ಅಗತ್ಯವಾಗಿ ನಾಯಕತ್ವ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಒಳಿತು ಎಂದು The Economist ಕಟುವಾಗಿ ಬರೆದಿದೆ.

'ರಾಹುಲ್‌ ಗಾಂಧಿ ಅವರು ದೊಡ್ಡ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಅದೂ ಅವರು ದೇಶವನ್ನೇ ಮುನ್ನಡೆಸುವ ಜವಾಬ್ದಾರಿಯನ್ನು ಹೊರುವ ಸಾಧ್ಯತೆ ಇದೆ. ಯಾರಾದರೂ ಒಂದು ಹುದ್ದೆಗೆ ಅರ್ಜಿ ಸಲ್ಲಿಸಿದರೆ ಅವರು ಕನಿಷ್ಠ ಆ ಹುದ್ದೆಗೆ ಬೇಕಾದ ಅರ್ಹತೆಯನ್ನು ಹೊಂದಬೇಕು. ಆದರೆ ಈ ಅರ್ಹತೆಗಳನ್ನು ರಾಹುಲ್‌ ತೋರ್ಪಡಿಸುತ್ತಿಲ್ಲ'.

'ಅವರು ತಮ್ಮ ಹಿಂದಿನ ವಿದ್ಯಾರ್ಥಿ ಜೀವನದ ಬಗ್ಗೆಯಾಗಲಿ, ಯಾವುದೇ ಪ್ರಸಕ್ತ ವಿಷಯಗಳ ಬಗ್ಗೆಯಾಗಲಿ ಸೂಕ್ತ ಉತ್ತರಗಳನ್ನೇ ನೀಡುವುದಿಲ್ಲ. ಅವರು ತಮ್ಮ ಗುರಿಯ ಬಗ್ಗೆಯೂ ಮಾತನಾಡುವುದಿಲ್ಲ. ಅಣ್ಣಾ ಹಜಾರೆ ಹೋರಾಟ ನಡೆದಾಗ ಸಂಸತ್ತಿನಲ್ಲಿ ಒಮ್ಮೆ ಮಾತಾಡಿದ್ದು ಬಿಟ್ಟರೆ ಅವರೆಂದೂ ಮಾತನಾಡುವ ಧೈರ್ಯವನ್ನೇ ತೋರಿಲ್ಲ' ಎಂದು ಪತ್ರಿಕೆಯು ರಾಹುಲ್‌ ಗಾಂಧಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

English summary
The latest article of The Economist titled 'The Rahul Problem', which starts with question "what is the point of Rahul Gandhi" and says that the Congress's "prince in waiting has not shown any hunger for the job".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X