ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಟ್ಟೂರಲ್ಲಿ ನೀರೈತೆ; ಆದ್ರೂ ತಮಿಳ್ನಾಡು ಕ್ಯಾತೆ ತೆಗೆದೈತೆ

By Srinath
|
Google Oneindia Kannada News

ಬೆಂಗಳೂರು, ಸೆ. 11: ತಮಿಳುನಾಡಿನ ಮೆಟ್ಟೂರು ಅಣೆಕಟ್ಟೆಯಲ್ಲಿ ಇನ್ನೂ ನೀರಿದೆ. ಆದ್ರೂ ತಮಿಳುನಾಡು ಎಂದಿನಂತೆ ಕ್ಯಾತೆ ತೆಗೆದೈತೆ. ಅಲ್ಲೇನೂ ನೀರಿಗೆ ಅಭಾವ ಕಾಡುತ್ತಿಲ್ಲ. ಆದರೆ ಇಲ್ಲಿ ಕರ್ನಾಟಕದಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಕೊರತೆ ಎದುರಾಗಿದೆ. ಆದರೂ ಅಲ್ಲಿನ ಮುಖ್ಯಮಂತ್ರಿ, ಸೋದರಿ ಜಯಲಲಿತಾ ಎಂದಿನಂತೆ ತಗಾದೆ ತೆಗೆದಿದ್ದಾರೆ.

cauvery-row-crucial-all-party-meet-sept-11-vidhan-soudha

ಈ ಹಿನ್ನೆಲೆಯಲ್ಲಿ ಸದ್ಯಕ್ಕೆ 10 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಬೇಕೆನ್ನುವ ಸುಪ್ರೀಂಕೋರ್ಟ್ ಆದೇಶವನ್ನು ಚಾಚೂತಪ್ಪದೆ ಪಾಲಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಆದರೆ ಇದೇ ವೇಳೆ ಎರಡೂ ರಾಜ್ಯಗಳಲ್ಲಿ ಕಾವೇರಿ ಕಣಿವೆಯಲ್ಲಿ ನೀರಿನ ಸ್ಥಿತಿಗತಿಯನ್ನು ಲೆಕ್ಕ ಹಾಕಲು ಪರಿಣತರ ಸಮಿತಿಯೊಂದನ್ನು ರಚಿಸುವಂತೆ ಕಾವೇರಿ ನದಿ ನ್ಯಾಯಾಧಿಕರಣವನ್ನು ಒತ್ತಾಯಿಸಲು ರಾಜ್ಯ ನಿರ್ಧರಿಸಿದೆ. ಈ ಸಂಬಂಧ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಧ್ಯಕ್ಷೆತೆಯಲ್ಲಿ ಉನ್ನತಮಟ್ಟದ ಸಮಿತಿಯ ಸಭೆ ಇನ್ನೇನು ಕೆಲ ಹೊತ್ತಿನಲ್ಲಿ ವಿಧಾನಸೌಧದಲ್ಲಿ ಆರಂಭವಾಗಲಿದೆ.

ವಾಸ್ತವದ ಸ್ಥಿತಿಯನ್ನು ಅಧ್ಯಯನ ಮಾಡದೆಯೇ ನೀರು ಬಿಡುವಂತೆ ಹೇಳುತ್ತಿರುವುದು ಕರ್ನಾಟಕಕ್ಕೆ ಅಪಚಾರ ಮಾಡಿದಂತಾಗಿದೆ. ಇಲ್ಲಿ ತಮಿಳುನಾಡು ರಾಜಕೀಯಕ್ಕೆ ಮಣಿದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂಬುದನ್ನು ಇದೇ 19ರಂದು ಪ್ರಧಾನಿಗೂ ಮನವರಿಕೆ ಮಾಡಿಕೊಡಲು ರಾಜ್ಯ ಆಲೋಚಿಸಿದೆ.

ಮೆಟ್ಟೂರು ಜಲಾಶಯದಲ್ಲಿ ಸೆ. 1ಕ್ಕೆ 40.8 ಟಿಎಂಸಿ ನೀರಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 44 ಟಿಎಂಸಿ ಯಷ್ಟು ನೀರಿತ್ತು. ಕೆಆರ್ ಎಸ್ ನಲ್ಲಿ ಇದೇ ವೇಳೆ 105 ಅಡಿ ಅಂದರೆ 20 ಟಿಎಂಸಿ ನೀರಿದೆ. ಕಳೆದ ವರ್ಷ 123 ಅಡಿ ನೀರಿತ್ತು.

ಬೆಂಗಳೂರಿಗೆ ಕಂಟಕ:
ಕಾವೇರಿ ಕಣಿವೆಯ ಜಲಾಶಯಗಳಲ್ಲಿ 69 ಟಿಎಂಸಿ ಮಾತ್ರ ನೀರು ಇದೆ. ಈ ನೀರು ಬೆಂಗಳೂರು ಸೇರಿದಂತೆ ಇತರೆಡೆ ಕಡಿಯುವ ನೀರು ಮತ್ತು ಬೆಳೆಗಳಿಗೆ ಸಾಕಾಗುವುದಿಲ್ಲ. ಅದೇ ತಮಿಳುನಾಡಿನಲ್ಲಿ 30 ಟಿಎಂಸಿಯಷ್ಟು ಅಂತರ್ಜಲವಿದೆ. ಇದು ಅಲ್ಲಿನ ಕೃಷಿ ನೀರಾವರಿ ಜತೆಗೆ ಕುಡಿಯುವ ನೀರು ಅಗತ್ಯಕ್ಕೂ ಸಾಕಾಗುತ್ತದೆ.

ತಮಿಳುನಾಡು ಖ್ಯಾತೆಗೆ ಇದೇ ಕಾರಣವಾಗಿರುವುದು. ಕರ್ನಾಟಕ ತನ್ನ ಕಾವೇರಿ ಕಣಿವೆ ಪ್ರದೇಶದಲ್ಲಿ ಇದ್ದಬದ್ದ ನೀರನ್ನೆಲ್ಲ ಎಲ್ಲಿ ಬಳಸಿಕೊಂಡುಬಿಡುತ್ತದೆ. ಮುಂದೆ ಕಾವೇರಿ ಕಣಿವೆಯನ್ನು ಬರಿದಾಗುಸುತ್ತದೋ ಎಂಬ ಆತಂಕಕ್ಕೆ ಸಿಲುಕಿದೆ. ಹಾಗಾಘಿಯೇ ತಕ್ಷಣ ನೀರು ಬಿಡುವಂತೆ ಜಾಣ ವಾದ ಮಂಡಿಸಿರುವುದು.

ಸದ್ಯಕ್ಕೆ ಆಯಾ ತಿಂಗಳಿಗೆ ತಕ್ಕಂತೆ ತಾತ್ಕಾಲಿಕ ಪರಿಹಾರೋಪಾದಿಯಲ್ಲಿ ಕಾವೇರಿ ಹಂಚಿಕೆಯಾಗುತ್ತಿದೆ. ಅಂತಿಮವಾಗಿ ಇನ್ನೊಂದು ವರ್ಷದಲ್ಲಿ ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪು ಹೊರಳುವ ಸಾಧ್ಯತೆಯಿದೆ.

ಸದ್ಯ ಬೆಂಗಳೂರಿಗೆ ಕಾವೇರಿಯಿಂದ ಸರಬರಾಜಾಗುತ್ತಿರುವ ನೀರಿನ ಪ್ರಮಾಣ ಸುಮಾರು 250 ಟಿಎಂಸಿ. ಕಾವೇರಿ 4ನೇ ಹಂತದ ಯೋಜನೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಇನ್ನೂ 30 ಟಿಎಂಸಿ ನೀರು ಸರಬರಾಜು ಆಗಬೇಕಾಗಿದೆ.

ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪು ಹೊರಬಿದ್ದರೆ ಬೆಂಗಲೂಋಉ ನಗರಕ್ಕೆ ಕೇವಲ 8 ಟಿಎಂಸಿ ನೀರು ಸಿಗುವ ಲಕ್ಷಣಗಳಿವೆ. ಇಷ್ಟು ಕಡಿಮೆ ಪ್ರಮಾಣದ ನೀರು ಬೃಹತ್ ಬೆಂಗಳೂರಿನ ಒಂದು ಚಿಕ್ಕ ಬಡಾವಣೆಗೂ ಸಾಕಾಗುವುದಿಲ್ಲ.

English summary
The Karnataka government has convened an all party meeting in Bangalore today (Sept 11) to finalise its stand on the cauvery river water sharing issue. Prime Minister Manmohan Singh has convened the CRA meeting in Delhi on September 19 to discuss the water sharing issue between Tamil Nadu and Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X