• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೆಟ್ರೋಲ್ ಬೆಲೆ ಏರಿಕೆ ಸದ್ಯಕ್ಕಿಲ್ಲ: ಸಭೆ ಮುಂದೂಡಿಕೆ

By Mahesh
|
CCPA meet postponed; no fuel price hike for now

ನವದೆಹಲಿ, ಸೆ.11: ಮಂಗಳವಾರ (ಸೆ.11) ಸಂಜೆ ನಡೆಯಬೇಕಾಗಿದ್ದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ(ಸಿಸಿಪಿಎ) ಸಭೆ ಮುಂದೂಡಲ್ಪಟ್ಟಿದೆ. ಹೀಗಾಗಿ ಇಂದು ರಾತ್ರಿ ಪೆಟ್ರೋಲ್ ಉತ್ಪನ್ನಗಳ ದರ ಏರಿಕೆ ಬಿಸಿ ಎದುರಿಸಲು ಸಿದ್ಧರಾಗುತ್ತಿದ್ದ ಗ್ರಾಹಕರು ಕೊಂಚ ನಿರಾಳದಿಂದ ಉಸಿರಾಡಬಹುದಾಗಿದೆ.

ಆದರೆ, ಪೆಟ್ರೋಲ್, ಡೀಸೆಲ್, ಎಲ್ ಪಿಜಿ ಹಾಗೂ ಸೀಮೆಎಣ್ಣೆ ಬೆಲೆ ಏರಿಕೆ ಮಾತ್ರ ಖಾತ್ರಿಯಾಗಿದೆ. ಯಾವಾಗ ಎಂಬುದು ಸಚಿವ ಜೈಪಾಲ್ ರೆಡ್ಡಿ ಅವರಿಗೆ ಗೊತ್ತು. ಸಿಸಿಪಿಎ ಮತ್ತೆ ಯಾವಾಗ ಸಭೆ ನಡೆಯಲಿದೆ ಎನ್ನುವುದು ತಿಳಿದಿಲ್ಲ. ಸಭೆ ಸೇರಿದ ಬಳಿಕ ಪೆಟ್ರೋಲ್ ಬೆಲೆ ಏರಿಕೆಯಂತೂ ಆಗಲಿದೆ.

ಡೀಸೆಲ್, ಪೆಟ್ರೋಲ್, ಸೀಮೆಎಣ್ಣೆ ಮತ್ತು ಎಲ್ ಪಿಜಿ ಬೆಲೆ ಏರಿಕೆ ಅನಿವಾರ್ಯವೆಂದು ಪೆಟ್ರೋಲಿಯಂ ಸಚಿವ ಎಸ್. ಜೈಪಾಲ್ ರೆಡ್ಡಿ ಮಂಗಳವಾರ ಮಧ್ಯಾಹ್ನವಷ್ಟೇ ಹೇಳಿದ್ದರು. ಆದರೆ ಸಂಜೆ ವೇಳೆಗೆ ನಡೆಯಬೇಕಾಗಿದ್ದ ಸಿಸಿಪಿಎ ಸಭೆಯಲ್ಲಿ ಬೆಲೆ ಏರಿಸುವ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ, ನಂತರ ಸಿಸಿಪಿಎ ಸಭೆಯೇ ಮುಂದೂಡಲ್ಪಟ್ಟಿದೆ.

ನಾನು ಸಿಸಿಪಿಎಗೆ ಬೆಲೆಗಳ ಬಗ್ಗೆ ಮಾಹಿತಿ ಕಳುಹಿಸಿದ್ದೇನೆ. ಸಬ್ಸಿಡಿ ತುಂಬಾ ಹೆಚ್ಚಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಯಾವುದೇ ಮುಲಾಜಿಲ್ಲದೆ ಹೆಚ್ಚಿಸಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಪೆಟ್ರೋಲಿಯಂ ಸಚಿವ ಜೈಪಾಲ್ ರೆಡ್ಡಿ ತಿಳಿಸಿದ್ದಾರೆ.

ಸಿಸಿಪಿಎ ಇದೇ ವೇಳೆ ತಿಂಗಳಿಗೆ 50 ಸಾವಿರ ಅಥವಾ ವರ್ಷಕ್ಕೆ ಆರು ಲಕ್ಷ ರೂ. ಅಧಿಕ ವರಮಾನವಿರುವ ಕುಟುಂಬಗಳಿಗೆ ಸಬ್ಸಿಡಿಯಲ್ಲಿ ಎಲ್ ಪಿಜಿ ನೀಡುವುದನ್ನು ಸ್ಥಗಿತಗೊಳಿಸುವ ಬಗ್ಗೆ ಕೂಡ ನಿರ್ಧರಿಸಲಿದೆ.

ಸರಕಾರಿ ತೈಲೋತ್ಪಾದನೆ ಕಂಪನಿಗಳು ಪ್ರಸಕ್ತ ಆರ್ಥಿಕ ವರ್ಷದಲ್ಲಿ 34 ಶತಕೋಟಿ ಡಾಲರ್ ನಷ್ಟ ಅನುಭವಿಸಿದೆ. ಆದ್ದರಿಂದ ಕಂಪನಿಗಳು ಬೆಲೆಯೇರಿಕೆ ಅನಿವಾರ್ಯತೆಯಲ್ಲಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತೀವ್ರವಾಗಿ ಕುಸಿದಿರುವುದರಿಂದ ಮತ್ತು ಡಾಲರ್‌ಗೆ ಪ್ರತಿಯಾಗಿ ಇರುವ ರುಪಾಯಿ ಮೌಲ್ಯದ ಆಧಾರದ ಮೇಲೆ ಪೆಟ್ರೋಲ್ ಬೆಲೆಯನ್ನು ನಿಗದಿಪಡಿಸಲಾಗಿದೆ.

ಆಯಾ ರಾಜ್ಯದಲ್ಲಿ ಮೌಲ್ಯವರ್ಧಿತ ತೆರಿಗೆ ಮತ್ತು ಪ್ರವೇಶ ತೆರಿಗೆ ವಿಭಿನ್ನವಾಗಿರುವುದರಿಂದ ಪೆಟ್ರೋಲ್ ಬೆಲೆ ಇಳಿಕೆಯಲ್ಲಿಯೂ ಏರಿಳಿತ ಕಂಡುಬರುತ್ತದೆ. ಡಾಲರ್‌ಗೆ ಪ್ರತಿಯಾಗಿ ರುಪಾಯಿ ಮೌಲ್ಯ ಇನ್ನಷ್ಟು ಸ್ಥಿರಗೊಂಡಿದ್ದರೆ ಪೆಟ್ರೋಲ್ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇರುತ್ತದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೆಷನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲ್ ಸಂಸ್ಥೆ ಗಳು ಮಾರ್ಚ್ 31, 2012ಕ್ಕೆ ಅನ್ವಯವಾಗುವಂತೆ 4,860 ಕೋಟಿ ರು ನಷ್ಟ ದಾಖಲಿಸಿತ್ತು. ಪ್ರತಿ ಲೀಟರ್ ಪೆಟ್ರೋಲ್ ಗೆ 6.28 ರು ಕಳೆದುಕೊಳ್ಳುತ್ತಿದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಜೈಪಾಲ್ ರೆಡ್ಡಿ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. (ಪಿಟಿಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಪೆಟ್ರೋಲ್ ಸುದ್ದಿಗಳುView All

English summary
A meeting of the Cabinet Committee on Political Affairs (CCPA), which could have decided on raising diesel and cooking fuel prices, was on Tuesday postponed even as oil minister S Jaipal Reddy said the price increase was "unavoidable".

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more