ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಡೀಸೆಲ್ ಬೆಲೆ ತೀವ್ರ ಏರಿಕೆ ಖಚಿತ ಖಚಿತ

By Sadhu
|
Google Oneindia Kannada News

india-govt-gets-ready-to-hike-petrol-diesel-lpg-prices
ನವದೆಹಲಿ. ಸೆ. 11: ಸದ್ಯದಲ್ಲೇ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಸುವುದು ಅನಿವಾರ್ಯ. ಅದನ್ನು ತಡೆಯಲು ನಮ್ಮಿಂದಲೂ (ಸರಕಾರ) ಸಾಧ್ಯವಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಜೈಪಾಲ್ ರೆಡ್ಡಿ ಘೋಷಿಸಿದ್ದಾರೆ. ಅತ್ಯಂತ ವಿನಮ್ರತೆಯಿಂದ ಮತ್ತು ಅನಿವಾರ್ಯತೆಯಿಂದ ಪೆಟ್ರೋಲ್ ಬೆಲೆಯೇರಿಕೆ ಬಗ್ಗೆ ನಾನು ಜನರಿಗೆ ತಿಳಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

Indian Oil Corporation, Bharat Petroleum Corporation ಮತ್ತು Hindustan Petroleum Corporation ಸಂಸ್ಥೆಗಳು ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ಸೀಮೆಎಣ್ಣೆ ಬೆಲೆಗಳನ್ನು ಸರಕಾರದ ಅನುಮತಿ ಸಿಕ್ಕಿದ ತಕ್ಷಣ ಏರಿಸಲು ತುದಿಗಾಲಲ್ಲಿ ನಿಂತಿವೆ.

ಸೋನಿಯಾ ಗಾಂಧಿ ವಿದೇಶದಲ್ಲಿ ಆರೈಕೆ ಮಿಗಿಸಿಕೊಂಡು ವಾಪಸಾಗುತ್ತಿದ್ದಂತೆ ಸರಕಾರ ಅಧಿಕೃತವಾಗಿ ತೈಲೋತ್ಪನ್ನಗಳ ಬೆಲೆಯೇರಿಕೆ ಬಗ್ಗೆ ಸ್ಪಷ್ಟಪಡಿಸಿದೆ. ಕೇಂದ್ರ ಸಂಪುಟದ ಅನುಮೋದನೆಯೊಂದೇ ಬಾಕಿ. ಅದು ಹೊರಬೀಳುತ್ತಿದ್ದಂತೆ ಯಾವುದೇ ಘಳಿಗೆ ಬೆಲೆಯೇರಬಹುದು ಎಂದು ಜೈಪಾಲ್ ರೆಡ್ಡಿ ಸೂಚ್ಯವಾಗಿ ಹೇಳಿದ್ದಾರೆ.

ಆದರೆ ಇಂದು ಸಂಜೆಯೇ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಕೇಂದ್ರ ಸಂಪುಟವು ರಾಜಕೀಯ ವ್ಯವಹಾರಗಳಿಗಾಗಿ ಸಭೆ ಸೇರುತ್ತಿದೆ. ಆದರೆ ಅದರಲ್ಲಿ ತೈಲೋತ್ಪನ್ನಗಳ ಬೆಲೆಯೇರಿಕೆ ವಿಷಯ ಪ್ರಸ್ತಾಪವಾಗುವುದಿಲ್ಲ.

ಸರಕಾರಿ ತೈಲೋತ್ಪಾದನೆ ಕಂಪನಿಗಳು ಪ್ರಸಕ್ತ ಆರ್ಥಿಕ ವರ್ಷದಲ್ಲಿ 34 ಶತಕೋಟಿ ಡಾಲರ್ ನಷ್ಟ ಅನುಭವಿಸಬೇಕಾದ ದುರ್ಭರ ಪರಿಸ್ಥಿತಿಯಲ್ಲಿವೆ. ಆದ್ದರಿಂದ ಕಂಪನಿಗಳು ಬೆಲೆಯೇರಿಕೆ ಅನಿವಾರ್ಯತೆಯಲ್ಲಿವೆ. ಆದ್ದರಿಂದ ನಾಳೆಯೋ ಅಥವಾ ಇನ್ನೊಂದು ವಾರದಲ್ಲೋ ಅಂತೂ ಶೀಘ್ರವೇ ತೀವ್ರ ಬೆಲೆಯೇರಿಕೆ ಖಚಿತ ಎಂದು ರೆಡ್ಡಿ ಖಚಿತ ಧ್ವನಿಯಲ್ಲಿ ಹೇಳಿದರು.

English summary
India govt gets ready to hike Petrol Diesel LPG Gas prices. Sources in the government say an across-the-board hike on all fuel products is imminent. Thus prices of petrol, diesel, LPG cylinder and kerosene will be increased.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X