ಶೋಭಾ ಮೇಡಂ ಅವರಿಗೂ ಪಕ್ಷಾಧ್ಯಕ್ಷ ಪಟ್ಟ ಬೇಡಂತೆ!

ಕೆಂಗೇರಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ನಿರತರಾಗಿರುವ ಸಚಿವೆ ಶೋಭಾ, ರಾಜಧ್ಯಕ್ಷರ ನೇಮಕಕ್ಕೆ ಸಂಧಾನಾತ್ಮಕ ಪದ್ದತಿ ಇದೆ. ನಾನು ನೇರವಾಗಿ ಅಧ್ಯಕ್ಷರಾಗಲು
ಸಾಧ್ಯವಿಲ್ಲ. ಒಂದು ವೇಳೆ ನಾಮಕರಣ ಅಧ್ಯಕ್ಷೆಯಾದರೆ ಅದು ನಾಮಕಾಸ್ಥೆಯಾಗಿರುತ್ತೆ ವಿನಃ ಅಧಿಕಾರಯುಕ್ತ ಆಗಿರುವುದಿಲ್ಲ. ನಿಜ, ಪಕ್ಷದ ಸಂಘಟನೆಯಲ್ಲಿಯೇ ಸಂತಸವಿದೆ.
ಆದರೆ, ಯಶವಂತಪುರ ಕ್ಷೇತ್ರದ ಜನತೆ ನನ್ನನ್ನು ಶಾಸಕಿಯಾಗಿ ಆಯ್ಕೆ ಮಾಡಿದ್ದಾರೆ. ಹಿಂದೆ ಬಿದ್ದಿಲ್ಲ ಇದರಿಂದ ನೇರವಾಗಿ ಪ್ರಜಾಸೇವೆ ಮಾಡುವ ಅವಕಾಶವೂ ಸಿಕ್ಕಿತ್ತು. ಜೊತೆ ಜೊತೆಗೆ ಗ್ರಾಮೀಣಾಭಿವೃದ್ಧಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದೇನೆ. ಪ್ರಸ್ತುತ ಇಂಧನ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿರುವುದು ತೃಪ್ತಿ ಇದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯದ ಬಗ್ಗೆಯೂ ತೃಪ್ತಿ ತಂದಿದೆ.
ಯಶವಂತಪುರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಸಮಾರೋಪಾಧಿಯಲ್ಲಿ ನಡೆಯಬೇಕು. ಚುನಾವಣಾ ಮುನ್ನವೇ ಕ್ಷೇತ್ರದ ಅಭಿವೃದ್ಧಿಯಾದ ನಂತರ ನನ್ನನ್ನು ಸತ್ಕರಿಸಿ ಎಂದು ಜನತೆಯನ್ನು ಕೋರಿಕೊಂಡಿದ್ದೇ. ಆದರೆ, ಎಲ್ಲವೂ ಅಂದುಕೊಂಡಂತೆ ನಡೆಯಲಿಲ್ಲ. ಆದರೂ ನಾನು ಕ್ಷೇತ್ರದ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವೆ ಎಂಬ ಮಾತನ್ನು ಮಾತ್ರ ಒಪ್ಪುವುದಿಲ್ಲ ಎಂದರು.
ಮತ್ತೆ ಬಿಜೆಪಿ ಗ್ಯಾರಂಟಿ: ಪಕ್ಷದ ಚಿಂತನೆ, ತತ್ವ ನಿಷ್ಠೆಗಳ ಪಾಲನೆ ಹಾಗೂ ಅಟಲ್ ಬಿಹಾರಿ ವಾಜಪೇಯಿಯವರ ಸ್ಪೂರ್ತಿ ನನ್ನಲ್ಲಿ ಮನೆ ಮಾಡಿದೆ ಎಂದು ಹೇಳಿದ ಶೋಭಾ ಕರಂದ್ಲಾಜೆ, ಆಡಳಿತದಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲವು ಸೂಸೂತ್ರವಾಗಿ ನಡೆಯುತ್ತಿದೆ. ಮೇ ತಿಂಗಳಲ್ಲಿ ಚುನಾವಣೆ ಆಗಬಹುದು. ಬಿಜೆಪಿ ಮತ್ತೊಮ್ಮ ಬಹುಮತ ಗಳಿಸುವುದು ನಿಸ್ಸಂದೇಹ.
ಯಡಿಯೂರಪ್ಪ ಅವರಂಥ ಸಮರ್ಥ ನಾಯಕರ ಮುಂದಾಳತ್ವದಲ್ಲಿ ಮತ್ತೊಮ್ಮೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ಸದಾನಂದ ಗೌಡ, ಜಗದೀಶ್ ಶೆಟ್ಟರ್ ಅವರ ಸರ್ಕಾರದ ಸಾಧನೆ ನಮ್ಮ ಕೈ ಹಿಡಿಯಲಿದೆ ಎಂದು ಶೋಭಾ ಹೇಳಿದರು.
ಮುಂಬರುವ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಯಾರಾಗಬಹುದು ಎಂಬ ಪ್ರಶ್ನೆಗೆ ಸಂದೇಹವೇಕೆ ನಾನೇ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದ ಅವರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅಗತ್ಯವಿರುವ ಕಟ್ಟಡದ ಬಗ್ಗೆಯೂ ತಾವು ಶಿಫಾರಸ್ಸು ಮಾಡುವುದಾಗಿಯೂ ಇದೇ ವೇಳೆ ಅವರು ತಿಳಿಸಿದರು. ಬಿಜೆಪಿ ಅಭಿಯಾನಕ್ಕೂ ಮುನ್ನ ಗೋ ಪೂಜೆಯಲ್ಲಿ ಪಾಲ್ಗೊಂಡ ಸಚಿವರು ತಮ್ಮ ಸದಸ್ಯತ್ವ ನೋಂದಣಿಯೊಂದಿಗೆ ಅಭಿಯಾನಕ್ಕೆ ಚಾಲನೆ ನೀಡಿದರು.
'ರಾಜ್ಯಾಧ್ಯಕ್ಷ ಹುದ್ದೆ ಗಿಟ್ಟಿಸಲು ನಾನು ದೆಹಲಿಗೆ ಹೋಗಿ ಲಾಬಿ ನಡೆಸಿದೆ ಎಂಬುದು ಸುಳ್ಳು. ನನಗೆ ರಾಜ್ಯಾಧ್ಯಕ್ಷ ಸ್ಥಾನ ಬೇಡ. ನನಗೆ ಅಧ್ಯಕ್ಷ ಪಟ್ಟ ಕೊಡಿಸಲು ಯಾರೊಬ್ಬರು ನನ್ನ ಪರ ವಕಾಲತ್ತು ವಹಿಸುವುದು ಬೇಡ' ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆ ನಂತರ ಮುರುಗೇಶ್ ನಿರಾಣಿ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಉಳಿದಂತೆ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪ, ಸದಾನಂದ ಗೌಡರ ನಂತರ ಸಚಿವ ಸಿಟಿ ರವಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ಸಂಸದ ನಳಿನ್ ಕುಮಾರ್ ಕಟೀಲ್, ಪ್ರಹ್ಲಾದ ಜೋಶಿ, ಶಾಸಕ ರಘುನಾಥರಾವ್ ಮಲ್ಹಾಪುರೆ ಹೆಸರು ಕೇಳಿಬಂದಿದೆ.












Click it and Unblock the Notifications