ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು, ಬೆಂಗಳೂರು ಮಹಿಳಾ ಟೆಕ್ಕಿಗಳು ನೀರುಪಾಲು

By Srinath
|
Google Oneindia Kannada News

ibm-ktk-women-techies-drown-pune-kashid-beach
ಬೆಂಗಳೂರು, ಸೆ.10: ಪ್ರತಿಷ್ಠಿತ IBM ಸಾಫ್ಟ್ ವೇರ್ ಕಂಪನಿಯ 15 ಟೆಕ್ಕಿಗಳು ಮೊನ್ನೆ ವಾರಾಂತ್ಯ ಪಿಕ್ನಿಕ್ ಗಾಗಿ ಸಮುದ್ರ ತೀರಕ್ಕೆ ಹೋಗಿದ್ದರು. ಆದರೆ ಅವರಲ್ಲಿಬ್ಬರು ನೀರುಪಾಲಾಗಿದ್ದಾರೆ. ಮೈಸೂರಿನ ಪೂಜಾ ಎಸ್ ರಾವ್ (21) ಮತ್ತು ಬೆಂಗಳೂರಿನ ಪಾವನಿ ಪಿ (22) ಮೃತಪಟ್ಟ ಯುವ ಟೆಕ್ಕಿಗಳು.

ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಅಲಿಬಾಗ್ ಸಮೀಪ ಅರಬ್ಬಿ ಸಮುದ್ರದ ತೀರದಲ್ಲಿ ನಿನ್ನೆ ಭಾನುವಾರ ಈ ದುರಂತ ಸಂಭವಿಸಿದೆ.

ಈ ಟೆಕ್ಕಿಗಳೆಲ್ಲ ಪೂನಾದ ಹಿಂಜೆವಾಡಿಯಲ್ಲಿರುವ IBMನಲ್ಲಿ ಉದ್ಯೋಗಿಗಳಾಗಿದ್ದರು. ಕಾಶೀದ್ ಬೀಚಿನಲ್ಲಿ ವಾರಾಂತ್ಯ ಮೋಜಿನಲ್ಲಿದ್ದಾಗ ಈ ದುರಂತ ಸಂಭವಿಸಿದೆ. ಆರು ಪುರುಷರು ಮತ್ತು 9 ಯುವತಿಯರು ಪಿಕ್ನಿಕ್ ಗೆಂದು ತೆರಳಿದ್ದರು.

ಪೊಲೀಸರು ಪ್ರಕಾರ ಭಾರಿ ಪ್ರಮಾಣದ ಅಲೆಗಳು ಬಂದು ಈ ಯುವತಿಯರನ್ನು ಸಮುದ್ರದೊಳಕ್ಕೆ ಎಳೆದುಕೊಂಡು ಹೋಗಿದೆ. ಪೂಜಾ ದೇಹ ಪತ್ತೆಯಾಗಿದೆ. ಆದರೆ ಬೆಂಗಳೂರಿನ ಪಾವನಿ ಪತ್ತೆ ಕಾರ್ಯದಲ್ಲಿ ಹೆಲಿಕಾಪ್ಟರ್ ಬಳಸಲಾಗಿದೆಯದರೂ ದೇಹ ಇನ್ನೂ ಸಿಕ್ಕಿಲ್ಲ. Coast Guard ಈಜುಗಾರರೂ ಪಾವನಿ ದೇಹ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.

'ಸಮುದ್ರ ತೀರದಲ್ಲಿ ನೀರು ಕಡಿಮೆಯಿದೆಯೆಂದು IBM ಸಾಫ್ಟ್ ವೇರ್ ಇಂಜಿನಿಯರ್ ಗಳು ಈಜಾಡಲು ಹೋಗಿದ್ದಾರೆ. ಆದರೆ ನೀರಿನ ಸೆಳೆತ ತೀವ್ರವಾಗಿ ಇಬ್ಬರು ಯುವತಿಯರು ಕೊಚ್ಚಿಹೋಗಿದ್ದಾರೆ. ತಂಡದಲ್ಲಿ ಇತರರು ನಮಗೆ ಸುದ್ದಿ ಮುಟ್ಟಿಸಿದರು. ತಕ್ಷಣ ನಾವು ಕಾರ್ಯಾಚರಣೆಗೆ ಮುಂದಾದೆವು. ಆದರೆ ಪೂಜಾ ದೇಹ ಮಾತ್ರ ಪತ್ತೆಯಾಯಿತು' ಎಂದು ಮುರದ್ ಪೊಲೀಸ್ ಠಾಣೆಯ ಎಎಸ್ಸೈ ರಮಣ್ ಮಹಾಲೆ ಅವರು ಹೇಳಿದ್ದಾರೆ.

'ನೀರಿನಲ್ಲಿ ಕೊಚ್ಚಿ ಹೋಗಿರುವ ಪಾವನಿ ಬದುಕುಳಿದಿರುವ ಸಾಧ್ಯತೆ ಕ್ಷೀಣವಾಗಿದೆ. ಪಾವನಿ ದೇಹ ಪತ್ತೆ ಶೋಧಕ್ಕಾಗಿ ಹೆಲಿಕಾಪ್ಟರ್ ಬಳಸುತ್ತಿದ್ದೇವೆ' ಎಂದು ಅವರು ವಿವರಿಸಿದ್ದಾರೆ.

English summary
A picnic at Kashid beach for a group of 15 IBM employees from the Hinjewadi branch of the company turned tragic on Sunday Sept 9. Pooja S Rao (21) from Mysore and Pavni P (22) from Bangalore drowned at Kashid beach in Raigad district, Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X