• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆತ್ಮಹತ್ಯಾ ನಗರಿ ಟ್ಯಾಗ್ ಬೆಂಗಳೂರಿಗೆ ಸ್ಥಿರ

By Mahesh
|
ಭಾರತದ ಮಾಹಿತಿ ತಂತ್ರಜ್ಞಾನ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು ಈಗ ಆತ್ಮಹತ್ಯಾ ರಾಜಧಾನಿ ಎಂಬ ಟ್ಯಾಗ್ ಹೊತ್ತು ಕೊಂಡು ತಿರುಗಾಡುತ್ತಿದೆ. ವಿಶ್ವ ಆತ್ಮಹತ್ಯಾ ವಿರೋಧಿ ದಿನಾಚರಣೆ (ಸೆ.10) ನಿಮಿತ್ತ ಬೆಂಗಳೂರಿನ ಶೋಚನೀಯ ಪರಿಸ್ಥಿತಿ ಬಗ್ಗೆ ಒಮ್ಮೆ ಕಣ್ಣು ಹಾಯಿಸೋಣ...

ಅತ್ಯಧಿಕ ಆತ್ಮಹತ್ಯೆ ದಾಖಲಾಗಿರುವ ನಾಲ್ಕು ಪ್ರಮುಖ ನಗರಗಳ ಪೈಕಿ ಬೆಂಗಳೂರು ಅಗ್ರಪಂಕ್ತಿಯಲ್ಲಿ ಕಾಣಿಸಿಕೊಂಡಿದೆ. ಅದರಲ್ಲೂ ಬೆಂಗಳೂರಿನ ಅನೇಕ ಆತ್ಮಹತ್ಯಾ ಪ್ರಕರಣಗಳು ವರದಿಯಾಗದೇ ಇರುವುದು ಪೊಲೀಸರಿಗೆ ತಲೆ ನೋವಾಗಿದೆ. ಅಂಕಿ ಅಂಶಗಳ ಪ್ರಕಾರ ಆತ್ಮಹತ್ಯಾ ಪ್ರಕರಣಗಳು ಸಂಖ್ಯೆ ಏರುಪೇರಾದರೂ ಪರಿಣಾಮ ಹಾಗೂ 'ಸೂಸೈಡ್ ಕಾಪಿಟಲ್' ಎಂಬ ಭೂತ ಮಾತ್ರ ಬೆಂಗಳೂರನ್ನು ಬಿಟ್ಟು ಇನ್ನೂ ತೊಲಗಿಲ್ಲ. [ವಾಸಿಸಲು ಅತ್ಯುತ್ತಮ ನಗರ]

ಬೆಂಗಳೂರಿನಲ್ಲಿ 2009ರಲ್ಲಿ 2,167 ಇದ್ದ ಆತ್ಮಹತ್ಯಾ ಪ್ರಕರಣಗಳು 2010ರಲ್ಲಿ 1,778, 2011 ರಲ್ಲಿ 1,717ಕ್ಕೆ ಇಳಿದಿದೆ ಎಂದು ಸಂಖ್ಯೆ ನೋಡಿ ಸಮಾಧಾನ ಪಟ್ಟಿಕೊಳ್ಳಬೇಕು ಅಷ್ಟೇ. ರಾಷ್ಟ್ರೀಯ ಕ್ರೈಂ ರೆಕಾರ್ಡ್ಸ್ ಬ್ಯೂರೋ(NCRB) ಮಾಹಿತಿ ಪ್ರಕಾರ ಬೆಂಗಳೂರಿನ ನಂತರ ಚೆನ್ನೈ(2438),ದೆಹಲಿ (1385), ಮುಂಬೈನಲ್ಲಿ 1162 ಪ್ರಕರಣಗಳು ದಾಖಲಾಗಿದೆ.

ಕಳೆದ ದಶಕದಲ್ಲಿ ಭಾರತದಲ್ಲಿ ಶೇ 23ರಷ್ಟು ಆತ್ಮಹತ್ಯಾ ಪ್ರಕರಣಗಳು ಹೆಚ್ಚಾಗಿದೆ. 2001ರಲ್ಲಿ ದೇಶದಲ್ಲಿ ಒಟ್ಟಾರೆ 108,593 ಇದ್ದ ಪ್ರಕರಣಗಳ ಸಂಖ್ಯೆ 2010ರಲ್ಲಿ 134,599 ಕ್ಕೇರಿದೆ. ದೇಶದ ಒಟ್ಟು ಆತ್ಮಹತ್ಯೆಯಲ್ಲಿ ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕರ್ನಾಟಕ ಶೇ 57.2 ರಷ್ಟು ಪಾಲು ಹೊಂದಿದೆ.

ಬೆಂಗಳೂರಿನ National Institute of Mental Health and Neurosciences(ನಿಮ್ಹಾನ್ಸ್) ಸಮೀಕ್ಷೆ ಪ್ರಕಾರ ನಗರದಲ್ಲಿ ದಾಖಲಾದ ಪ್ರಕರಣಗಳಲ್ಲಿ 10ರಿಂದ 14 ವರ್ಷ ವಯೋಮಿತಿಯೊಳಗಿನವರು ಶೇ10ರಷ್ಟಿದ್ದಾರೆ ಎಂಬುದು ಆತಂಕಕಾರಿಯಾಗಿದೆ.

ಆತ್ಮಹತ್ಯೆಗೆ ಏನು ಕಾರಣ: ಬೆಂಗಳೂರಿಗರಲ್ಲಿ ಆತ್ಮಹತ್ಯೆ ಹೆಚ್ಚಾಗಲು ನಾನಾ ಕಾರಣಗಳು ಕಂಡು ಬಂದರೂ, ಮಾನಸಿಕ ಒತ್ತಡ, ಉದ್ಯೋಗದಲ್ಲಿ ಸ್ಪರ್ಧಾತ್ಮಕತೆ, ಆರ್ಥಿಕ ಸಂಕಷ್ಟವೇ ಮೂಲ ಕಾರಣ ಎಂದು ನಿಮ್ಹಾನ್ ಹೇಳಿದೆ.

ಕುಟುಂಬಕ್ಕೆ ಸೂಚನೆಯೂ ಸಿಗದಂತೆ ಎಲ್ಲಾ ಚೆನ್ನಾಗಿದ್ದವರು ಇದ್ದಕ್ಕಿದ್ದಂತೆ ಯಾವುದೋ ಸಣ್ಣ ಮಾನಸಿಕ ಒತ್ತಡ ಸಹಿಸಲಾಗದೆ ಆತ್ಮಹತ್ಯ್ಗೆ ಶರಣಾಗುವವರ ಸಂಖ್ಯೆ ಶೇ 57ರಷ್ಟಿರುವುದು ಭಯ ಹುಟ್ಟಿಸುತ್ತದೆ.

ಕೆಲಸದ ಒತ್ತಡದಿಂದ ಸಂಸಾರದ ಸಣ್ಣ ಸಮಸ್ಯೆಗೆ ಪರಿಹಾರ ಸಿಗದೆ ಟೆಕ್ಕಿಗಳು ಸಾಯುತ್ತಿದ್ದರೆ, ಅಪ್ಪ ಅಮ್ಮ ಓದು ಎಂದು ಬೈದರು ಎಂಬ ಕೊರಗಿನಲ್ಲಿ ವಿದ್ಯಾರ್ಥಿಗಳು ಸಾವನ್ನಪ್ಪುತ್ತಿರುವುದು ಬೆಂಗಳೂರಿನ ಪಾಲಿಗೆ ಅರಿಗಿಸಿಕೊಳ್ಳದ ದುಃಖವಾಗಿದೆ.

ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿಗರಲ್ಲಿ ಮಾನಸಿಕ ಒತ್ತಡ ಹೆಚ್ಚಾಗಿದೆ. ಐಟಿ ವೃತ್ತಿಪರರಲ್ಲಂತೂ ಇದು ತುಂಬಾ ಹೆಚ್ಚಾಗಿದೆ. ಸಾಮಾಜಿಕ ಹಾಗೂ ಮಾನಸಿಕ ಭದ್ರತೆ ಇಲ್ಲದೆ ಅನೇಕ ಇಂಜಿನಿಯರ್ ಗಳು, ಟೆಕ್ಕಿಗಳು, ಉನ್ನತ ವ್ಯಾಸಂಗ ಮಾಡಿದ ವಿದ್ಯಾವಂತರೇ ದುಡುಕಿನ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕೌನ್ಸಿಲರ್ ಮಂಜುಳಾ ರಾಮನ್ ಹೇಳಿದ್ದಾರೆ.

ಪರಿಹಾರ ಏನು?: 2002ರಲ್ಲೇ ಈ ರೀತಿ ಮಾನಸಿಕ ಒತ್ತಡ ನಿವಾರಣೆಗಾಗಿ ಆತ್ಮಹತ್ಯೆ ಯೋಚನೆ ನಿರ್ಮೂಲನೆಗಾಗಿ ಬೆಂಗಳೂರಿನಲ್ಲಿ SAHAI ಸಹಾಯವಾಣಿ ಆರಂಭಿಸಲಾಗಿದೆ. ನಿಮ್ಹಾನ್ಸ್ ಸಂಸ್ಥೆ ಸಲಹೆ ಮೇರೆಗೆ ಕಾರ್ಯ ನಿರ್ವಹಿಸುವ ಈ ಸಹಾಯವಾಣಿಗೆ ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ಸಹಾಯಕವಾಗಿ ನಿಂತಿದೆ. SAHAI ಸಹಾಯವಾಣಿ ಇಂತಿದೆ: 080 - 25497777

ಏಕಾಂಗಿತನ, ಕೆಲಸದ ಒತ್ತಡ, ಆರ್ಥಿಕ-ಮಾನಸಿಕ ಭದ್ರತೆ, ಮಾನಸಿಕ ಖಿನ್ನತೆ ಮುಂತಾದ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ನೀಡುವತ್ತ ನಮ್ಮ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಬೆಂಗಳೂರಿಗೆ ಆತ್ಮಹತ್ಯಾ ರಾಜಧಾನಿ ಎಂಬ ಟ್ಯಾಗ್ ಆದಷ್ಟು ಬೇಗ ಕಳಚಲಿ ಎಂದು SAHAI ಸಂಸ್ಥೆ ವಕ್ತಾರರು ಆಶಿಸಿದ್ದಾರೆ. SAHAI ವೆಬ್ ತಾಣಕ್ಕೆ ಕ್ಲಿಕ್ಕಿಸಿ

ಆತ್ಮಹತ್ಯೆ ಮಹಾ ಪಾಪ ಎನ್ನುವವರು ಮಾನಸಿಕ ಒತ್ತಡಕ್ಕೆ ಸಿಲುಕಿದವರನ್ನು SAHAI ಕಚೇರಿ ಅಥವಾ ನಿಮ್ಹಾನ್ಸ್ ಗೆ ಕರೆದುಕೊಂಡು ಸೂಕ್ತ ಚಿಕಿತ್ಸೆ ನೀಡಿದರೆ ಉತ್ತಮ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಆತ್ಮಹತ್ಯೆ ಸುದ್ದಿಗಳುView All

English summary
High suicide rate are baffling. India's technology hub is a stressed out city. With around 9.4% of total suicide in the country being accounted to Karnataka and most of which occurs in Bangalore, India's IT hub-Bangalore has once again gained the dubious distinction of being the suicide capital of India.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more