ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಸ್ ಕಂಪನಿ ಖರೀದಿಸಿ ಸ್ಟ್ರಾಂಗ್ ಆದ ಇನ್ಫೋಸಿಸ್

By Mahesh
|
Google Oneindia Kannada News

Infosys acquires Swiss-based Lodestone
ಬೆಂಗಳೂರು, ಸೆ.10: ಸ್ವಿಸ್ ಮೂಲದ ಜಾಗತಿಕ ಮ್ಯಾನೇಜ್ಮೆಂಟ್ ಕನ್ಸಲ್ಟೆನ್ಸಿ ಸಂಸ್ಥೆ ಲೊಡೆಸ್ಟೋನ್ ಹೋಲ್ಡಿಂಗ್ ಎಜಿ ಖರೀದಿಸುವುದಾಗಿ ಐಟಿ ದಿಗ್ಗಜ ಇನ್ಫೋಸಿಸ್ ಸೋಮವಾರ(ಸೆ.10) ಪ್ರಕಟಿಸಿದೆ.

ಬಿಎಸ್ ಇಗೆ ನೀಡಿರುವ ಹೇಳಿಕೆ ಪ್ರಕಾರ ಇನ್ಫೋಸಿಸ್ ಸಂಸ್ಥೆ ಸ್ವಿಸ್ ಮೂಲದ ಸಂಸ್ಥೆಯನ್ನು ಸುಮಾರು 350 ಮಿಲಿಯನ್ ಡಾಲರ್ ಮೊತ್ತ ನೀಡಿ ಖರೀದಿಸುತ್ತಿದೆ. [ಷೇರು ಮಾರುಕಟ್ಟೆಯಲ್ಲಿ ಸೋಮವಾರ ಇನ್ಫೋಸಿಸ್ ನದ್ದೇ ಸದ್ದು ಇನ್ಫಿ ಷೇರು ಏರಿಳಿತ ಸುದ್ದಿ ನಿರೀಕ್ಷಿಸಿ...]

ಜಗತ್ತಿನೆಲ್ಲೆಡೆ ಸುಮಾರು 200 ಗ್ರಾಹಕರನ್ನು ಹೊಂದಿರುವ ಲೋಡ್ ಸ್ಟೋನ್ ಕಂಪನಿ ಉತ್ಪಾದನೆ, ಆಟೋಮೋಟಿವ್, ಜೀವ ವಿಜ್ಞಾನ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿದೆ.

ಈ ಸಂಸ್ಥೆ ವೀಲೀನ ನಂತರ ಇನ್ಫೋಸಿಸ್ ಸಂಸ್ಥೆಯ 700ಕ್ಕೂ ಗ್ರಾಹಕರ ಪಟ್ಟಿಗೆ ಇನ್ನು 200 ಗ್ರಾಹಕರು ಸೇರುತ್ತಾರೆ.

ಸ್ವಿಸ್ ಕಂಪನಿಗೆ ಸೇರಿದ SAPಯಲ್ಲಿ ಪರಿಣತಿ ಪಡೆದ 750ಕ್ಕೂ ಅಧಿಕ ಉದ್ಯೋಗಿಗಳ ಜೊತೆಗೆ 850 ಉದ್ಯೋಗಿಗಳು ಇನ್ಫೋಸಿಸ್ ಕುಟುಂಬಕ್ಕೆ ಸೇರಲಿದ್ದಾರೆ.

ಖರೀದಿ ನಂತರ SAP ಕಾರ್ಯಕ್ರಮಗಳತ್ತ ಗಮನ ಹರಿಸಲಿರುವ ಇನ್ಫೋಸಿಸ್ ಸಂಸ್ಥೆ ಸುಮಾರು 1 ಬಿಲಿಯನ್ ಡಾಲರ್ ಆದಾಯ ಉತ್ಪನ್ನದ ಗುರಿ ಹೊಂದಿದೆ. SAP ಕನ್ಸಲ್ಟೆಂಟ್ ಆಗಿ ಇನ್ಫೋಸಿಸ್ ಜಾಗತಿಕವಾಗಿ ಇನ್ನಷ್ಟು ಎತ್ತರಕ್ಕೇರಲಿದೆ.

ವಿಶೇಷವಾಗಿ ಯುರೋಪ್, ಲ್ಯಾಟಿನ್ ಅಮೆರಿಕ, ಏಷ್ಯಾ ಫೆಸಿಫಿಕ್ ಪ್ರದೇಶಗಳಲ್ಲಿ ಇನ್ಫೋಸಿಸ್ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲಿದೆ.

ಖರೀದಿ ಉದ್ದೇಶ ಏನು?: ಇತರೆ ಹೊರಗುತ್ತಿಗೆ ಕಂಪನಿಗಳಂತೆ ಇನ್ಫೋಸಿಸ್ ಕೂಡಾ ಗುತ್ತಿಗೆ(ಸಮಯ ಹಾಗೂ ಸರಕು) ಆಧಾರಿತ ಔದ್ಯೋಗಿಕ ಶೈಲಿಯನ್ನು ಬದಲಿಸಲು ಯತ್ನಿಸುತ್ತಿದೆ. ಕನ್ಸಲ್ಟೆನ್ಸಿ, ತಂತ್ರಜ್ಞಾನ ವಿಸ್ತರಣೆ ಹಾಗೂ ಉತ್ಪನ್ನಗಳತ್ತ ಗಮನ ಹರಿಸದೆ ಉದ್ಯೋಗಿಗಳು ನಿಗದಿತ ಅವಧಿಯಲ್ಲಿ ನಿಗದಿತ ಕೆಲಸ ಮಾಡುತ್ತಿರುವುದು ಸಂಸ್ಥೆಗೆ ಹೊರೆಯಾಗುತ್ತಿದೆ. ಕ್ಲೌಡ್ ಕಂಪ್ಯೂಟಿಂಗ್, ಸಾಮಾಜಿಕ ಮಾಧ್ಯಮ ಹಾಗೂ ಮೊಬೈಲ್ ಕ್ಷೇತ್ರಕ್ಕೆ ತ್ವರಿತವಾಗಿ ಹೊಂದಿಕೊಂಡು ಸೇವೆ ನೀಡುವತ್ತ ಇನ್ಫೋಸಿಸ್ ಯೋಚಿಸಿದೆ.

ಜೂ.30ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ಯುಎಸ್ ಹಾಗೂ ಯುರೋಪ್ ನಲ್ಲಿ ಹೆಚ್ಚಿನ ಹೂಡಿಕೆ ಮಾಡದ ಇನ್ಫೋಸಿಸ್ ಸಂಸ್ಥೆ ಡಾಲರ್ ಎಣಿಕೆಯಂತೆ ಶೇ 5 ರಷ್ಟು ಆದಾಯ ಕೂಡಾ ಕಳೆದುಕೊಂಡಿತ್ತು. ಆದರೆ, ರುಪಾಯಿ ಮೌಲ್ಯದಂತೆ ಸಂಸ್ಥೆ ಸುಸ್ಥಿತಿ ತಲುಪಿತ್ತು.

ಖರೀದಿ ಬಗ್ಗೆ ಮಾತನಾಡಿದ ಇನ್ಫೋಸಿಸ್ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್ ಡಿ ಶಿಬುಲಾಲ್ 'ಇನ್ಫೋಸಿಸ್ 3.0 ಯೋಜನೆಯಂತೆ ನಮ್ಮ ಕನ್ಸಲ್ಟೆನ್ಸಿ ಹಾಗೂ ಸಿಸ್ಟಮ್ ಇಂಟ್ರೀಗೇಷನ್ ಬಿಸಿನೆಸ್ ಶಕ್ತಿಯುತಗೊಳಿಸಲು ಈ ಖರೀದಿಗೆ ಮುಂದಾಗಬೇಕಾಯಿತು. ಖರೀದಿ ಒಪ್ಪಂದ ಪೂರ್ಣಗೊಳ್ಳಲು ಅಕ್ಟೋಬರ್ 2012 ತನಕ ಕಾಯಬೇಕಿದೆ ಎಂದಿದ್ದಾರೆ.

ಹೊಸ ಹೊಸ ಕಂಪನಿಗಳ ಖರೀದಿಗೆ ಮುಂದಾಗಿರುವ ಇನ್ಫೋಸಿಸ್ ಸಂಸ್ಥೆ ಬಳಿ ಸದ್ಯಕ್ಕೆ $3.24 ಬಿಲಿಯನ್ (ರು 18,031 ಕೋಟಿ) ಅಪತ್ ಧನವಿದೆ.(ಜೂ.30, 2012)

English summary
Infosys, a global leader in consulting and technology today announced that it will acquire Lodestone Holding AG, a leading global management consultancy firm for an aggregate enterprise value of $350 million.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X